ವಿಶ್ವದ ದುಬಾರಿ ಬೆಲೆಯ ಮಾವಿನ ಹಣ್ಣಿನ ಫೋಟೋ ವೈರಲ್- ಇದರ ವಿಶೇಷತೆ ಏನು ಗೊತ್ತಾ!
ನವದೆಹಲಿ : ಸಾಮಾನ್ಯವಾಗಿ ಮಾವಿನ ಹಣ್ಣು ಎಂದರೆ ಎಲ್ಲರಿಗೂ ಇಷ್ಟ ಆಗುತ್ತೆ. ತೊತಾಪುರಿ, ಬಾದಾಮಿ, ರಸಾಪುರಿ, ಸೆಂದೋರ, ಇತರೆ ತಳಿಯ ಮಾವಿನ ಹಣ್ಣುಗಳುನ್ನು ನೀವು ಕೇಳಿರಬಹುದು.
ಆದರೆ ಇದೀಗ ಕೈಗಾರಿಕೋದ್ಯಮಿ ಹರ್ಷ ಗೊಯೆಂಕ ಅವರು ಅತ್ಯಂತ ದುಬಾರಿ ಬೆಲೆಯ ತಳಿಯ ಮಾವಿನ ಹಣ್ಣಿನ ಫೋಟೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸಧ್ಯ ಈ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ.
ಹೌದು. ಜಪಾನ್ ನಲ್ಲಿ ಮಿಯಾಜಾಕಿ ಎಂಬ ಮಾವಿನ ತಳಿಯನ್ನು ಬೆಳೆಸಲಾಗುತ್ತಿದೆ. ಭಾರತದಲ್ಲಿ ಈ ಮಾವಿನ ಹಣ್ಣು ಬೆಳೆಸುವುದು ಬಹಳ ಅಪರೂಪವಾಗಿದೆ.ಹಾಗಾಗಿ ಈ ಮಾವಿನ ಹಣ್ಣಿನ ಬೆಲೆ ಹೆಚ್ಚಿಸಬೇಕಾಗಿ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ. ರೂಬಿ ಬಣ್ಣದ ಜಪಾನ್ ಮಿಯಾಜಾಕಿ ತಳಿಯ ಈ ಮಾವು ವಿಶ್ವದ ಅತ್ಯಂತ ದುಬಾರಿ ಬೆಲೆಯ ಮಾವಿನ ಹಣ್ಣೆಂದು ಹೇಳಲಾಗಿದೆ. ಇದಕ್ಕೆ ಪ್ರತಿ ಒಂದು ಕೆಜಿಗೆ 2.70 ಲಕ್ಷ ರೂಪಾಯಿ ಆಗಿದೆ.
ಮಧ್ಯಪ್ರದೇಶದ ಜಬಲ್ಪುರದ ರೈತ ಈ ಹಣ್ಣಿನ ಎರಡು ಮರಗಳನ್ನು ಬೆಳೆಸಿದ್ದು. ಇದರ ರಕ್ಷಣೆಗೆ ಮೂರು ಭದ್ರತ ಸಿಬ್ಬಂದಿ, 6 ನಾಯಿಗಳನ್ನು ಸಾಕಿದ್ದಾರೆ ಎನ್ನಲಾಗಿದೆ. ಇದು ವಿಶ್ವದ ಅತೀ ದುಬಾರಿ ಹಣ್ಣು ಆಗಿದ್ದು, ಕಳೆದ ವರ್ಷ ಕೂಡ ಈ ಹಣ್ಣು ಕೆಜಿಗೆ 2.70 ಲಕ್ಷ ರೂಪಾಯಿಗೆ ಮಾರಾಟವಾಗಿತ್ತು.