ವಿ.ಹಿಂ.ಪ ಬಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಬೃಹತ್ ರಕ್ತದಾನ ಶಿಬಿರ!! ದಾಖಲೆಯ 108 ಯುನಿಟ್ ರಕ್ತ ಸಂಗ್ರಹ

ವಿಶ್ವಹಿಂದುಪರಿಷದ್ ಬಜರಂಗದಳ ಪರಶುರಾಮ ಶಾಖೆ ಬಂಟ್ವಾಳ ನಗರ ಬಂಟ್ವಾಳ ಪ್ರಖಂಡದ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ ಕೆ.ಎಮ್.ಸಿ ಮಂಗಳೂರು ಮತ್ತು ವೆನ್ ಲಾಕ್ ಆಸ್ಪತ್ರೆ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು.ಶಿಬಿರದಲ್ಲಿ 180 ಯೂನಿಟ್ ರಕ್ತ ಸಂಗ್ರಹ ಮಾಡಲಾಗಿದ್ದು,ರಕ್ತದಾನದ ವಿಷಯಗಳಲ್ಲಿ ತಕ್ಷಣ ಸ್ಪಂದಿಸುವ ಬಂಟ್ವಾಳ ಪ್ರಖಂಡದ ಸೇವಾ ಪ್ರಮುಖ್ ಪ್ರಸಾದ್ ಶಿವಾಜಿನಗರ ಬೆಂಜನಪದವು ಹಾಗೂ ಕಿರಣ್ ಕಾಪಿಕಾಡ್ ಇವರನ್ನು ಸನ್ಮಾನಿಸಲಾಯಿತು.

 

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಪುತ್ತೂರು ಜಿಲ್ಲಾ ಅಧ್ಯಕ್ಷರು ಡಾ ಕೃಷ್ಣ ಪ್ರಸನ್ನ ಪ್ರಸಾದ್ ರೈ ಭರತ್ ಕುಮುಡೆಲ್ ಗುರುರಾಜ್ ಬಂಟ್ವಾಳ ಶಿವಪ್ರಸಾ ದ್ ತುಂಬೆ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್ ಎಮ್ ಮೂಡಬಿದ್ರೆ ಶ್ರೀಕಾಂತ್ ಶೆಟ್ಟಿ ಸಜಿಪ ದಿನೇಶ್ ಕಾಯರ್ಮಾರ್ ಶ್ರೀ ಬಿ ವಿಶ್ವನಾಥ್ ಸಂತೋಷ್ ಪೊಳಲಿ ಹಲವು ಗಣ್ಯರು ಉಪಸ್ಥಿತರಿದ್ದು,ರಾಜೇಶ್ ಕೊಟ್ಟಾರಿ ಅತಿಥಿ ಗಳನ್ನು ಸ್ವಾಗತಿಸಿದರು ಸಂತೋಷ್ ಕುಲಾಲ್ ಸರಪಾಡಿ ವಂದಿಸಿದರು.

Leave A Reply

Your email address will not be published.