ಉದಯಪುರದಲ್ಲಿ ನಡೆದ ಘಟನೆಗೆ ನೀವೇ ನೇರ ಹೊಣೆ : ನುಪೂರ್ ಶರ್ಮಾ ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್!!!
ಪ್ರವಾದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕರಣದ ಕುರಿತು ಈಗಾಗಲೇ ಅಮಾನತುಗೊಂಡಿರುವ ಬಿಜೆಪಿ ವಕ್ತಾರ ನೂಪುರ್ ಶರ್ಮಾರನ್ನು ಸುಪ್ರೀಂಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ. ನೂಪುರ್ ಶರ್ಮಾ ‘ಇಡೀ ದೇಶದ ಜನತೆಯ ಜೊತೆ ಕ್ಷಮೆಯಾಚಿಸಬೇಕು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನೂಪುರ್ ಶರ್ಮಾ ಮಾಡಿರುವ ಹೇಳಿರುವ ಪ್ರವಾದಿ ಮೊಹಮ್ಮದ್ ಕುರಿತು ಹೇಳಿಕೆಗೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನೂಪುರ್ ವರ್ಗಾವಣೆ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ನಂತರ, ನೀವು ನೀಡಿರುವ ಹೇಳಿಕೆಗಳು ದೇಶಾದ್ಯಂತ ಜನರ ಭಾವನೆಗಳನ್ನು ಕೆರಳಿಸಿದೆ. ಹಾಗೆಯೇ ಇಂದು ದೇಶದಲ್ಲಿ ಏನೇ ಆಗಲಿ ಅದಕ್ಕೆ ನೀವೇ ಹೊಣೆ. ನಾವು ಚರ್ಚೆಯನ್ನು ನೋಡಿದ್ದೇವೆ, ಅದನ್ನ ಪ್ರಚೋದಿಸೋದನ್ನೂ ನೋಡಿದ್ದೇವೆ. ಇದು ನಾಚಿಕೆಗೇಡಿನ ಸಂಗತಿ’ ಎಂದಿದೆ.
ನಿಮ್ಮ ಭಾಷೆ ಇಡೀ ದೇಶಕ್ಕೆ ಬೆಂಕಿ ಹಚ್ಚಿದೆ. ಉದಯಪುರದಲ್ಲಿ ನಡೆದ ಅಹಿತಕರ ಘಟನೆಗೆ ನೀವೇ ನೇರ ಕಾರಣ. ಇನ್ನು ವಕೀಲರು ತಮ್ಮ ಕ್ಷಮೆಯಾಚಿಸಲು ಮತ್ತು ಪ್ರವಾದಿಯವರ ಮೇಲೆ ಮಾಡಿದ ಟೀಕೆಗಳನ್ನು ನಮ್ರತೆಯಿಂದ ಹಿಂತೆಗೆದುಕೊಳ್ಳುವಂತೆ ತಾಕೀತು ಮಾಡಿದಾಗ್ಯೂ ಹಿಂತೆಗೆದುಕೊಳ್ಳಲು ತುಂಬಾ ತಡವಾಗಿದೆ’ ಎಂದು ನ್ಯಾಯಾಪೀಠ ಹೇಳಿದೆ.