ಏರ್ ಪೋರ್ಟ್ ನಲ್ಲಿ ತಪಾಸಣೆ ವೇಳೆ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದ ದಂಪತಿ ! ಮುಂದೇನಾಯ್ತು ಗೊತ್ತಾ ?
ಕೊಚ್ಚಿ: ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಮಾಡುವಾಗ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದ ದಂಪತಿಯನ್ನು ಕೊಚ್ಚಿಯಲ್ಲಿರುವ ಕೊಚ್ಚಿನ್ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನಿಂದ ಅವರನ್ನು ಪ್ರಯಾಣಕ್ಕೆ ಅನುಮತಿಸದೇ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಶನಿವಾರ ನಸುಕಿನ 1.45ರ ಸುಮಾರಿಗೆ ಕೇರಳದ ಪತ್ತನಂತಿಟ್ಟ ಮೂಲದ ಮಮ್ಮನ್ ಜೋಸೆಫ್ (63) ಮತ್ತು ಅವರ ಪತ್ನಿ ದುಬೈ ಮೂಲಕ ಆಸ್ಟ್ರೇಲಿಯಾದಲ್ಲಿರುವ ತಮ್ಮ ಮಗಳನ್ನು ಭೇಟಿ ಮಾಡಲು ಹೊರಟಿದ್ದರು. ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ಸಮಯದಲ್ಲಿ, ಹೆಚ್ಚಿನ ಭದ್ರತೆಗಾಗಿ, ಅವರ ಬ್ಯಾಗ್‌ನಲ್ಲಿ ಏನಿದೆ ಎಂದು ಪದೇ ಪದೇ ಕೇಳಿದಾಗ ಕೋಪಗೊಂಡ ದಂಪತಿ ಬಾಂಬ್ ಇದೆ ಎಂದಿದ್ದಾರೆ. ವ್ಯಂ
ಇದರಿಂದ ಆತಂಕಕ್ಕೊಳಗಾದ ಭದ್ರತಾ ಸಿಬ್ಬಂದಿ ದಂಪತಿಯನ್ನು ತಕ್ಷಣ ಅರೆಸ್ಟ್ ಮಾಡಿದ್ದಾರೆ. ಗ್ಯವಾಡಿದ ಅವರ ಮಾತು ಸೀರಿಯಸ್ ಆಗಿದೆ. ಅವರ ಪ್ರಯಾಣಕ್ಕೆ ಅನುಮತಿಸದೇ ಅವರನ್ನು ಸಮೀಪದ ನೆಡುಂಬಶ್ಶೇರಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಕ ಹೆಚ್ಚಿನ ವಿಚಾರಣೆಯ ನಂತ್ರ ದಂಪತಿಯನ್ನು ಪೊಲೀಸರು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿ ಎಚ್ಚರಿಕೆ ನೀಡಿದ್ದಾರೆ.
ದಂಪತಿ ಮತ್ತು ಚೆಕ್-ಇನ್ ಕೌಂಟರ್ ಅಧಿಕಾರಿಗಳ ನಡುವಿನ ಸಂಭಾಷಣೆಯು ಟರ್ಮಿನಲ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.