ಕತಾರ್ ನಿಂದ ಬಂದ ಮುಸಲ್ಮಾನನಿಂದ ಅಪ್ರಾಪ್ತ ಹುಡುಗಿಯ ಅಪಹರಣ
ನೇಪಾಳ ಮೂಲದ ನಿವಾಸಿಯೋರ್ವ, ಕತಾರ್ ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದು, ಅಪ್ರಾಪ್ತ ಬಾಲಕಿಯನ್ನು ತನ್ನ ವಶಕ್ಕೆ ತಗೊಂಡು, ಅಪಹರಿಸಿರುವ ಘಟನೆಯೊಂದು ನಡೆದಿದೆ. ಇಜರಾಯಿಲ್ ನದಾಫ ಹೆಸರಿನ ಯುವಕ ರಾಜಸ್ಥಾನದ ದೌಸಾ ಜಿಲ್ಲೆಯ ಬಾಂಧಿಕೂಯಿಯ ಓರ್ವ 13 ವರ್ಷದ ಅಪ್ರಾಪ್ತ ಹುಡುಗಿಯನ್ನು ‘ಇಸ್ಟ್ರಾಗ್ರಾಮ್’ ಮೂಲಕ ಪ್ರೇಮದ ಬಲೆಯಲ್ಲಿ ಬೀಳಿಸಿದ್ದಾನೆ. ನಂತರ ಆಕೆಯನ್ನು ಭೇಟಿ ಮಾಡಲೆಂದು ಆತ ರಾಜಸ್ಥಾನಕ್ಕೆ ಬಂದು ಪುಸಲಾಯಿಸಿ ಆಕೆಯನ್ನು ಅಪಹರಣ ಮಾಡಿದ್ದಾನೆ. ನಂತರ ಹುಡುಗಿ ಮನೆಯವರು ಹುಡುಗಿಯನ್ನು ಅಪಹರಣ ಮಾಡಿದ್ದಾರೆಂದು ಕಂಪ್ಲೇಂಟ್ ಕೊಟ್ಟಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಇವರಿಬ್ಬರನ್ನು ಬಿಹಾರದ ದರ್ಭಂಗಾದಿಂದ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಮುಸ್ಲಿಂ ಯುವಕ ಇಜರಾಯಿಲನನ್ನು ಬಂಧಿಸಿದ್ದಾರೆ. ಹುಡುಗಿಯನ್ನು ಕುಟುಂಬದವರಿಗೆ ಒಪ್ಪಿಸಿದ್ದಾರೆ.
ಪೊಲೀಸರ ತನಿಖೆಯ ಪ್ರಕಾರ, ಸಂತ್ರಸ್ತ ಬಾಲಕಿ, ‘ಫ್ರೀ ಫೈಯರ್ ಗೇಮ್’ ಈ ಆನ್‌ಲೈನ್ ಆಟ ಆಡುತ್ತಿದ್ದರಿಂದ ಆಕೆ ಎಲ್ಲಿ ಇದ್ದಾಳೆ ಎಂದು ತಿಳಿದುಬಂದಿದೆ. ಅದೇ ಆನ್ಲೈನ್ ಗೇಮ್ ನಿಂದ ಆಕೆ ಇನ್ಸ್ಟಾಗ್ರಾಮ್ ಖಾತೆ ಹೊಂದಿರುವುದು ಪೊಲೀಸರಿಗೆ ಕಂಡುಬಂದಿದೆ. ಈ ಖಾತೆ ಇಜರಾಯಿಲ್ ನದಾಫನದ್ದಾಗಿತ್ತು. ಇದರಿಂದ ಪೊಲೀಸರು ನದಾಫ್‌ನ ದೂರವಾಣಿಯ ಸಂಖ್ಯೆಯನ್ನು ಕಂಡುಹಿಡಿದು ಅವರಿಬ್ಬರು ಬಿಹಾರದ ದರಭಂಗಾಗೆ ಬಂದಿರುವುದು ತಿಳಿಯುತ್ತಲೇ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.