ಮಂಗಳೂರು: ಮೊಬೈಲ್ ಟವರ್ ಕಳ್ಳತನ!

Share the Article

ಮಂಗಳೂರು : ಮೊಬೈಲ್ ನೆಟ್‌ವರ್ಕ್ ಟವರ್ ಕಳ್ಳತನವಾಗಿರುವ ವಿಲಕ್ಷಣ ಘಟನೆ ನಗರದಲ್ಲಿ ನಡೆದಿದೆ. ಕಂಪನಿಯೊಂದು ಸ್ಥಾಪಿಸಿದ್ದ ಮೊಬೈಲ್ ನೆಟ್‌ವರ್ಕ್ ಟವರ್ ಕಳ್ಳತನವಾಗಿದೆ. ಎಂದು ಆ ಸಂಸ್ಥೆಯ ಪ್ರತಿನಿಧಿ ಉತ್ತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬೆಂಗಳೂರಿನಲ್ಲಿರುವ ಜಿಟಿಎಲ್ ಇನ್‌ಫ್ರಾಸ್ಟ್ರೆಕ್ಟರ್ ಲಿಮಿಟೆಡ್ ಎಂಬ ಕಂಪನಿಯು ಕಸಬಾ ಬಜಾರ್ ಬಳಿಯ ಸೈಟ್‌ನಲ್ಲಿ ಏಪ್ರಿಲ್ 6, 2009 ರಂದು ಟವರ್ ಅನ್ನು ಸ್ಥಾಪಿಸಿತ್ತು. ಕಂಪನಿಯ ತಂತ್ರಜ್ಞರು ಮೇ 31, 2021 ರಂದು ಸ್ಥಳಕ್ಕೆ ಭೇಟಿ ನೀಡಿದಾಗ, ಟವರ್ ಕಾಣೆಯಾಗಿತ್ತು.

ನಾಪತ್ತೆಯಾಗಿರುವ ಗೋಪುರದ ಬೆಲೆ 22.45 ಲಕ್ಷ ರೂ. ಈ ಸಂಬಂಧ ಸಂಸ್ಥೆಯ ಪ್ರತಿನಿಧಿ ಸಂದೀಪ್ ಎಂಬುವರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave A Reply