ಕನಕಮಜಲು: ಪೆರುಂಬಾರು ಇಲ್ಲಿ ಸಂಜೀವಿನಿ ಮಹಾ ಮೃತ್ಯುಂಜಯ ಶಾಂತಿ ಹೋಮ.

Share the Article

ಕನಕಮಜಲು: ಪೆರುಂಬಾರು ಇವರಿಗೆ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದಂತಹ ಮಧಿಮಾಳು ಮುಖ ಎಂಬ ಸನ್ನಿಧಿಯ ಅಭಿವೃದ್ಧಿಗೋಸ್ಕರ ಕನಕಮಜಲು,ಪೆರುಂಬಾರು, ಆಡ್ಕಾರು,ಕಾರಿಂಜ ಹಾಗೂ ಆಸುಪಾಸಿನಲ್ಲಿ ನೆಲೆಸಿರುವಂತಹ ಸರ್ವ ಧರ್ಮಗಳೊಡಗೂಡಿ ತಮಗೆ ಗೋಚರವಾಗುವ ಆಪತ್ತು ಮತ್ತು ಅವಘಡಗಳ ಶಾಂತಿಗಾಗಿ ನಡೆಸಿದ ಸಂಜೀವಿನಿ ಮಹಾ ಮೃತ್ಯುಂಜಯ ಹೋಮವು ಜೂ.27 ರಂದು ಕನಕಮಜಲಿನ ಪೆರುಂಬಾರು ಸುಶೀಲ ಇವರ ಮನೆಯಲ್ಲಿ ನಡೆಯಿತು.

ಈ ಈ ಸಂದರ್ಭದಲ್ಲಿ ಊರ ಪರವೂರ ಭಕ್ತಾಭಿಮಾನಿಗಳು ಹಾಗೂ ಬಂಧು ಮಿತ್ರರು ಹಾಜರಿದ್ದರು. ಮಹಾ ಮೃತ್ಯುಂಜಯ ಹೋಮವು ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್ ಇವರ ನೇತೃತ್ವದಲ್ಲಿ ನೆರವೇರಿತು.

Leave A Reply