ಬೆಳ್ತಂಗಡಿ : ಪ್ರಸನ್ನ ಕಾಲೇಜು ವಿದ್ಯಾರ್ಥಿ ಸಾವು!

ಬೆಳ್ತಂಗಡಿ : ತಾಲೂಕಿನ ಪ್ರಸನ್ನ ಕಾಲೇಜು ವಿದ್ಯಾರ್ಥಿ ಓರ್ವ ರಕ್ತದ ಒತ್ತಡದಿಂದ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದಿದ್ದಾರೆ.

 

ಮೃತರು ಬಾರ್ಯ ಗ್ರಾಮದ ಗಿರಿಗುಡ್ಡೆ ಸುಶೀಲ ಎಂಬುವವರ ಮಗ ಸುಮಂತ್ ಮಡಿವಾಳ(20).

ಇವರು ಅನೇಕ ದಿನಗಳಿಂದ ಮಂಗಳೂರಿನ ಫಸ್ಟ್ ನೀರೋ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾದ ಘಟನೆ ವರದಿಯಾಗಿದೆ.

ಒಂದು ವಾರದ ಹಿಂದೆ ಕಾಲೇಜಿನಲ್ಲಿ ಬಿದ್ದ ಇವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಯಿತು. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ರವಾಣಿಸಲಾಗಿತ್ತು. ಇವರು ಬೆಳ್ತಂಗಡಿಯ ಪ್ರಸನ್ನ ಕಾಲೇಜಿನ ಐಟಿಐ ವಿದ್ಯಾರ್ಥಿ ಎಂದು ತಿಳಿದುಬಂದಿದೆ.

Leave A Reply

Your email address will not be published.