ಮಹಿಳಾ ಉದ್ಯೋಗಿಗಳಿಗೆ ಸರಕಾರದಿಂದ ಬಿಗ್ ಗುಡ್ ನ್ಯೂಸ್ !
ರಾಜ್ಯ ಸರ್ಕಾರವು ನಾನಾ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಮಹಿಳಾ ನೌಕರರಿಗೆ ಮಾತೃತ್ವ ರಜೆ ನೀಡಲು ಅಧಿಕೃತ ಆದೇಶ ಹೊರಡಿಸಿದೆ.
ವಿವಿಧ ಇಲಾಖೆಗಳಲ್ಲಿ ಡೇಟಾ ಎಂಟ್ರಿ ಅಪರೇಟರ್ ಗಳು, ಸಹಾಯಕರು, ಗ್ರೂಪ್ ಸಿ ಮತ್ತು ಡಿ ದರ್ಜೆ ಸಿಬ್ಬಂದಿಯ ಕೊರತೆಯ ಹಿನ್ನೆಲೆಯಲ್ಲಿ ಹೊರಗುತ್ತಿಗೆಯ ಮೇಲೆ ನೌಕರರನ್ನು ಖಾಸಗಿ ಏಜೆನ್ಸಿ ಮೂಲಕ ನೇಮಕ ಮಾಡಿಕೊಳ್ಳಲಾಗಿದ್ದು, ಹೀಗೆ ನೇಮಕಗೊಂಡ ಹೊರಗುತ್ತಿಗೆ ಮಹಿಳಾ ನೌಕರರಿಗೆ ವೇತನ ಸಹಿತ ಹೆರಿಗೆ ರಜೆ ಮಂಜೂರು ಮಾಡಲಾಗಿದೆ.
ಮಾತೃತ್ವ ರಜೆ ಕುರಿತು ರಾಜ್ಯ ಸರ್ಕಾರದ ಆರ್ಥಿಕ ಇಲಾಖೆ ಸುತ್ತೂಲೆ ಹೊರಡಿಸಿದ್ದು ರಾಜ್ಯ ಸರ್ಕಾರದ ಅಧೀನದ ಎಲ್ಲಾ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿಗೆ 180 ದಿನಗಳ ಮಾತೃತ್ವ ರಜೆ ಹಾಗೂ ಈ ರಜೆಯ ಅವಧಿಯಲ್ಲಿ ಮೂರು ತಿಂಗಳ ವೇತನ ನೀಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.