ಇನ್ಮೇಲೆ ಮತ್ತೆ ಕಿರುತೆರೆ “ಬಿಗ್ ಬಾಸ್” ಆಟ ಶುರು! ಸಂಪೂರ್ಣ ಮಾಹಿತಿ ಇಲ್ಲಿದೆ!

ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ರಾಜನೆಂದೇ ಖ್ಯಾತಿ ಪಡೆದ ‘ಬಿಗ್ ಬಾಸ್’ ಗೆ ಒಂದು ವಿಶೇಷ ಸ್ಥಾನ ಇದೆ ಎಂದೇ ಹೇಳಬಹುದು. ಈ ಶೋ ಬಗ್ಗೆ ವೀಕ್ಷಕರ ಮನಸ್ಸನ್ನು ತಟ್ಟಿರೋದರಲ್ಲಿ ಎರಡು ಮಾತಿಲ್ಲ.

 

ಕೊರೊನಾ ಕಾರಣದಿಂದಾಗಿ ಕಳೆದ 2 ವರ್ಷ ಸಾಕಷ್ಟು ತೊಂದರೆಗಳ ನಡುವೆಯೇ ಬಿಗ್ ಬಾಸ್ ಶೋ ನಡೆಯಿತು. ಮೊತ್ತ ಮೊದಲ ಬಾರಿಗೆ ಹಿಂದಿಯಲ್ಲಿ ಸಲ್ಮಾನ್ ಖಾನ್ ನೇತೃತ್ವದಲ್ಲಿ ಈ ಶೋ ಆರಂಭಗೊಂಡಿತು. ನಂತರ ಹಲವಾರು ಭಾಷೆಗಳಲ್ಲಿ ಈ ಶೋ ಆರಂಭವಾಯಿತು. ಅಷ್ಟು ಪ್ರಖ್ಯಾತಿ ಪಡೆದಿದೆ ಈ ಶೋ. ಈ ಶೋ, ಈಗ ಕನ್ನಡ, ತೆಲುಗು, ಮಲಯಾಳಂ, ತಮಿಳು ಸೇರಿದಂತೆ ಹಲವು ಭಾಷೆಗಳಲ್ಲಿ ಭಾರೀ ಮಾಡಿದೆ. ಸದ್ಯ ಬಿಗ್ ಬಾಸ್ ಕುರಿತಂತೆ ಒಂದು ಹೊಸ ನ್ಯೂಸ್ ಹರಿದಾಡುತ್ತಿದೆ. ಇಲ್ಲಿ ಈಗ ನಾವು ಹೇಳಲು ಹೊರಟಿರುವುದು ಕಿಚ್ಚ ಸುದೀಪ್ ನಿರೂಪಣೆ ಮಾಡುವ ‘ಬಿಗ್ ಬಾಸ್ ಕನ್ನಡ’ ಶೋ ಬಗ್ಗೆ ಅಲ್ಲ. ಬದಲಿಗೆ, ಅಕ್ಕಿನೇನಿ ನಾಗಾರ್ಜುನ ನೇತೃತ್ವದ ‘ಬಿಗ್ ಬಾಸ್ ತೆಲುಗು’ ಶೋ ಕುರಿತು.

ಹೌದು, ‘ಬಿಗ್ ಬಾಸ್ ತೆಲುಗು’ ರಿಯಾಲಿಟಿ ಶೋನ 360 ಶುರು ಮಾಡಲು ವೇದಿಕೆ ಸಜ್ಜಾಗಿದ್ದು, ಶೋ ಆರಂಭವಾಗುವ ದಿನಾಂಕದ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ. ಕಳೆದ ವರ್ಷ ಸೀಸನ್ 5 ಮುಗಿದ ಮೇಲೆ ಓಟಿಟಿಗಾಗಿ ಬಿಗ್ ಬಾಸ್ ಶೋವನ್ನು ಮಾಡಲಾಗಿತ್ತು. ಈಗ ‘ಬಿಗ್ ಬಾಸ್ ತೆಲುಗು’ ಸೀಸನ್ 6ಕ್ಕೆ ತಯಾರಿ ಆರಂಭಗೊಂಡಿದೆ. ಅಂದಹಾಗೆ, ಸೆ.4ರಿಂದ ‘ಬಿಗ್ ಬಾಸ್ ತೆಲುಗು’ ಸೀಸನ್ 6 ಶುರುವಾಗಲಿದೆ.

ನಾಗಾರ್ಜುನ ಕೆಲ ಕಮಿಟ್ ಮೆಂಟ್ ನಿಂದಾಗಿ ಕೆಲವೊಂದು ಎಪಿಸೋಡ್‌ಗಳನ್ನು ಮಾಡಲು ಸಾಧ್ಯವಾಗದ ಕಾರಣ ಅದನ್ನು ರಮ್ಯಾಕೃಷ್ಣ ನಡೆಸಿಕೊಟ್ಟಿದ್ದರು. ಕಳೆದ ಸೀಸನ್‌ನಲ್ಲಿ ನಟಿ ಸಮಂತಾ ಮಾಜಿ ಮಾವನ ಪರವಾಗಿ ಒಂದೆರಡು ಸಂಚಿಕೆಗಳ ನಿರೂಪಣೆ ಮಾಡಿದ್ದರು. ಮೂರನೇ ಸೀಸನ್‌ನಿಂದ ನಾಗಾರ್ಜುನ ನಿರೂಪಣೆ ವಹಿಸಿಕೊಂಡಿದ್ದಾರೆ.ಈ ಶೋ ಆರಂಭವಾದಾಗ ಮೊದಲು ಜೂ. ಎನ್‌ಟಿಆರ್ ನಿರೂಪಣೆ ಮಾಡುತ್ತಿದ್ದರು. ನಂತರ ನಾನಿ ಕೂಡ ನಿರೂಪಣೆ ಮಾಡಿದರು.ಆದರೆ ಈ ಬಾರಿ ನಿರೂಪಕರು ಬದಲಾಗುವ ಸಾಧ್ಯತೆ ಎಂಬ ಊಹಾಪೋಹ ಕೂಡಾ ಹಬ್ಬಿತ್ತು. ಆದರೆ ಈ ಮಾತು ಈಗ ಸುಳ್ಳಾಗಿದೆ. ಏಕೆಂದರೆ ಈ ಬಾರಿಯೂ ನಾಗಾರ್ಜುನ ಅವರೇ ನಿರೂಪಕರಾಗಿ ಮುಂದುವರಿಯಲಿದ್ದಾರೆ.

ಈ ಬಾರಿಯ ಬಿಗ್ ಬಾಸ್ ಶೋಗೆ ಯಾರು
ಹೋಗಲಿದ್ದಾರೆ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿವೆ. ಸೆಲೆಬ್ರಿಟಿಗಳ ಜೊತೆಗೆ ಕಾಮನ್ ಮ್ಯಾನ್‌ಗೂ ಮನೆಯೊಳಗೆ ಪ್ರವೇಶ ಇರಲಿದೆಯಂತೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

Leave A Reply

Your email address will not be published.