ನೂರಕ್ಕೂ ಹೆಚ್ಚು ಬೈಕ್ ಗಳ ಮೇಲೆ ಬುಲ್ಡೋಜರ್‌ ಹತ್ತಿಸಿದ ಪೊಲೀಸ್‌ ಇಲಾಖೆ!; ಕಾರಣ?

Share the Article

ಬೈಕ್ ಅಂದ್ರೆ ಪ್ರಾಣ ಬಿಡೋ ಯುವಕರು, ಹೇಗಪ್ಪಾ ಬೈಕ್ ಖರೀದಿ ಮಾಡೋದು ಎಂದು ಯೋಚಿಸುತ್ತಿರುತ್ತಾರೆ. ಆದ್ರೆ ಇಲ್ಲಿ ಪ್ರೀತಿಯಿಂದ ಖರೀದಿ ಮಾಡಿದ್ದ ಬೈಕ್ ಗಳನ್ನು ಪೊಲೀಸ್‌ ಇಲಾಖೆ ಬುಲ್ಡೋಜರ್‌ ತಂದು ನಾಶ ಮಾಡಿದ ಘಟನೆ ನಡೆದಿದೆ.

ಅಷ್ಟಕ್ಕೂ ದುಬಾರಿ ಬೈಕ್ ಗಳ ನಾಶಕ್ಕೆ ಕಾರಣ ಏನೆಂದು ಮುಂದೆ ಓದಿ..ನ್ಯೂಯಾರ್ಕ್‌ನ ಮೇಯರ್‌ ಎರಿಕ್‌ ಆಡಮ್, ರಸ್ತೆಗಳಲ್ಲಿ ಅಪಾಯಕಾರಿ ವಾಹನಗಳನ್ನ ನಿರ್ಮೂಲನೆ ಮಾಡಬೇಕು ಎಂದು ಅಲ್ಲಿನ ಪೊಲೀಸರಿಗೆ ಆದೇಶ ನೀಡಿದ್ದರು. ಹೀಗಾಗಿ ಪೊಲೀಸರು ನೂರಕ್ಕೂ ಅಧಿಕ ಅತ್ಯಂತ ವಿನಾಶಕಾರಿ ಎನಿಸುವ ಬೈಕ್ ಗಳ ಮೇಲೆ ಬುಲ್ಡೋಜರ್‌ ಹತ್ತಿಸಿ ನಾಶಗೊಳಿಸಿದ್ದಾರೆ.

ನ್ಯೂಯರ್ಕ್ ಪೊಲೀಸರು ಸುಮಾರು 100 ಡರ್ಟ್‌ ಬೈಕ್‌, ಆಲ್‌ ಟೆರೈನ್‌ ವೆಹಿಕಲ್ಸ್‌ ಮತ್ತೆ ಇತರ ಅಕ್ರಮ ವಾಹನಗಳನ್ನ ವಶಪಡಿಸಿಕೊಂಡಿದ್ದರು. ಈಗ ಬುಲ್ಡೋಜರ್‌ ತಂದು 100 ಬೈಕುಗಳನ್ನ ಕೂಡ ನಾಶ ಮಾಡಿದ್ದಾರೆ.

Leave A Reply