ಜನತೆಗೆ ಗುಡ್ ನ್ಯೂಸ್ ನೀಡಿದ ಈ ಸರ್ಕಾರ, ಪೆಟ್ರೋಲ್ ಡೀಸಲ್ ಬೆಲೆಯಲ್ಲಿ ಭಾರಿ ಇಳಿಕೆ ಸಾಧ್ಯತೆ

ಮುಂಬಯಿ: ಮಹಾರಾಷ್ಟ್ರ ಜನತೆಗೆ ಹೊಸ ಸಿಎಂ ಏಕನಾಥ್ ಶಿಂಧೆ ಫ್ರೆಶ್ ಗುಡ್ ನ್ಯೂಸ್ ನೀಡಿದ್ದಾರೆ. ಮಹಾರಾಷ್ಟ್ರವು ಇಂಧನದ ಮೇಲಿನ ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್ ಅನ್ನು ಕಡಿಮೆ ಮಾಡಲಿದ್ದು, ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಲಾಗುವುದು ಎಂದು ಏಕನಾಥ್ ಶಿಂಧೆ ಸೋಮವಾರ ಘೋಷಿಸಿದ್ದಾರೆ.

ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿ ತಮ್ಮ ಮೊದಲ ಭಾಷಣದಲ್ಲೇ ದೊಡ್ಡ ಘೋಷಣೆ ಮಾಡಿದ್ದು, ಇಂಧನದ ಮೇಲಿನ ವ್ಯಾಟ್ ಕಡಿತಗೊಳಿಸುವುದಾಗಿ ಇಂದು ಹೇಳಿದ್ದಾರೆ.
ಬಿಜೆಪಿ ಆಡಳಿತವಿರುವ ಬಹುತೇಕ ರಾಜ್ಯಗಳು ಇಂಧನ ಬೆಲೆಯನ್ನು ಕಡಿತಗೊಳಿಸಿದ್ದರೆ, ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳು ಈ ಕ್ರಮ ಕೈಗೊಳ್ಳಲು ಸಿದ್ಧರಿಲ್ಲ. ಕಳೆದ ವರ್ಷ ನವೆಂಬರ್‌ನಲ್ಲಿ, ಕೇಂದ್ರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 5 ರೂ ಮತ್ತು 10 ರೂ. ರಷ್ಟು ಕಡಿತಗೊಳಿಸಿತ್ತು. ಹೆಚ್ಚಿನ ಬಿಜೆಪಿ ಆಡಳಿತದ ರಾಜ್ಯಗಳು ವ್ಯಾಟ್ ಅನ್ನು ಕೇಂದ್ರದ ಕೋರಿಕೆಯಂತೆ ಕಡಿತಗೊಳಿಸಿದ್ದವು.
ಮೊನ್ನೆ ಮೇ ತಿಂಗಳಲ್ಲಿ, ಕೇಂದ್ರವು ಮತ್ತೆ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದರಿಂದ ಉತ್ತರ ಪ್ರದೇಶದಂತಹ ರಾಜ್ಯಗಳು ವ್ಯಾಟ್ ಅನ್ನು ಮತ್ತಷ್ಟು ಕಡಿಮೆಗೊಳಿಸಿದವು. ಆದರೆ ಜನರಿಗೆ ಪರಿಹಾರ ಕ್ರಮವಾಗಿ ಇಂಧನದ ಮೇಲಿನ ವ್ಯಾಟ್ ಕಡಿತಗೊಳಿಸುವ ಪ್ರಧಾನಿಯವರ ಸಲಹೆಯನ್ನು ವಿರೋಧ ಪಕ್ಷದ ಆಡಳಿತವಿರುವ ರಾಜ್ಯಗಳು ತಿರಸ್ಕರಿಸಿದವು. ಈ ರಾಜ್ಯಗಳು ಈ ಹಿಂದೆಯೂ ನಿರಾಕರಿಸಿದ್ದವು, ಈಗ ಮತ್ತೆ ನಿರಾಕರಿಸಿವೆ. ಇದು ತಮ್ಮ ಆದಾಯದ ಮೇಲೆ ಭಾರಿ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ನಾನ್ ಬಿಜೆಪಿನ್ ರಾಜ್ಯಗಳು ಹೇಳಿವೆ.

Leave A Reply

Your email address will not be published.