ಮಂಗಳೂರು : ಎಲೆಕ್ಟ್ರಿಕ್ ಶೋ ರೂಂನಲ್ಲಿ ಭಾರೀ ಬೆಂಕಿ ಅವಘಡ | ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾದ ವಾಹನಗಳು!

ಮಂಗಳೂರು: ಎಲೆಕ್ಟ್ರಿಕ್‌ ದ್ವಿಚಕ್ರ ವಾಹನದ ಶೋ ರೂಂನಲ್ಲಿ ಭಾರಿ ಬೆಂಕಿ ಆಕಸ್ಮಿಕ ಸಂಭವಿಸಿದ ಘಟನೆ ಮಂಗಳೂರು ನಗರದ ನಾಗುರಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.

ನಾಗುರಿಯಲ್ಲಿರುವ ಪ್ರಶಾಂತ್ ಮಾಲಕತ್ವದ
ಓಕಿನವ ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್‌ನಲ್ಲಿ ಇಂದು ಬೆಳಗ್ಗೆ ಏಕಾಏಕಿ ಬೆಂಕಿ ಅವಘಡ ಸಂಭವಿಸಿದೆ. ಈ ವೇಳೆ ಶೋರೂಂನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಹಲವು ವಾಹನಗಳು ಬೆಂಕಿಗಾಹುತಿಯಾಗಿವೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಘಟನೆಯಲ್ಲಿ ಯಾವುದೇ ಸಾವು-ನೋವು ಉಂಟಾಗಿಲ್ಲ. ಸ್ಥಳಕ್ಕೆ ಪಾಂಡೇಶ್ವರ ಅಗ್ನಿಶಾಮಕ ದಳ ಧಾವಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಬೆಂಕಿ ಅವಘಡಕ್ಕೆ ಕಾರಣ ತಿಳಿದು ಬಂದಿಲ್ಲ.

Leave a Reply

error: Content is protected !!
Scroll to Top
%d bloggers like this: