ಕರ್ನಾಟಕದ ಸಿನಿ ಶೆಟ್ಟಿಗೆ ಒಲಿದ ‘ಫೆಮಿನಾ ಮಿಸ್ ಇಂಡಿಯಾ’ ಕಿರೀಟ!

ಮುಂಬೈ (ಮಹಾರಾಷ್ಟ್ರ): ಭಾನುವಾರ ಇಲ್ಲಿ ನಡೆದ ವಿಎಲ್‌ಸಿಸಿ 58 ನೇ ಫೆಮಿನಾ ಮಿಸ್ ಇಂಡಿಯಾ ಗ್ರ್ಯಾಂಡ್ ಫಿನಾಲೆಯಲ್ಲಿ ಕರ್ನಾಟಕದ ಸಿನಿ ಶೆಟ್ಟಿ ಅವರು ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2022’ ಪ್ರಶಸ್ತಿ ಗೆದ್ದರು.
ಫೆಮಿನಾ ಮಿಸ್ ಇಂಡಿಯಾ 2022 ಕಿರೀಟ ಕರ್ನಾಟಕಕ್ಕೆ ಒಲಿದಿದೆ. ಹೌದು ಕರ್ನಾಟಕ ಮೂಲದ 21 ವರ್ಷದ ಸಿನಿ ಶೆಟ್ಟಿಗೆ ಈ ಕಿರೀಟ ಒಲಿದಿದೆ. ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್ನಲ್ಲಿ ಜುಲೈ 03 ರಂದು ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ನಡೆಯಿತು.

 

ಸಿನಿ ಶೆಟ್ಟಿ ವಿಜೇತರಾಗಿ ಹೊರಹೊಮ್ಮುತ್ತಿದ್ದಂತೆ, ರಾಜಸ್ಥಾನದ ರುಬಲ್ ಶೇಖಾವತ್ ರನ್ನರ್ ಅಪ್ ಸ್ಥಾನ ಪಡೆದುಕೊಂಡರು. ಮತ್ತು ಉತ್ತರ ಪ್ರದೇಶವನ್ನು ಪ್ರತಿನಿಧಿಸಿದ ಶಿನಾತಾ ಚೌಹಾಣ್ ಈ ವರ್ಷ ಎರಡನೇ ರನ್ನರ್ ಅಪ್ ಆದರು.

ಫೆಮಿನಾ ಮಿಸ್ ಇಂಡಿಯಾ 2021 ಮಾನಸ ವಾರಣಾಸಿ ಮಿಸ್ ಇಂಡಿಯಾ 2022 ಸಿನಿ ಶೆಟ್ಟಿಗೆ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಸಿನಿ ಶೆಟ್ಟಿ, ರುಬಲ್ ಶೇಖಾವತ್, ಶಿನಾತಾ ಚೌಹಾಣ್, ಪ್ರಜ್ಞಾ ಅಯ್ಯಗರಿ ಮತ್ತು ಗಾರ್ಗಿ ನಂದಿ ಮೊದಲ ಐದು ಸ್ಥಾನಗಳಲ್ಲಿದ್ದಾರೆ.

ಸಿನಿ ಶೆಟ್ಟಿ ಅವರು ಮುಂಬೈನಲ್ಲಿ ಜನಿಸಿದವರು. ಆದರೆ ಕರ್ನಾಟಕ ಮೂಲದವರು ಮತ್ತು ಪ್ರಸ್ತುತ ಚಾರ್ಟಡ್ ಫೈನಾನ್ಸಿಯಲ್ ಅನಾಲಿಸ್ಟ್ (ಸಿಎಫ್‌ಎ) ವೃತ್ತಿಪರ ಕೋರ್ಸ್ ಮಾಡುತ್ತಿದ್ದಾರೆ. ಆದಾಗ್ಯೂ, ಅವಳ ಮೊದಲ ಪ್ರೀತಿ ನೃತ್ಯ. ತನ್ನ ನಾಲ್ಕನೇ ವಯಸ್ಸಿನಲ್ಲಿ ನೃತ್ಯ ಮಾಡಲು ಪ್ರಾರಂಭಿಸಿದ ಸಿನಿ ಶೆಟ್ಟಿ ಅವರು ಹದಿನಾಲ್ಕು ವರ್ಷದವಳಿದ್ದಾಗ ತನ್ನ ಅರಂಗೇಟ್ರಂ ಮತ್ತು ಭರತನಾಟ್ಯವನ್ನು ಪೂರ್ಣಗೊಳಿಸಿದ್ದಾರೆ.

ದಕ್ಷಿಣ ಕನ್ನಡ ಮೂಲದ 21 ವರ್ಷದ ಸಿನಿ ಶೆಟ್ಟಿ ಮುಂಬೈನಲ್ಲೇ ಹುಟ್ಟಿ ಬೆಳೆದವರು. ತಮ್ಮ ವ್ಯಾಸಂಗವನ್ನು ಕೂಡಾ ಅಲ್ಲೇ ಮುಗಿಸಿದ್ದಾರೆ. ಭರತ ನಾಟ್ಯ ಕಲಾವಿದೆಯಾಗಿರುವ ಸಿನಿ ಶೆಟ್ಟಿ ಹಲವು ಜಾಹೀರಾತುಗಳಲ್ಲಿ ಮಾಡೆಲ್ ಆಗಿ ಕಾಣಿಸಿಕೊಂಡಿದ್ದರು.

ನೇಹಾ ಧೂಪಿಯಾ, ಕೃತಿ ಸನೋನ್, ಮನೀಶ್ ಪಾಲ್, ರಾಜುಮಾರ್ ರಾವ್, ಡಿನೋ ಮೋರಿಯಾ, ಮಿಥಾಲಿ ರಾಜ್, ಮಲೈಕಾ ಅರೋರಾ ಮತ್ತು ಇತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೃತಿ ಸನೋನ್ ಮತ್ತು ಲಾರೆನ್ ಗಾಟ್ಲಿಬ್ ಬೆರಗುಗೊಳಿಸುವ ಪ್ರದರ್ಶನ, ಈವೆಂಟ್ ಅನ್ನು ಉತ್ತಮಗೊಳಿಸಿತು.

Leave A Reply

Your email address will not be published.