ಮದುವೆಯಾಗಲು ಹುಡುಗಿ ಸಿಕ್ಕಿಲ್ಲವೆಂದು ಜನ ಬೆರಗಾಗುವಂತೆ ಹೊಸ ಪ್ಲಾನ್ ಮಾಡಿದ ಯುವಕ

 

ಇತ್ತೀಚಿನ ದಿನಗಳಲ್ಲಿ ಮದುವೆಗೆ ಹೆಣ್ಣು ಸಿಗುವುದೇ ಕಷ್ಟವಾಗಿದೆ ಎಂದು ಇಲ್ಲೊಬ್ಬ ವಧು ಸಿಗದೆ ಕಂಗಾಲಾಗಿದ್ದ ಈತ ಕೊನೆಗೆ ತನ್ನದೇ ಆದ ಅದ್ಭುತ ಪ್ಲಾನ್ ಮಾಡಿದ್ದರಂತೆ.

ತಮಿಳುನಾಡಿನ ಎಂ.ಎಸ್ ಜಗನ್‌ ಎಂಬವರ ಮ್ಯಾಟ್ರಿಮೋನಿಯಲ್ ಸೈಟ್‌ಗಳಲ್ಲಿನ ಮ್ಯಾಟ್ರಿಮೋನಿಯಲ್  ಜಾಹೀರಾತುಗಳು ಮತ್ತು ಪ್ರೊಫೈಲ್‌ಗಳು ಎಲ್ಲೆಡೆ ವೈರಲ್ ಆಗಿವೆ. ಯಾಕೆಂದರೆ ಇವರು ಊರಲ್ಲಿ ಎಲ್ಲೆಡೆ ಹುಡುಗಿ ಬೇಕೆಂಬ ಪೋಸ್ಟ್‌ನ್ನು ಲಗತ್ತಿಸಿದ್ದಾರೆ. 

ಪೋಸ್ಟರ್‌ಗಳು ಹುಡುಗಿಗಾಗಿ ಹುಡುಕುತ್ತಿರುವ ಶೀರ್ಷಿಕೆಯನ್ನು ಹೊಂದಿದೆ. ಪೋಸ್ಟರ್‌ಗಳಲ್ಲಿ ಜಗನ್ ಅವರ ಫೋಟೋ ಮತ್ತು ಅವರ ಹೆಸರು, ಜಾತಿ, ಸಂಬಳ, ವೃತ್ತಿ, ವಿಳಾಸ ಮತ್ತು ಅವರು ತುಂಡು ಭೂಮಿ ಹೊಂದಿದ್ದಾರೆ ಎಂಬ ವಿವರಗಳನ್ನು ಹೊಂದಿದೆ.

ಕೆಲವೊಬ್ಬರು ಪೋಸ್ಟರ್ ಕಲ್ಪನೆಯನ್ನೂ ಅಪಹಾಸ್ಯ ಮಾಡುತ್ತಾರೆ ಎಂದು ಜಗನ್ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನನ್ನೂ ಅಪಹಾಸ್ಯ ಮಾಡಲಾಗಿದೆ, ಆದರೆ ನಾನು ಹೆದರುವುದಿಲ್ಲ. ಅವರು ನನ್ನ ಪೋಸ್ಟರ್‌ನಿಂದ ಮೀಮ್‌ಗಳನ್ನು ಮಾಡುತ್ತಿದ್ದಾರೆ, ಆದರೆ ನಾನು ಅದರಿಂದ ಪ್ರಭಾವಿತನಾಗುವುದಿಲ್ಲ. ಅವರ ಖರ್ಚಿನಿಂದ ನಾನು ವೈರಲ್ ಆಗುತ್ತಿದ್ದೇನೆ ಎಂದು ಜಗನ್ ಹೇಳಿದ್ದಾರೆ.

Leave A Reply

Your email address will not be published.