ವಾಹನದ ಗ್ಲಾಸ್ ಒರೆಸುವ ನೆಪದಲ್ಲಿ ಫಾಸ್ಟ್‌ಟ್ಯಾಗ್ ಸ್ಕ್ಯಾನ್ ಮಾಡಿ ಹಣ ಕದಿಯುವ ಮಕ್ಕಳು ? ಇಲ್ಲಿದೆ ಫ್ಯಾಕ್ಟ್ ಚೆಕ್
ಕಾರಿನ ವಿಂಡ್ಶೀಲ್ಡ್ ಅನ್ನು ಒರೆಸುವ ನೆಪದಲ್ಲಿ ಮಕ್ಕಳು ಫಾಸ್ಟ್ಟ್ಯಾಗ್ ಸ್ಕ್ಯಾನ್ ಮಾಡುವ ಮೂಲಕ ಹಣವನ್ನು ಹೇಗೆ ಕದಿಯುತ್ತಿದ್ದಾರೆ ಎಂದು ತೋರಿಸುವ ವೀಡಿಯೊ ವೈರಲ್ ಆಗಿದೆ. ಆದರೆ ಇದರ ಫ್ಯಾಕ್ಟ್ ಚೆಕ್ ಇಲ್ಲಿದೆ
ಫಾಸ್ಟ್‌ಟ್ಯಾಗ್ ಸ್ಕ್ಯಾನ್ ಮಾಡುವ ಮೂಲಕ ಕೆಲವು ಮಕ್ಕಳು ಹಣವನ್ನು ಕದಿಯುತ್ತಿದ್ದಾರೆ ಎಂಬ ವಿಡಿಯೋ ವೈರಲ್ ಆಗುತ್ತಿದೆ. ಈ ಬಗ್ಗೆ NPCI ಮತ್ತು Paytm ನೀಡಿದ ಸ್ಪಷ್ಟೀಕರಣ ಇಲ್ಲಿದೆ ನೋಡಿ.
ಈ ವೀಡಿಯೊ ಕೆಲವು ದಿನಗಳಿಂದ ಹರಿದಾಡುತ್ತಿದೆ. ಆದರೆ ಈ ವಿಡಿಯೋ ಫೆಕ್ ಎಂದು ನ್ಯಾಷನಲ್ ಪೇಮೆಂಟ್ಸ್ ಕೌನ್ಸಿಲ್ ಆಫ್ ಇಂಡಿಯಾ ಸ್ಪಷ್ಟನೆ ನೀಡಿದೆ. ಒಬ್ಬ ವ್ಯಕ್ತಿಯು ಫಾಸ್ಟ್ಟ್ಯಾಗ್ ಸ್ಕ್ಯಾನ್ ಮಾಡಲು ಮತ್ತು ಮಾಲೀಕರ ಖಾತೆಯಿಂದ ಹಣವನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದೆ.
ವಿಡಿಯೋ ಬಗ್ಗೆ Paytm ಹೇಳಿಕೆಯನ್ನು ಬಿಡುಗಡೆ ಮಾಡಿ ವಿಡಿಯೋ ಫಾಸ್ಟ್ಟ್ಯಾಗ್ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತಿದೆ ಎಂದು ಹೇಳಿದೆ. ಫಾಸ್ಟ್ಯಾಗ್ ಪಾವತಿಗಳನ್ನು ಅಧಿಕೃತ ವ್ಯಾಪಾರಿಗಳು ಮಾತ್ರ ಪ್ರಾರಂಭಿಸಬಹುದು. ಬಹು ಸುತ್ತಿನ ಪರೀಕ್ಷೆಯ ನಂತರ ಆನ್‌ಬೋರ್ಡ್ ಮಾಡಬಹುದು. Paytm FASTag ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದಿದೆ.