ಫೇಸ್ಬುಕ್ ಮೂಲಕ ಅಭಿಮಾನಿಗಳನ್ನು ಹೊಂದಿದ್ದ ಮಹಿಳೆಯ ಬರ್ಬರ ಹತ್ಯೆ!!

ಗಂಡನಿಂದ ದೂರವಾಗಿ ಬೇರೊಬ್ಬನೊಂದಿಗೆ ಸುಖಸಂಸಾರ ನಡೆಸುತ್ತಿದ್ದ ಮಹಿಳೆಯೊಬ್ಬಳನ್ನು ಆಕೆಯ ಮಾಜಿ ಪತಿಯೇ ಮಹಡಿ ಮೇಲಿಂದ ತಳ್ಳಿ ಕೊಲೆ ನಡೆಸಿದ ಘಟನೆಯೊಂದು ಬೆಳಕಿಗೆ ಬಂದಿದೆ.

 

ಮೃತ ಮಹಿಳೆಯನ್ನು ಫೇಸ್ಬುಕ್ ನಲ್ಲಿ ತನ್ನ ಬ್ಲಾಗ್ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿರುವ ರಿತಿಕಾ ಸಿಂಗ್ (30)ಎಂದು ಗುರುತಿಸಲಾಗಿದೆ.ಕೃತ್ಯ ಎಸಗಿದ ಆಕೆಯ ಮಾಜಿ ಪತಿ ಆಕಾಶ್ ಗೌತಮ್ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ.

2014ರಲ್ಲಿ ಆಕಾಶ್ ನನ್ನು ವಿವಾಹವಾಗಿದ್ದ ರಿತಿಕಾ ವೈವಾಹಿಕ ಮನಸ್ತಾಪದಿಂದ 2018ರ ಬಳಿಕ ಇಬ್ಬರ ನಡುವೆ ಅಂತರ ಕಾಯ್ದುಕೊಂಡಿದ್ದರು.ಆ ಬಳಿಕ ಫೇಸ್ಬುಕ್ ಮೂಲಕ ಪರಿಚಯವಾದ ಯುವಕನೊಬ್ಬನನ್ನು ಮದುವೆಯಾದ ರಿತಿಕಾ ಆತನೊಂದಿಗೆ ಬಾಳ್ವೆ ನಡೆಸುತ್ತಿದ್ದಳು ಎನ್ನಲಾಗಿದೆ. ಇದರಿಂದ ಕೋಪಗೊಂಡ ಮಾಜಿ ಪತಿ ಆಕಾಶ್ ಇಬ್ಬರು ಮಹಿಳೆಯರು ಹಾಗೂ ಯುವಕರೊಂದಿಗೆ ರಿತಿಕಾ ತಂಗಿದ್ದ ಫ್ಲಾಟ್ ಗೆ ತೆರಳಿದ್ದ.

ಅಲ್ಲಿ ಮಾತಿಗೆ ಮಾತು ಬೆಳೆದು ರಿತಿಕಾ ಹಾಗೂ ಆಕೆಯ ಭಾವಿ ಪತಿಯ ಮೇಲೆ ಆಕಾಶ್ ಹಾಗೂ ಆತನ ತಂಡ ಹಲ್ಲೆ ನಡೆಸಿದ್ದು, ಆ ನಂತರ ರಿತಿಕಾಳನ್ನು ನಾಲ್ಕನೇ ಮಹಡಿಯಿಂದ ಕೆಳಕ್ಕೆ ತಳ್ಳಿ ಕೊಲೆ ನಡೆಸಿ ಪರಾರಿಯಾಗಿದ್ದರು. ಘಟನೆ ಬೆಳಕಿಗೆ ಬರುತ್ತಿದ್ದಂತೆ ಕಾರ್ಯಾಚರಣೆಗಿಳಿದ ಪೊಲೀಸರು ಕೃತ್ಯ ಎಸಗಿದ ತಂಡವನ್ನು ಹೆಡೆಮುರಿಕಟ್ಟಿದ್ದಾರೆ.

Leave A Reply

Your email address will not be published.