ಜಗತ್ತಿನ ಮೊದಲ ಮೊಬೈಲ್ ಫೋನ್ ಆವಿಷ್ಕರಿಸಿದ ವ್ಯಕ್ತಿ ದಿನಕ್ಕೆ ಎಷ್ಟು ಸಮಯ ಮೊಬೈಲ್ ಬಳಸ್ತಾರೆ ಗೊತ್ತಾ ?
ಇತ್ತೀಚೆಗೆ ಈ ಜಗತ್ತನ್ನು ಹೆಚ್ಚು ಆವರಿಸಿರುವ ಮುಖ್ಯವಾದ ವಸ್ತು ಏನೆಂದರೆ ಜಂಗಮವಾಣಿ ಎಂದೇ ಹೇಳಬಹುದು. ಅದೇ ಇಂಗ್ಲೀಷ್ ನಲ್ಲಿ ಹೇಳುವುದಾದರೆ ಮೊಬೈಲ್ ಫೋನ್. ಹೌದು, ಇತ್ತೀಚಿನ ಯುವ ಪೀಳಿಗೆ ಎಲ್ಲಾ ಬಿಟ್ಟರೂ ಮೊಬೈಲ್ ಫೋನ್ ಬಿಡಲ್ಲ. ಊಟ ಬಿಟ್ಟರೂ ಬಿಡಬಹುದು ಆದರೆ ಫೋನ್, ಸಾಧ್ಯವೇ ಇಲ್ಲ. ಅಷ್ಟೊಂದು ಅವಲಂಬಿತರಾಗಿದ್ದಾರೆ ಜನ ಈ ಫೋನ್ ಮೇಲೆ. ಮನುಷ್ಯನ ಒಂದು ಅಂಗ ಅಂದರೆ ತಪ್ಪಾಗಲಾರದೇನೋ? ಅಲ್ವಾ…
ಆದರೆ ಈ ಸ್ಮಾರ್ಟ್ಫೋನ್ ತಯಾರಿಸಿದ ಜನಕ ಅದನ್ನು ಎಷ್ಟು ಬಳಸುತ್ತಾರೆ ಅನ್ನೋ ವಿಷಯ ನಿಮಗೆ ಗೊತ್ತಾ?
ಈ ಸೆಲ್ ಫೋನ್ ಅಥವಾ ಮೊಬೈಲ್ ಫೋನನ್ನು ಕಂಡುಹಿಡಿದವರು ಮಾರ್ಟಿನ್ ಕೂಪರ್. ಒಂದು ದಿನದಲ್ಲಿ ತಾವು ಎಷ್ಟು ಸಮಯ ಮೊಬೈಲ್ ಫೋನ್ ಬಳಸ್ತೇನೆ ಎಂಬುದನ್ನು ಅವರೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
1973ರಲ್ಲಿ ಮಾರ್ಟಿನ್ ಕೂಪರ್ ಮೊಬೈಲ್ ಅವಿಷ್ಕರಿಸಿದ್ದರು. ಮಾರ್ಟಿನ್ ಕೂಪರ್ ಅವರಿಗೆ ಈಗ 93 ವರ್ಷ. ಜಗತ್ತಿನ ಎಲ್ಲಾ ಕಡೆ ಸ್ಮಾರ್ಟ್ ಫೋನ್ ಹುಚ್ಚು ಹಿಡಿಸಿರೋ ಇವರು ದಿನದ 24 ಗಂಟೆಗಳಲ್ಲಿ ಶೇ.5ಕ್ಕಿಂತಲೂ ಕಡಿಮೆ ಸಮಯವನ್ನು ಮೊಬೈಲ್ನಲ್ಲಿ ಕಳೆಯುತ್ತಾರೆ. ಫೋನ್ ಬಳಕೆಯನ್ನು ಕಡಿಮೆ ಮಾಡಿ ವರ್ಚುವಲ್ ಜೀವನವನ್ನು ಬಿಟ್ಟು ವಾಸ್ತವದಲ್ಲಿ ಬದುಕಬೇಕೆಂದು ಎಲ್ಲರಿಗೂ ಸಲಹೆ ನೀಡಿದ್ದಾರೆ.
ಸ್ಮಾರ್ಟ್ ಫೋನ್ ಹೊರತಾಗಿಯೂ ಪ್ರಪಂಚವಿದೆ ಅನ್ನೋದು ಅವರ ಭಾವನೆ. ಏಪ್ರಿಲ್ 3, 1973 ರಂದು ಮಾರ್ಟಿನ್ ಕೂಪರ್ ಪ್ರಪಂಚದ ಮೊದಲ ಸೆಲ್ ಫೋನ್ ಕರೆಯನ್ನು ಸ್ವೀಕರಿಸಿದರು. ಈ ಮೊಬೈಲ್ ಅನ್ನು ಆವಿಷ್ಕರಿಸಲು ಮಾರ್ಟಿನ್ ಕೇವಲ ಮೂರು ತಿಂಗಳುಗಳನ್ನು ತೆಗೆದುಕೊಂಡರು. ಈ ಫೋನ್ ಹೆಸರು Motorola DynaTAC 8000X . ಇದಕ್ಕಾಗಿ Motorola ಕಂಪನಿ 100 ಮಿಲಿಯನ್ ಡಾಲರ್ ಹೂಡಿಕೆ ಮಾಡಿತ್ತು.