ಶಿಶ್ನದಲ್ಲಿ 1.5 ಅಡಿ ಉದ್ದದ ವಿದ್ಯುತ್ ಕೇಬಲ್ ತೂರಿದ ಪಾಕಿಸ್ತಾನಿ ವ್ಯಕ್ತಿ, ಮುಂದೇನಾಯಿತು ಗೊತ್ತಾ?

ಪಾಕಿಸ್ತಾನದಲ್ಲಿ ವಯಸ್ಸಾದ ವ್ಯಕ್ತಿಯ ವಿಚಿತ್ರ ಕೃತ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಯ ವಿಷಯವಾಗಿ ಮಾರ್ಪಾಟಾಗಿದೆ. ಮೂತ್ರವಿಸರ್ಜನೆಯ ಸಮಸ್ಯೆಯನ್ನು ನಿವಾರಿಸಲು, ಈ ವ್ಯಕ್ತಿಯು ತನ್ನದೇ ಆದ ಹೊಸ ಚಿಕಿತ್ಸೆಯನ್ನು ರೂಪಿಸಿದ್ದು, ಆಗ ಆತನ ವಿಜ್ಞಾನ ಕೈಕೊಟ್ಟು ಭಾರೀ ಯಡವಟ್ಟು ಆದ ಘಟನೆ ಬೆಳಕಿಗೆ ಬಂದಿದೆ. ಬುಡದ ರೋಗಕ್ಕೆ ಬುಡುಬುಡಿಕೆ ಮದ್ದು ಬಳಸಲು ಹೋಗಿ ‘ಅದರ ‘ ಬುಡಕ್ಕೇ ತೊಂದರೆ ತಂದುಕೊಂಡಿದ್ದಾನೆ.

ಈ ವ್ಯಕ್ತಿಯು ಮೂತ್ರವಿಸರ್ಜನೆ ಮಾಡಲು ತಿಣುಕುತ್ತಿದ್ದ. ಈ ಸಂದರ್ಭದಲ್ಲಿ ತನ್ನ ಶಿಶ್ನಕ್ಕೆ ವಿದ್ಯುತ್ ತಂತಿಯನ್ನು ಹಾಕಿ, ಡ್ರೈನೇಜ್ ಪೈಪು ಕಟ್ಟಿಕೊಂಡರೆ ಅದನ್ನು ಡಿ-ಚೋಕ್ ಮಾಡುವಂತೆ ಇಲೆಕ್ಟ್ರಿಕ್ ಕೇಬಲ್ ಅನ್ನು ಒಳಕ್ಕೆ ತಳ್ಳಿದ್ದಾನೆ.

ಆದರೆ ಇದರಿಂದ ಮೂತ್ರ ಬಂದ್ ಆಗುವುದರ ಜತೆಗೆ ಆತ ಗಂಭೀರ ಸಮಸ್ಯೆಗೆ ಒಳಗಾಗುತ್ತಾನೆ. ಆ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಕಠಿಣ ಪರಿಶ್ರಮದ ನಂತರ ಶಿಶ್ನದಿಂದ ಬರೋಬ್ಬರಿ ಒಂದೂವರೆ ಅಡಿ ಉದ್ದದ, ಅಂದರೆ 18 ಸೆಂ.ಮೀ ಉದ್ದದ ಕೇಬಲ್ ಅನ್ನು ಹೊರತೆಗೆದಿದ್ದಾರೆ.

ಘಟನೆಯ ಸಂಪೂರ್ಣ ವರದಿಯನ್ನು ಆರೋಗ್ಯ ಜರ್ನಲ್ ಯುರಾಲಜಿ ಕೇಸ್ ರಿಪೋರ್ಟ್ಸ್ ನಲ್ಲಿ ಪ್ರಕಟಿಸಲಾಗಿದೆ. ವರದಿಯ ಪ್ರಕಾರ, ಪಾಕಿಸ್ತಾನದ 64 ವರ್ಷದ ವ್ಯಕ್ತಿಗೆ ಮೂತ್ರದ ಸಮಸ್ಯೆ ಇತ್ತು. ಇದನ್ನು ಸರಿಪಡಿಸಲು, ಆ ವ್ಯಕ್ತಿಯು ತನ್ನ ಮೂತ್ರನಾಳಕ್ಕೆ 18 ಸೆಂ.ಮೀ ಉದ್ದದ ತಂತಿಯನ್ನು ಹಾಕಿದನು, ಆದರೆ ಅವನು ಇದ್ರಿಂದ ಗಂಭೀರ ಸಮಸ್ಯೆಗೆ ಒಳಗಾಗಿ ಈ ಘಟನೆಯ ಬಹಿರಂಗವಾಗಿದೆ. ಪಾಕಿಸ್ತಾನದ ಈ ವ್ಯಕ್ತಿಯನ್ನು ಕರಾಚಿಯ ಅಬ್ಬಾಸಿ ಶಹೀದ್ ಆಸ್ಪತ್ರೆಗೆ ದಾಖಲಿಸಲಾಯಿತು.
ಈ ಘಟನೆಯಿಂದ ಪಾಠ ಕಲಿಯುವಂತೆ ವೈದ್ಯರು ಜನರಿಗೆ ಸಲಹೆ ನೀಡಿದ್ದಾರೆ. ಮತ್ತು ರೋಗಿಗಳು ಯಾವುದೇ ರೋಗದ ಬಗ್ಗೆ ತಿಳಿಯದೆ ಮನೆಯಲ್ಲಿ ಚಿಕಿತ್ಸೆ ಪಡೆಯುವುದನ್ನು ತಪ್ಪಿಸಬೇಕು ಎಂದು ಹೇಳಿದರು.

Leave A Reply

Your email address will not be published.