ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್ !! | ಜುಲೈ 1 ರಿಂದ ಟೋಲ್ ಶುಲ್ಕ ಶೇ. 20 ರಷ್ಟು ಹೆಚ್ಚಳ

ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್ ಇದೆ. ಜುಲೈ 1 ರಿಂದ ಬೆಂಗಳೂರು ನಗರದ ಎಲೆಕ್ಟ್ರಾನಿಕ್ ಸಿಟಿ ಹಾಗೂ ಅತ್ತಿಬೆಲೆ ಟೋಲ್ ಶುಲ್ಕ ಶೇ. 20 ರಷ್ಟು ಏರಿಕೆ ಕಾಣಲಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‍ಎಚ್‍ಎಐ) ಟೋಲ್ ಹೆಚ್ಚಳದ ಬಗ್ಗೆ ಎಲಿವೇಟೆಡ್ ಟೋಲ್‍ವೇ ಕಂಪನಿ ಮನವಿ ಸಲ್ಲಿಸಿತ್ತು. ಈ ಮನವಿಗೆ ಎನ್‍ಎಚ್‍ಎಐ ಗ್ರೀನ್ ಸಿಗ್ನಲ್ ನೀಡಿದೆ. ಪರಿಷ್ಕೃತ ಟೋಲ್ ಶುಲ್ಕ ಜುಲೈ 1 ರಿಂದ ಜಾರಿಗೆ ಬರಲಿದೆ. ಒಪ್ಪಂದದ ಪ್ರಕಾರ ರಸ್ತೆ ಬಳಕೆ ಶುಲ್ಕ ಹೆಚ್ಚಳ ಮಾಡಲಾಗಿದ್ದು, ಈ ಶುಲ್ಕವು 2023ರ ಜೂನ್ 30ರವರೆಗೆ ಜಾರಿಯಲ್ಲಿರಲಿದೆ ಎಂದು ಬೆಂಗಳೂರು ಎಲಿವೇಟೆಡ್ ಟೋಲ್‍ವೇ ಕಂಪನಿ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

ಸಿಲ್ಕ್ ಬೋರ್ಡ್ ಜಂಕ್ಷನ್‍ನಿಂದ ಎಲೆಕ್ಟ್ರಾನಿಕ್ ಸಿಟಿ ಹಾಗೂ ಅತ್ತಿಬೆಲೆ ಎರಡೂ ಟೋಲ್ ಗೇಟ್‍ಗಳಿಗೂ ಪರಿಷ್ಕೃತ ಶುಲ್ಕ ಅನ್ವಯವಾಗಲಿದೆ. ಸಿಲ್ಕ್ ಬೋರ್ಡ್ ವೃತ್ತದಿಂದ ಅತ್ತಿಬೆಲೆವರೆಗಿನ ರಸ್ತೆಯಲ್ಲಿ ಐಟಿ ಹಾಗೂ ಇತರೆ ಕಂಪನಿಗಳು ಹೆಚ್ಚಿವೆ. ನಿತ್ಯವೂ ಸಾವಿರಾರು ಮಂದಿ ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಕೊರೊನಾ ಬಳಿಕ ನಿಧಾನವಾಗಿ ಆರ್ಥಿಕ ಚಟುವಟಿಕೆಗಳು ಚೇತರಿಸಿಕೊಳ್ಳುತ್ತಿದ್ದು, ಇಂಥ ಸಂದರ್ಭದಲ್ಲಿ ಏಕಾಏಕಿ ಶುಲ್ಕ ಹೆಚ್ಚಳ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ.

ಇತ್ತ ರಾಷ್ಟ್ರ ರಾಜಧಾನಿ ದೆಹಲಿಯಿಂದ ಡೆಹ್ರಾಡೂನ್ ಸಂಚರಿಸುವ ಎನ್‍ಎಚ್ 58 ರಸ್ತೆಯ ಟೋಲ್ ಕೂಡ ಜುಲೈ 1 ರಿಂದ ಏರಿಕೆ ಆಗಲಿದೆ. ಈಗಾಗಲೇ ಟೋಲ್ ಕಂಪನಿ 10 ರಿಂದ 15 ರೂ. ಏರಿಕೆಗೆ ಎನ್‍ಎಚ್‍ಎಐ ಮನವಿ ಸಲ್ಲಿಸಿತ್ತು. ಈ ಮನವಿಗೆ ಎನ್‍ಎಚ್‍ಎಐ ಒಪ್ಪಿಗೆ ಸೂಚಿಸಿದ್ದು, ಜುಲೈ 1 ರಿಂದ ಶುಲ್ಕ ಏರಿಕೆ ಕಾಣಲಿದೆ.

error: Content is protected !!
Scroll to Top
%d bloggers like this: