ದ.ಕ. : ಜಿಲ್ಲಾ ಪಂಚಾಯತ್ ಘಟಕದಲ್ಲಿ ಹುದ್ದೆ, ಅರ್ಜಿ ಸಲ್ಲಿಸಲು ಜುಲೈ 15 ಕೊನೆಯ ದಿನಾಂಕ!

ಸ್ವಚ್ಛ ಭಾರತ್ ಮಿಷನ್ ಕಾರ್ಯವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಮಾನ್ಯ ಆಯುಕ್ತರು, ಗ್ರಾಮೀಣ ಕುಡಿಯುವ ನೀರು, ಮತ್ತು ನೈರ್ಮಲ್ಯ ಇಲಾಖೆ, ಬೆಂಗಳೂರು, ಈ ಕೆಳಕಂಡ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ.

 

ಹುದ್ದೆ : ಘನ ತ್ಯಾಜ್ಯ ನಿರ್ವಹಣಾ ಜಿಲ್ಲಾ ( SLVM) ಸಮಾಲೋಚಕರು

ಹುದ್ದೆ ಸಂಖ್ಯೆ : 01

ಅನುಭವ : ಕನಿಷ್ಠ ಮೂರು ವರ್ಷಗಳ ಅನುಭವ ಹಾಗೂ ನೀರು ಮತ್ತು ನೈರ್ಮಲ್ಯ/ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದವರಿಗೆ ಆದ್ಯತೆ

ಮಾಸಿಕ ವೇತನ : ರೂ.25,000/-

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಸಂಖ್ಯೆಯನ್ನು ಸಂಪರ್ಕಿಸಿ : 0824-2451222

ಭರ್ತಿ ಮಾಡಿದ ಅರ್ಜಿಯನ್ನು ಅಭ್ಯರ್ಥಿಗಳು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಜಿಲ್ಲಾ ನೆರವು ಘಟಕಕ್ಕೆ ದಿನಾಂಕ 15/07/2022 ರೊಳಗೆ ಸಲ್ಲಿಸುವುದು.

Leave A Reply

Your email address will not be published.