ಬೆಂಗಳೂರು: ಇತ್ತೀಚಿಗೆ ಇನ್ಸ್ಟಾಗ್ರಾಮ್ ರೀಲ್ಸ್ ಮಾಡೋದು ಟ್ರೆಂಡ್ ಆಗಿ ಬಿಟ್ಟಿದೆ. ರಸ್ತೆ, ವಾಹನ ಎಂದೂ ನೋಡದೆ ಕುಣಿದು ಕುಪ್ಪಳಿಸೋರೆ ಹೆಚ್ಚು. ತಮ್ಮ ರೀಲ್ಸ್ ಹುಚ್ಚಿನಿಂದ ಪ್ರಾಣವನ್ನೇ ಲೆಕ್ಕಿಸದೆ ನಿಯಮ ಉಲ್ಲಂಘನೆಗಳು ನಡೆಯುತ್ತಿದೆ. ಆದರೆ, ರೀಲ್ಸ್ ಮಾಡೋರ ಮೇಲೆ ಈಗ ಖಾಕಿ ಕೆಂಗಣ್ಣು ಇಟ್ಟಿದೆ.
ಹೌದು. ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡಿಕೊಂಡು ರೀಲ್ಸ್ ಮಾಡುತ್ತಿದ್ದು, ಇಂತವರ ವಿಡಿಯೋ ಆಧರಿಸಿ ಇದೀಗ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಬೈಕ್ ಮಾಲೀಕರು ಮತ್ತು ಇತರ ಆರು ಜನರು ಹೆಲ್ಮೆಟ್ ಹಾಕದೆ ಬೈಕ್ ಸವಾರಿ ಮಾಡಿಕೊಂಡು ರೀಲ್ಸ್ ಗಳನ್ನು ಚಿತ್ರೀಕರಿಸಿದರು. ಇವರಿಗೆ ನಗರ ಪೊಲೀಸರು 17,500 ರೂ.ಗಳ ದಂಡ ವಿಧಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಸವಾರ ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಗಳಲ್ಲಿ ರೀಲ್ಸ್ ಗಳನ್ನು ಪೋಸ್ಟ್ ಮಾಡಿದ ನಂತರ, ವೀಡಿಯೊವನ್ನು ಆಧರಿಸಿ ಈಗ ಪೊಲೀಸರು ದಂಡ ವಿಧಿಸಿದ್ದಾರೆ.
You must log in to post a comment.