ಹೆಚ್ಚಿದ ಕೊರೊನಾ ಅಬ್ಬರ | ಪ್ರತ್ಯೇಕ ಗೈಡ್‌ಲೈನ್, ಕಠಿಣ ರೂಲ್ಸ್ !!!

ಕೊರೊನಾ ಪ್ರಕರಣ ರಾಜ್ಯದಲ್ಲಿ ಹೆಚ್ಚಳವಾಗುತ್ತಿರುವ ಕಾರಣ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮಾರ್ಗಸೂಚಿಯಲ್ಲಿ ಬೆಂಗಳೂರು ನಗರ ಹಾಗೂ ಜಿಲ್ಲಾ ವ್ಯಾಪ್ತಿಯ ಸರ್ಕಾರಿ, ಖಾಸಗಿ ಕಛೇರಿ ಹಾಗೂ ಶಾಲಾ ಕಾಲೇಜುಗಳಿಗೆ ಹೊಸ ಮಾರ್ಗಸೂಚಿಯನ್ನು ಅನುಸರಿಸುವಂತೆ ತಿಳಿಸಿದೆ.

 

ಕೊವಿಡ್ ತಾಂತ್ರಿಕ ಸಲಹಾ ಸಮಿತಿಯ ಸಲಹೆ ಹಿನ್ನಲೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.

  1. ಅಪಾರ್ಟ್ ಮೆಂಟ್‌ಗಳಲ್ಲಿ ಕೊರೊನಾ ಪಾಸಿಟಿವ್ ಆದ ಬ್ಲಾಕ್‌ಗಳನ್ನು ಕ್ಲಸ್ಟರ್ ಎಂದು ಪರಿಗಣಿಸಬೇಕು.
  2. ಸೋಂಕಿನ ಲಕ್ಷಣ ಹೊಂದಿದವರಿಗೆ RAT ಟೆಸ್ಟ್ ಕಡ್ಡಾಯವಾಗಿ ಮಾಡಿಸಬೇಕು.
  3. ಪಾಸಿಟಿವ್ ಬಂದ ವ್ಯಕ್ತಿಯನ್ನ ಹೋಂ ಐಸೋಲೇಷನ್ ಅಥವಾ ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸಬೇಕು.
  4. ಪಾಸಿಟಿವ್ ಇದ್ದವರ CT ವ್ಯಾಲ್ಯೂ 25 ಕ್ಕಿಂತ ಹೆಚ್ಚಿದ್ದರೆ ಜಿನೋಮ್ ಸೀಕ್ವೆನ್ಸಿಂಗ್‌ಗೆ ಒಳಪಡಿಸಬೇಕು .
  5. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು
  6. 60 ವರ್ಷ ಮೇಲ್ಪಟ್ಟವರು ಹಾಗೂ ಇತರ ಗಂಭೀರ
    ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಆರ್‌ಟಿಸಿಪಿಆ‌ರ್ ಪರೀಕ್ಷೆಗೆ ಒಳಪಡಿಸುವುದು.

