ʻಮುಸ್ಲಿಂರನ್ನೇ ನನ್ನ ಪತಿ ಕೆಲಸಕ್ಕೆ ಇಟ್ಟುಕೊಂಡಿದ್ದರು’; ದುಷ್ಕರ್ಮಿಗಳನ್ನು ಶಿರಚ್ಛೇದ ಮಾಡಿ’ ಟೈಲರ್ ಪತ್ನಿ ಯಶೋಧಾ ಆಕ್ರೋಶಭರಿತ ಮಾತು
” ಪತಿಯ ಹತ್ಯೆಗೆ ಮುಸ್ಲಿಂ ಸಮುದಾಯವನ್ನು ದೂಷಿಸಬೇಕಾಗುತ್ತದೆ; ‘ಶಿರಚ್ಛೇದ ಅಥವಾ ಸುಡಬೇಕು’ – ಟೈಲರ್ ಕನ್ನಯ್ಯಾ ಪತ್ನಿ ಯಶೋಧಾ ಆಕ್ರೋಶದ ನುಡಿ
ಮೊನ್ನೆ ಮತಾಂಧರ ಕತ್ತಿಗೆ ತಲೆ ಉದುರಿಸಿಕೊಂಡು ಕಂಗಾಲಾಗಿರುವ ಕುಟುಂಬ ಮಡುಗಟ್ಟಿದ್ದರೂ, ಆತನ ಪತ್ನಿ ಯಶೋಧಾ ಕಂಗೆಟ್ಟು ಕೂತಿಲ್ಲ. ನಡೆದು ಹೋದ ಕ್ರೌರ್ಯವನ್ನು ತೀಕ್ಷ್ಣವಾಗಿ ಪ್ರತಿಭಟಿಸಿದ್ದಾಳೆ. ದೇಶದ ಸಾವಿರಾರು ಜನ ಆಕೆಯನ್ನು ಮಾತಾಡಿಸಿ ಸಮಾಧಾನಿಸಿ ಹೋಗಿದ್ದಾರೆ. ನೂರಾರು ಪತ್ರಕರ್ತರು ಸಂದರ್ಶನ ಮಾಡಿ ಹೋಗಿದ್ದಾರೆ. ಎಲ್ಲರಿಗೂ ಆಕೆ ಉತ್ತರಿಸುತ್ತಿದ್ದಾಳೆ. ಎಲ್ಲರಿಗೂ ಆಕೆಯ ಉತ್ತರ ಒಂದೇ: ಪತಿಯ ಹತ್ಯೆ ಮಾಡಿದವರನ್ನು ಗಲ್ಲಿಗೆ ಏರಿಸಬಾರದು !!
ಹೌದು, ಪ್ರಕರಣದಲ್ಲಿ ಮಾಡಲಾದ ಬಂಧನಗಳು, ಅಥವಾ ಕುಟುಂಬ ಸದಸ್ಯರಿಗೆ ಉದ್ಯೋಗಗಳು ಮತ್ತು ಸರ್ಕಾರದಿಂದ ವಿತ್ತೀಯ ಪರಿಹಾರ- ಉಹೂಂ, ಆಕೆ ತೃಪ್ತರಾಗಿಲ್ಲ. ಅವರು “ನ್ಯಾಯ” ವನ್ನು ಕೋರುವುದಾಗಿ ಹೇಳಿದ್ದಾರೆ. ನನಗೆ ನ್ಯಾಯ ಬೇಡ, ದುಷ್ಕರ್ಮಿಗಳನ್ನು ರಾಜ್ಯವು ಗಲ್ಲಿಗೇರಿಸಬಾರದು. ಅವರನ್ನು ಶಿರಚ್ಛೇದ ಮಾಡಬೇಕು ಅಥವಾ ಸುಡಬೇಕು !
“ಎಲ್ಲ ಮುಸ್ಲಿಮರು ಒಂದೇ ಎಂದು ನಾನು ಹೇಳುತ್ತಿಲ್ಲ. ಆದರೆ ಇಲ್ಲಿ ನಡೆದಿರುವುದಕ್ಕೆ ಮುಸ್ಲಿಂ ಸಮುದಾಯವನ್ನು ದೂಷಿಸಬೇಕಾಗುತ್ತದೆ. ಕನ್ಹಯ್ಯಾ ಲಾಲ್ ಹತ್ಯೆಯ ವಿರುದ್ಧ ಆಕ್ರೋಶದಿಂದ ಹಿಂದೂ ಸಮುದಾಯ ಒಟ್ಟುಗೂಡುತ್ತಿರುವ ರೀತಿಯು ಮುಸ್ಲಿಮರಿಗೆ ನೀಡುವ ಸರಿಯಾದ ಉತ್ತರವಾಗಿದೆ ಎಂದು ಕನ್ಹಯ್ಯಾ ಲಾಲ್ ಪತ್ನಿ ಅತ್ಯಂತ ಆಕ್ರೋಶಭರಿತಳಾಗಿ ಕಿರುಚಿ ಹೇಳಿದ್ದಾರೆ.
ನನ್ನ ಪತಿ ಕನ್ಹಯ್ಯಾ ಲಾಲ್ ಅವರು ಅಮಾನತುಗೊಂಡಿರುವ ಬಿಜೆಪಿ ವಕ್ತಾರ ನೂಪುರ್ ಶರ್ಮಾ ಅವರ ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ಹಂಚಿಕೊಂಡಿಲ್ಲ ಅವರಿಗೆ ಮೊಬೈಲ್ ಬಳಕೆ ಕೂಡ ಸರಿಯಾಗಿ ಗೊತ್ತಿಲ್ಲ. ಮತ್ತು 8 ರ ಮಗನ ಅಜಾಗರೂಕತೆಯಿಂದ ಹಾಗೆ ಮಾಡಿದ್ದಕ್ಕಾಗಿ ಅವರು ಕ್ಷಮೆಯಾಚಿಸಿದ್ದಾರೆ ಎಂದು ಹೇಳಿದ್ದಾರೆ ಯಶೋದಾ. ನನ್ನ ಪತಿ ತನ್ನ ಅಂಗಡಿಯಲ್ಲಿ ಮುಸ್ಲಿಂ ಕಾರ್ಮಿಕರನ್ನು ನೇಮಿಸಿಕೊಂಡಿದ್ದರು. ಅಲ್ಲದೆ ಇರುವುದು ಒಬ್ಬನೇ ದೇವರು ಎಂದು ಅವರು ಹೇಳುತ್ತಿದ್ದರು. ಮತ್ತು ಇಸ್ಲಾಂ ಧರ್ಮವನ್ನು ಕಡಿಮೆ ಧರ್ಮವೆಂದು ಭಾವಿಸಲಿಲ್ಲ. ನಮ್ಮ ಮುಸ್ಲಿಂ ನೆರೆಹೊರೆಯವರೊಂದಿಗೆ ನಾವು ಉತ್ತಮ ಸಂಬಂಧವನ್ನು ಹೊಂದಿದ್ದೇವೆ. ಆದರೂ ಧರ್ಮದವರಿಂದ ನಮಗೆ ಅನ್ಯಾಯ ಆಗಿದೆ ಎಂದಿದ್ದಾರೆ ಯಶೋಧಾ.