ನೈಟ್ ಕ್ಲಬ್ ನಲ್ಲಿ 17 ಜನರು ನಿಗೂಢ ಸಾವು !!

ನೈಟ್ ಕ್ಲಬ್ ನಲ್ಲಿ 17 ಜನರು ನಿಗೂಢವಾಗಿ ಸಾವನ್ನಪ್ಪಿದ್ದು, ಸ್ಥಳೀಯರಲ್ಲಿ ಭೀತಿ ಸೃಷ್ಟಿಸಿದ ಘಟನೆ ದಕ್ಷಿಣ ಆಫ್ರಿಕಾದ ಪೂರ್ವ ಲಂಡನ್ ನಗರದ ಎನೋಬೆನಿ ಟಾವೆರ್ನ್‌ನಲ್ಲಿ ನಡೆದಿದೆ.

 

ಮಾಧ್ಯಮಗಳು ಈ ಕುರಿತು ಭಾನುವಾರ ವರದಿ ಮಾಡಿದ್ದು, ನ್ಯೂಸ್‌ರೂಮ್ ಆಫ್ರಿಕಾ ಟೆಲಿವಿಷನ್ ಚಾನೆಲ್ ಉಲ್ಲೇಖಿಸಿದಂತೆ, ಘಟನೆಯ ಸುತ್ತಲಿನ ಪರಿಸ್ಥಿತಿಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವಕ್ತಾರರು ಬಿಬಿಸಿಗೆ ತಿಳಿಸಿದ್ದಾರೆ. ಅಲ್ಲದೆ, ಮಾಧ್ಯಮ ವರದಿಗಳ ಪ್ರಕಾರ ಮೃತರ ಸಂಬಂಧಿಕರಿಗೆ ಮೃತ ದೇಹಗಳನ್ನು ನೋಡಲು ಅವಕಾಶ ನೀಡುತ್ತಿಲ್ಲ ಎಂದು ವರದಿ ಮಾಡಿವೆ.

ದೇಹಗಳು ಕ್ಲಬ್ ನಲ್ಲಿ ನೆಲದ ಮೇಲೆ ಬಿದ್ದಿವೆ ಎಂದು ಡೈಲಿ ಡಿಸ್ಪ್ಯಾಚ್ ಪತ್ರಿಕೆಯಲ್ಲಿ ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ ಈಸ್ಟರ್ನ್ ಕೇಪ್ ಪೊಲೀಸ್ ಕಮಿಷನರ್ ನೊಮ್ಥೆಲ್ ಲಿಲಿಯನ್ ಮೇನೆ, ಬಾರ್‌ನೊಳಗೆ ಕಾಲ್ತುಳಿತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಇನ್ನು ಮೃತಪಟ್ಟವರ ಪೈಕಿ ಹೆಚ್ಚಿನವರು 18 ರಿಂದ 20 ವರ್ಷದ ಒಳಗಿನವರು ಎಂದು ಬ್ರಿಗೇಡಿಯರ್ ಕಿನಾನಾ ಹೇಳಿದ್ದಾರೆ.

Leave A Reply

Your email address will not be published.