ಒಂದಲ್ಲ, ಎರಡಲ್ಲ 6 ಬಾರಿ ಕಂಪನ….!!
ಭಾರಿ ಶಬ್ದದ ಭೂಕಂಪನಕ್ಕೆ ಕೊಡಗು ಶೇಕಿಂಗ್ !
ದ.ಕ ಜಿಲ್ಲೆಯ ಗಡಿಭಾಗದಲ್ಲಿ ಭೂಕಂಪನ ಮತ್ತೆ ಮುಂದುವರಿದಿದ್ದು ಜು.2ರಂದು ಮಧ್ಯಾಹ್ನ ಭೂಮಿ ಕಂಪಿಸಿದೆ.
ಸಾಲು ಸಾಲು ಭೂಕಂಪಗಳಿಗೆ ದಕ್ಷಿಣ ಕನ್ನಡ ಮತ್ತು ಕೊಡಗು ಕಂಪಿಸಿದೆ. ಜನರಿಗೆ ಏನಾಗುತ್ತಿದೆ ಎಂದೇ ತಿಳಿಯುತ್ತಿಲ್ಲ. ಭೂಕಂಪವೆಂಬ ನೈಸರ್ಗಿಕ ವಿಕೋಪ ಮತ್ತು ಅದರ ಪರಿಣಾಮ ನೋಡಿ ತಿಳಿದು ಬಲ್ಲ ಜನರು ಆತಂಕಿತರಾಗಿದ್ದಾರೆ.
ಭಾರೀ ಶಬ್ದದೊಂದಿಗೆ 6ನೇ ಬಾರಿ ಭೂಮಿ ಕಂಪಿಸಿದ್ದು, ಕಲ್ಲುಗುಂಡಿ, ಸಂಪಾಜೆ, ಗೂನಡ್ಕ ಭಾಗಗಳಲ್ಲಿ ಭೂಮಿ ನಡುಗಿದೆ.
ಕೊಡಗು-ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿ ಶನಿವಾರ ಮುಂಜಾನೆ ಭೂಕಂಪನವಾಗಿದೆ. ಶುಕ್ರವಾರ ಎರಡು ಬಾರಿ ನಡದ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 1.8 ಹಾಗೂ 2.1 ದಾಖಲಾಗಿದೆ. ಮೊದಲಿಗೆ ಗುರುವಾರ ಮಧ್ಯರಾತ್ರಿ 1.15ಕ್ಕೆ ಭೂಮಿ ಕಂಪಿಸಿದ್ದರೆ, ಶುಕ್ರವಾರ ಬೆಳಿಗ್ಗೆ 10.47 ಮತ್ತೆ ಕಂಪಿಸಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬುಲೆಟಿನ್ ಬಿಡುಗಡೆಗೊಳಿಸಿದ್ದು ಗುರುವಾರ ಮಧ್ಯರಾತ್ರಿ ಸಂಭವಿಸಿದ ಭೂಕಂಪನದ ಕುರಿತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತು ವಾರಿ ಕೇಂದ್ರ, ರಿಕ್ಟರ್ ಮಾಪಕದಲ್ಲಿ 1.8 ತೀವ್ರತೆ ದಾಖಲಾಗಿರುವುದಾಗಿ ತಿಳಿಸಿದೆ.
ಎಲ್ಲಿದೆ ಕಂಪನ ಕೇಂದ್ರ?
