ಪ್ರಧಾನಿ ಆಂಧ್ರ ಪ್ರವಾಸದಲ್ಲಿ ಭದ್ರತಾಲೋಪ : ಮೋದಿಯಿದ್ದ ಚಾಪರ್ ಬಳಿ ಬಲೂನ್ ಹಾರಾಟ

ವಿಜಯವಾಡ : ಆಂಧ್ರ ಪ್ರದೇಶಕ್ಕೆ ಪ್ರವಾಸ ಕೈಗೊಂಡಿರುವ ಪ್ರಧಾನಿ ನಿನ್ನೆ ವಿಜಯವಾಡಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭದ್ರತಾಲೋಪ ಸಂಭವಿಸಿದೆ ಎನ್ನಲಾಗಿದೆ.

 

ಪ್ರಧಾನಿ ಇದ್ದ ಹೆಲಿ ಕ್ಯಾಪ್ಟರ್ ಬಳಿ ಕಪ್ಪು ಬಣ್ಣದ ಬಲೂನ್ ಗಳ ಹಾರಾಟ ಕಂಡು ಬಂದಿದೆ.

ಪ್ರಧಾನಿ ಮೋದಿ ಆಗಮನವನ್ನು ವಿರೋಧಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಈ ರೀತಿ ಬಲೂನ್ ಹಾರಿಸಿದ್ದಾರೆ ಎನ್ನಲಾಗಿದೆ. ಆದರೆ ಪ್ರಧಾನಿ ಬರುವ ಹೆಲಿಕ್ಯಾಪ್ಟರ್ ಬಳಿ ಈ ರೀತಿ ಕೃತ್ಯ ನಡೆಸಿದ್ದು ಅಪರಾಧ ಎಂಬ ಕಾರಣಕ್ಕೆ ಅವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

Leave A Reply

Your email address will not be published.