ದಕ್ಷಿಣ ಕನ್ನಡ | ಮತ್ತೆ ಭೂಮಿ ಗಡಗಡ
ಕಳೆದ ರಾತ್ರಿ ಮತ್ತೆ ಭೂಮಿಯಲ್ಲಿ ಪ್ರಕಂಪನ !!
ಮತ್ತೆ ದಕ್ಷಿಣಕನ್ನಡದ ನೆಲದಲ್ಲಿ ಭೂಮಿ ಕಂಪಿಸಿದೆ. ಲಘು ಭೂಕಂಪ ಸಂಭವಿಸಿದ ಎಲ್ಲಾ ಲಕ್ಷಣಗಳು ಮಧ್ಯರಾತ್ರಿ ಘಟಿಸಿವೆ.
ಕೆಳವು ದಿನಗಳ ಹಿಂದಷ್ಟೇ ಭೂಕಂಪನವಾಗಿದ್ದ ದ.ಕ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಮತ್ತೆ ಭೂಮಿ ಕಂಪಿಸಿದೆ.
ಕಳೆದ ರಂದು ರಾತ್ರಿ ಸುಮಾರು 1 ರ ಸಮಯಕ್ಕೆ ಭೂಕಂಪನದ ಕಂಪನವಾದ ಅನುಭವಾಗಿದೆ. ಮೊನ್ನೆ ನಡೆದಂತೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದ್ದು ನಿದ್ದೆಯಲ್ಲಿದ್ದವರಿಗೆ ಕೆಲವರಿಗೆ ಎಚ್ಚರ ಆಗಿದೆ. ಈ ವಿದ್ಯಮಾನ ಕೆಲವೇ ಸೆಕೆಂಡುಗಳ ಕಾಲ ಜರುಗಿದ್ದು ಸಂದರ್ಭ ಮನೆಯ ಕಬ್ಬಿಣದ ಶೀಟ್ ಗಳು ಸದ್ದು ಮಾಡಿವೆ. ಅಲ್ಲಲ್ಲಿ ಕಟ್ಟಡ ಅಲುಗಿದ ಅನುಭವವಾಗಿದ್ದು, ಮನೆಯಲ್ಲಿ ಕಟ್ಟಿಹಾಕಿದ ದನಕರುಗಳು ಹಗ್ಗ ಎಳೆದುಕೊಂಡು ಕೆಲವು ಕಡೆ ಗಾಬರಿ ತೋರಿಸಿವೆ.
ಸುಳ್ಯದ ಸಂಪಾಜೆ, ಗೂನಡ್ಕ, ಪೆರಾಜೆ, ಅರಂಬೂರು, ಶಾಂತಿನrಗರ, ಹಳೆಗೇಟು ಭಾಗದಲ್ಲಿ ಭೂಮಿ ಕಂಪಿಸಿದ ಅನುಭವಾಯ್ತು.
ಅತ್ತ ಕುಂಭದ್ರೋಣ ಮಳೆಯಿಂದ ಉಕ್ಕಿ ಹರಿಯುವ ನದಿಗಳು, ಇತ್ತ ಪದೇ ಪದೇ ಕಂಪಿಸುವ ಭೂಮಿ…. ಸುಳ್ಯದ ಜನತೆಯಲ್ಲಿ ಆತಂಕ ಮನೆ ಮಾಡಿದೆ.
ಸಂಪಾಜೆ ಹಾಗೂ ಸಮೀಪದ ಪ್ರದೇಶ, ಸುಳ್ಯ ನಗರ ಸೇರಿ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಭೂ ಕಂಪನದ ಆಗಿರುವ ಬಗ್ಗೆ ಜನರು ದೂರವಾಣಿಯ ಮೂಲಕ ಹಾಗು ಸಾಮಾಜಿಕ ಜಾಲತಾಣಗಳ ಮೂಲಕ ಅನುಭವ ಹಂಚಿ ಕೊಂಡಿದ್ದಾರೆ.
ರಾತ್ರಿ ನಡೆದ ಭೂಕಂಪದ ತೀವ್ರತೆಯು 1.8 ರಷ್ಟು ದಾಖಲಾಗಿತ್ತು ಎಂದು ಮಾಪಕ ಕೇಂದ್ರ ಸ್ಪಷ್ಟಪಡಿಸಿದೆ. ಕಂಪನವು ಭೂಮಿಯ 10 ಕಿ.ಮೀ ಅಡಿ ಆಳದಲ್ಲಿ ನಡೆದಿದೆ. ಎಂ. ಚೆಂಬು ಹಾಗೂ ಪೆರಾಜೆ ಗ್ರಾಮದ ಎಪಿ ಸೆಂಟರ್ (ಕೇಂದ್ರ ಬಿಂದು) ವಿನಿಂದ ಭೂಕಂಪ ಸಂಭವಿಸಿದೆ ಎನ್ನಲಾಗಿದೆ.
ಇದೀಗ ವಾರದಲ್ಲಿ ನಾಲ್ಕನೇ ಬಾರಿ ಭೂ ಕಂಪನ ಉಂಟಾಗಿದ್ದು ಜನರ ಆತಂಕ ಹೆಚ್ಚಿದೆ. ಜೂ.25 ರಂದು ಬೆಳಿಗ್ಗೆ 9.10 ಕ್ಕೆ 2.3 ತೀವ್ರತೆಯ ಭೂ ಕಂಪನ ಆಗಿತ್ತು. ಜೂ.28 ರಂದು ಎರಡು ಬಾರಿ ಭೂಮಿ ನಲುಗಿತ್ತು. ಬೆಳಿಗ್ಗೆ ರಿಕ್ಟರ್ ಸೇಲ್‌ನಲ್ಲಿ 3 ತೀವ್ರತೆಯ ಹಾಗು ಸಂಜೆ 1.8 ತೀವ್ರತೆಯ ಕಂಪನ ಉಂಟಾಗಿತ್ತು.