ಡುಕಾಟಿ ಬೈಕ್ ಸೇತುವೆ ಕೆಳಗಿಂದ ಬಿದ್ದು ಇನ್ಫೋಸಿಸ್ ಉದ್ಯೋಗಿ ಸ್ಪಾಟ್ ಡೆತ್

Share the Article

ಬೈಕ್‌ನಲ್ಲಿ ಜಾಲಿ ರೈಡ್‌ಗೆ ಹೊರಟ್ಟಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಸೇತುವ ಮೇಲಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಬಳಿ ಭಾನುವಾರ ಬೆಳಗ್ಗೆ ಸಂಭವಿಸಿದೆ.

ಮೃತ ಟೆಕ್ಕಿಯನ್ನು ಬೆಂಗಳೂರಿನ ಬನಶಂಕರಿ ಎರಡನೇ ಹಂತದ ನಿವಾಸಿ ಸೂರಜ್ ( 27) ಎಂದು ಗುರುತಿಸಲಾಗಿದೆ.
ಸೂರಜ್ ಬೆಂಗಳೂರಿನ ಇನ್ಫೋಸಿಸ್ ಕಂಪನಿಯಲ್ಲಿ ಇಂಜಿನಿಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಇಂದು ಭಾನುವಾರ ರಜಾ ದಿನವಾದ ಕಾರಣ ಬೆಳಿಗ್ಗೆಯೇ ಸ್ನೇಹಿತರೊಂದಿಗೆ ಡುಕಾಟಿ ಬೈಕ್‌ನಲ್ಲಿ ಎಡಿಯೂರು ಬಳಿ ಇರುವ ಧ್ರುವತಾರೆ ಎಂಬ ಹೋಟೆಲ್‌ಗೆ ಹೋಗುವಾಗ ಈ ದುರ್ಘಟನೆ ನಡೆದಿದೆ. ಕುಣಿಗಲ್ ತಾಲೂಕಿನ ಗವಿಮಠ ಬಳಿ ಈ ಅವಘಡ ಸಂಬವಿಸಿದೆ.

ಬೈಕ್ ಗೆ ಟಿಟಿ ವಾಹನದ ಡಿಕ್ಕಿ ಹೊಡೆದ ರಭಸಕ್ಕೆ, ಸೇತುವೆಯಿಂದ ಬೈಕ್ ಕೆಳಗೆ ಬಿದ್ದಿದೆ. ಬೈಕ್ ನ ವರ್ಗಕ್ಕೆ ಜತೆಗೆ ಕೆಳಕ್ಕೆ ಬಿದ್ದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

Leave A Reply