ಚೀನಾದಲ್ಲಿ ತೀವ್ರ ಭೂಕಂಪ !
ಬೀಜಿಂಗ್ (ಚೀನಾ): ಚೀನಾದ ಕ್ಸಿನ್ಜಿಯಾಂಗ್ ಉಯ್ಗುರ್ ಸ್ವಾಯತ್ತ ಪ್ರದೇಶದಲ್ಲಿ ಇಂದು ಬೆಳಗ್ಗೆ 5.2 ತೀವ್ರತೆಯ ಭೂಕಂಪ ಸಂಭವಿಸಿದೆ.
ಚೀನಾ ಭೂಕಂಪ ನೆಟ್ವರ್ಕ್ಸ್ ಸೆಂಟರ್ (ಸಿಇಎನ್ಸಿ) ಪ್ರಕಾರ, ವಾಯುವ್ಯ ಚೀನಾದ ಅಕ್ಕಿ ಕೌಂಟಿಯಲ್ಲಿ ಇಂದು ಬೆಳಗ್ಗೆ 6:02 ಗಂಟೆಗೆ (ಬೀಜಿಂಗ್ ಸಮಯ) ಭೂಕಂಪನದ ಅನುಭವ ಉಂಟಾಗಿದೆ ಎಂದು ಕ್ಸಿನ್ಹುವಾ ವರದಿಯಲ್ಲಿ ತಿಳಿಸಿದೆ.
ಭೂಕಂಪದ ಕೇಂದ್ರವು 40.88 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 78.14 ಡಿಗ್ರಿ ಪೂರ್ವ ರೇಖಾಂಶದಲ್ಲಿ ಕಂಡುಬಂದಿದೆ ಹಾಗೂ 10 ಕಿಮೀ ಆಳದಲ್ಲಿ ಭೂಮಿ ಕಂಪಿಸಿದೆ ಎಂದು ಸಿಇಎನ್ಸಿ ಉಲ್ಲೇಖಿಸಿ ಕ್ಸಿನ್ಹುವಾ ವರದಿ ಮಾಡಿದೆ.
ಶನಿವಾರ ಮುಂಜಾನೆ 3:29 ಕ್ಕೆ ಚೀನಾದ ಕ್ಸಿನ್ಜಿಯಾಂಗ್ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 4.3 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಇದರ ಬೆನ್ನಲ್ಲೇ ಇಂದು ಅಕ್ಕಿ ಕೌಂಟಿಯಲ್ಲಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಭೂಕಂಪದಿಂದ ಉಂಟಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.