ವಿಟ್ಲ:ಹಿಂದೂ ಸಂಘಟನೆಯ ಇತ್ತಂಡಗಳ ಮಧ್ಯೆ ಮಾರಾಮಾರಿ!! ಮಡಿಕೇರಿಯಲ್ಲಿ ಮತ್ತೆ ಮೂವರ ಬಂಧಿಸಿದ ವಿಟ್ಲ ಪೊಲೀಸ್

ವಿಟ್ಲ: ವೈಯಕ್ತಿಕ ವಿಚಾರದಲ್ಲಿ ಹಿಂದೂ ಸಂಘಟನೆಗಳ ಎರಡು ತಂಡಗಳ ನಡುವೆ ಸಾಲೆತ್ತೂರಿನ ಅಗರಿಯಲ್ಲಿ ಮಾರಾಮಾರಿ ನಡೆದಿತ್ತು. ಈ ಸಂಬಂಧ ಒಟ್ಟು 19 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು. ಈಗಾಗಲೇ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದು, ಮತ್ತೆ ಮೂವರು ಹಿಂದೂ ಸಂಘಟನೆಯ ಮುಖಂಡರನ್ನು ಬಂಧಿಸಿದ್ದಾರೆ.

 

ಪ್ರಶಾಂತ್ ಅಲಿಯಾಸ್ ಪಚ್ಚು ಎಂಬವನಿಗೆ ಚೂರಿ ಇರಿತ ಪ್ರಕರಣದಲ್ಲಿ ಪರಾರಿಯಾಗಿದ್ದ ಆರೋಪಿಗಳಾದ ಚಂದ್ರಹಾಸ್ ಕನ್ಯಾನ, ನಾಗೇಶ್ ಮತ್ತು ದೇವದಾಸ ಎಂಬವರನ್ನು ಮಡಿಕೇರಿ ಸಮೀಪದಲ್ಲಿ ವಿಟ್ಲ ಠಾಣಾ ಇನ್ಸಪೆಕ್ಟರ್‍ ನಾಗಾರಾಜ್ H ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವೈಯಕ್ತಿಕ ವಿಚಾರದಲ್ಲಿ ಸಂಘಟನೆಗಳ ಎರಡು ತಂಡಗಳ ನಡುವೆ ಸಾಲೆತ್ತೂರಿನ ಅಗರಿಯಲ್ಲಿ ಮಾರಾಮಾರಿ ನಡೆದಿತ್ತು. ಈ ಬಗ್ಗೆ ಇತ್ತಂಡಗಳೂ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಒಟ್ಟು 19 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿ ನಾಲ್ವರನ್ನು ವಶಕ್ಕೆ ಪಡೆದಿದ್ದರು. ತನಿಖೆ ಮುಂದುವರಿದು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಒಟ್ಟು 7 ಆರೋಪಿಗಳನ್ನು ಬಂಧಿಸಲಾಗಿದೆ.

Leave A Reply

Your email address will not be published.