ಗುರುವಾರ ಮಧ್ಯರಾತ್ರಿ 1 ಗಂಟೆ 15 ನಿಮಿಷಕ್ಕೆ 17 ಸೆಕೆಂಡ್ ಗೆ ಈ ಭೂಕಂಪನ ಸಂಭವಿಸಿದ್ದು ಚೆಂಬು ಹಾಗೂ ಪೆರಾಜೆಯಿಂದ 5.2 ಪಶ್ಚಿಮ ವಾಯುವ್ಯ ದಿಕ್ಕಿನಲ್ಲಿ ಭೂಮಿಯ 5 ಕಿಲೋಮೀಟರ್ ಆಳದಲ್ಲಿ ರಿಕ್ಟರ್ ಮಾಪಕದಲ್ಲಿ ಕಂಡುಬಂದಂತೆ 1.8 ರಷ್ಟು ಭೂಕಂಪನವಾಗಿದೆ. ಇದರ ಪರಿಣಾಮ ಮಡಿಕೇರಿ ತಾಲೂಕಿನ ಹಂಕ ಭಾಗದ ಉತ್ತರ ವಾಯುವ್ಯ ದಿಕ್ಕಿನಲ್ಲಿ 9.4. ಕಿಲೋಮೀಟರ್ ವ್ಯಾಪ್ತಿಯಲ್ಲಿ, ಸಂಪಾದ ಭಾಗದ ಪಶ್ಚಿಮದಲ್ಲಿ 11.5 ಕಿಲೋಮೀಟರ್ ವ್ಯಾಪ್ತಿಯಲ್ಲಿ, ಸುಳ್ಯ ತಾಲೂಕು ಭಾಗದ ಆಸ್ತೇಯದಲ್ಲಿ 11 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಂಪನ ಕಾಣಿಸಿಕೊಂಡಿದ್ದು, ಸುಮಾರು 20-30 ಕಿಲೋಮೀಟರ್ ದೂರದವರೆಗೆ ಭೂ ಕಂಪನದ ಅನುಭವವಾಗಿದೆ ಎಂದು ಕೆಎಸ್ಎನ್ ಎಂಸಿ ಮಾಹಿತಿ ನೀಡಿದೆ. ಈಗ ಪರಿಣಾಮ ಸುಳ್ಯ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿರುವ ಅನುಭವ ಆಗಿರುವುದಾಗಿ ತಿಳಿದುಬಂದಿದೆ
ಶುಕ್ರವಾರದ ಬುಲೆಟಿನ್ ಮತ್ತು ಹಿಸ್ಟರಿ
ಶುಕ್ರವಾರ ಬೆಳಿಗ್ಗೆ 10 ಗಂಟೆ 47 ನಿಮಿಷಕ್ಕೆ 21 ಸೆಕೆಂಡ್ಗೆ ಸಂಭವಿಸಿದ ಭೂಕಂಪನ ಕುರಿತಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬುಲೆಟಿನ್ ಬಿಡುಗಡೆಗೊಳಿಸಿದ್ದು, ರಿಕ್ಟರ್ ಮಾಪಕದಲ್ಲಿ 2.1 ದಾಖಲಾಗಿರುವುದಾಗಿ ತಿಳಿಸಿದೆ. ಗಡಿ ಗ್ರಾಮದ ವ್ಯಾಪ್ತಿಯಲ್ಲಿ ಕಂಪನ ಕಾಣಿಸಿಕೊಂಡಿದೆ.
ಚೆಂಬು ಹಾಗೂ ಪೆರಾಜೆಯಿಂದ 5.1 ಪಶ್ಚಿಮ ವಾಯುವ್ಯ ದಿಕ್ಕಿನಲ್ಲಿ ಭೂಮಿಯ 10 ಕಿ.ಮೀ. ಆಳದಲ್ಲಿ ಕಂಪನ ಕೇಂದ್ರವನ್ನು ಗುರುತಿಸಲಾಗಿದೆ.
ಗುರುವಾರ ಮಧ್ಯರಾತ್ರಿ ಮೊದಲ ಬಾರಿ ಕಂಪನ ಸಂಭವಿಸಿದ ಸಮಯ -01.15.12
ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೂಕಂಪನದ ತೀವ್ರತೆ ಪ್ರಮಾಣ- 00002.1
ಶುಕ್ರವಾರ ಬೆಳಗ್ಗೆ ದ್ವಿತಿಯ ಬಾರಿ ಕಂಪನ ಸಂಭವಿಸಿದ ಸಮಯ-10.47.26
ಗುರುವಾರ ಮಧ್ಯರಾತ್ರಿ ಸಂಭವಿಸಿದ ಭೂಕಂಪನದ ತೀವ್ರತೆ- 00001.8