ಕಚೇರಿಗಳು ಹಾಗೂ ಶಾಲಾ-ಕಾಲೇಜಿಗೆ ರೂಲ್ಸ್

  1. ಕೋವಿಡ್ 19ನ ಲಕ್ಷಣಗಳನ್ನು ಹೊಂದಿರುವವರು ಕಚೇರಿಗಳು ಮತ್ತು ಕಾಲೇಜುಗಳಿಗೆ ಹಾಜರಾಗದಂತೆ ಸೂಚಿಸುವುದು.
  2. ರಾಪಿಡ್ ಆಂಟಿಜೆನ್ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಲ್ಲಿ, ಐಸೋಲೆಷನ್‌ನಲ್ಲಿ ಇರಿಸಿ
    ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಲ್ಲಿ, ಆರ್‌ಟಿಪಿಸಿಆರ್ ಮಾದರಿಯನ್ನು ನೀಡಿ : ಐಸೊಲೇಷನ್ ನಲ್ಲಿದ್ದು, ಫಲಿತಾಂಶವನ್ನು ನಿರೀಕ್ಷಿಸುವುದು. ಫಲಿತಾಂಶದ ನಂತರ ಅಗತ್ಯ ಕ್ರಮ ವಹಿಸುವುದು.
  3. ಕೋವಿಡ್ 19 ದೃಢಪಟ್ಟ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕಿತರಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಲ್ಲಿ ರಾಪಿಡ್ ಆಂಟಿಜೆನ್ ಪರೀಕ್ಷೆಗೆ ಒಳಪಡಿಸುವುದು.
  4. ಪಾಸಿಟಿವ್ ಫಲಿತಾಂಶ ದೃಢಪಟ್ಟಲ್ಲಿ ಶಿಷ್ಟಾಚಾರದ
    ಅನ್ವಯ ಕ್ರಮ ವಹಿಸುವುದು.
  5. ಕ್ಲಸ್ಟರ್ | ಸಾಂಕ್ರಾಮಿಕ ಸ್ಫೋಟಗಳು ವರದಿಯಾದಲ್ಲಿ ರೋಗ ಲಕ್ಷಣಗಳಿರುವವರಿಗೆ ರಾಪಿಡ್ ಆಂಟಿಜೆನ್ ಪರೀಕ್ಷೆ ಮಾಡುವುದು. ಪಾಸಿಟಿವ್ ವ್ಯಕ್ತಿಯ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಹೋಂ ಐಸೊಲೇಷನ್ ಇರಿಸಿ, ಆಸ್ಪತ್ರೆಗೆ ಸೇರಿಸಿ
  6. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕು

ಶಾಲೆಗಳು- ಕಾಲೀಜಿಗೆ ನಿಯಮ (12 ನೇ ತರಗತಿಯವರೆಗೆ)

  1. ಕೋವಿಡ್ 19 ಲಕ್ಷಣಗಳನ್ನು ಹೊಂದಿರುವವರು ಶಾಲೆಗೆ ಹಾಜರಾಗದಂತೆ ಸೂಚಿಸುವುದು.
  2. ಸದರಿಯವರು ರಾಪಿಡ್ ಆಂಟಿಜೆನ್ ಪರೀಕ್ಷೆಗೆ ಒಳಪಡುವುದು ಹಾಗೂ ಪಾಸಿಟಿವ್ ಫಲಿತಾಂಶ ಬಂದಲ್ಲಿ, ಐಸೋಲೆಷನ್‌ನಲ್ಲಿ ಇರಿಸಿ ನಿರ್ವಹಣೆ ಮಾಡುವುದು.
  3. ಶಾಲೆಗಳಲ್ಲಿ ಪಾಸಿಟಿವ್ ಪ್ರಕರಣಗಳು ವರದಿಯಾದ ಕೊಠಡಿಗಳನ್ನು ಸೋಡಿಯಂ ಹೈಪೋಕ್ಲೋರೈಟ್ ದ್ರಾವಣದಿಂದ ಸ್ವಚ್ಛಗೊಳಿಸಬೇಕು ಮತ್ತು ಮರುದಿನದಿಂದ ಕೊಠಡಿಗಳನ್ನು ಪುನಃ ಬಳಕೆ ಮಾಡಬಹುದು.
  4. ಕೋಪಿಡ್-19 ಸೂಕ್ತ ನಡವಳಿಕೆಗಳ ಪಾಲನೆ ಕಡ್ಡಾಯ ಮಾಸ್ಕ್ ಧರಿಸುವಿಕೆ, ದೈಹಿಕ ಅಂತರ ಪಾಲನೆ
  5. ಹ್ಯಾಂಡ್ ಸ್ಯಾನಿಟೈಸರ್‌ಗಳ ಬಳಕೆಗೆ ಅವಕಾಶ, ಪ್ರವೇಶ ದ್ವಾರದಲ್ಲಿ ಜ್ವರ ತಪಾಸಣೆಗೆ ಥರ್ಮಲ್‌ಗಳ ಬಳಕೆ
  6. ಜ್ವರ, ನೆಗಡಿ, ಕೆಮ್ಮ ಹಾಗೂ ಉಸಿರಾಟದ ತೊಂದರೆ ಗಳಿರುವವರನ್ನು ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯಲು ಶಿಫಾರಸ್ಸು ಮಾಡುವುದು.

Leave A Reply

Your email address will not be published.