ಹಾಡಹಗಲೇ ನೂಪುರ್ ಶರ್ಮ ಬೆಂಬಲಿಗನ ಶಿರಚ್ಛೇದ ಮಾಡಿ ಬರ್ಬರ ಹತ್ಯೆ !!

ನೂಪರ್‌ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿ ವಾಟ್ಸಪ್‌ ಸ್ಟೇಟಸ್‌ ಹಾಕಿದ ಟೈಲರ್‌ ಒಬ್ಬರನ್ನು ಇಬ್ಬರು ಮುಸ್ಲಿಂ ಮೂಲಭೂತವಾದಿ ಯುವಕರು ಬರ್ಬರವಾಗಿ ಶಿರಚ್ಛೇದ ಮಾಡಿದ ಘಟನೆ ರಾಜಸ್ಥಾನದ ಮಾಲ್ಡಾದಲ್ಲಿ ನಡೆದಿದೆ.

 

ಹಾಡಹಗಲೇ ಈ ಘಟನೆ ನಡೆದಿದ್ದು, ಮೃತರನ್ನು ಕನ್ನಯ್ಯ ಲಾಲ್ ಎಂದು ಗುರುತಿಸಲಾಗಿದೆ. ಮಾಲ್ಡಾದಲ್ಲಿ ಈಗ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ ಆರಂಭವಾಗಿದ್ದು, ವರ್ತಕರು ಅಂಗಡಿಗಳನ್ನು ಮುಚ್ಚಿ ಪ್ರತಿಭಟನಾಕಾರರು ಹಂತಕರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಇಬ್ಬರು ಯುವಕರು ಟೈಲರ್‌ ಕನ್ನಯ್ಯಲಾಲ್‌ ಅಂಗಡಿಗೆ ಬಂದಿದ್ದಾರೆ. ಕನ್ನಯ್ಯ ಲಾಲ್‌ ಅಳತೆ ತೆಗೆಯುವ ಸಂದರ್ಭದಲ್ಲಿ ಇವರು ದಾಳಿ ಮಾಡಿ ಹತ್ಯೆ ಮಾಡಿದ್ದಾರೆ.
ಈ ಇಬ್ಬರು ದಾಳಿ ಮಾಡುತ್ತಿರುವ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಅಷ್ಟೇ ಅಲ್ಲದೇ ನೂಪುರ್‌ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದ್ದಕ್ಕೆ ನಾವು ಈ ಕೆಲಸ ಮಾಡಿದ್ದೇವೆ. ಪ್ರಧಾನಿ ಮೋದಿಯನ್ನು ಹತ್ಯೆ ಮಾಡುತ್ತೇವೆ ಎಂದು ಚಾಕು ಹಿಡಿದು ವೀಡಿಯೋದಲ್ಲಿ ಬೆದರಿಕೆ ಒಡ್ಡಿದ್ದಾರೆ.

ಆರೋಪಿಗಳು ಉದಯ್‌ಪುರ ಮೂಲದವರಾಗಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಈ ಘಟನೆಯನ್ನು ಖಂಡಿಸಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಘಟನೆಯ ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ ವಾತಾವರಣವನ್ನು ಹಾಳುಮಾಡಲು ಪ್ರಯತ್ನಿಸಬೇಡಿ ಎಂದು ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ವೀಡಿಯೊವನ್ನು ಹಂಚಿಕೊಳ್ಳುವ ಮೂಲಕ, ಸಮಾಜದಲ್ಲಿ ದ್ವೇಷವನ್ನು ಹರಡುವ ಅಪರಾಧಿಯ ಉದ್ದೇಶವು ಯಶಸ್ವಿಯಾಗುತ್ತದೆ ಎಂದು ಅವರು ಹೇಳಿದರು.

Leave A Reply

Your email address will not be published.