ಈ ವಾರ ತೆರೆಕಾಣಲಿರುವ ಕನ್ನಡದ ನಾಲ್ಕು ಸಿನಿಮಾಗಳಿವು; ನೋಡಿ ಈ ವಿಕೆಂಡ್ ಮಜವಾಗಿಸಿ

 

ಈ ವಾರ ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಹಲವು ಸಿನಿಮಾಗಳು ತೆರೆಗೆ ಬಂದಿವೆ. ಈ ವಾರ ನಾಲ್ಕು ಕನ್ನಡ ಸಿನಿಮಾಗಳು ತೆರೆಗೆ ಬಂದಿವೆ. ಅದರ ಪಟ್ಟಿ ಹಾಗು ವಿವರ ಇಲ್ಲಿದೆ ನೋಡಿ

ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಹರಿ ಕತೆ ಅಲ್ಲ ಗಿರಿ ಕತೆ’ ಸಿನಿಮಾ ಈ ದಿನ (ಜೂನ್ 24) ಬಿಡುಗಡೆ ಆಗಿದೆ. ಸಿನಿಮಾದಲ್ಲಿ ರಿಷಬ್ ಶೆಟ್ಟಿ, ರಚನಾ ಇಂದರ್, ತಪಸ್ವಿನಿ, ಪ್ರಮೋದ್ ಶೆಟ್ಟಿ, ಹೊನ್ನವಳ್ಳಿ ಕೃಷ್ಣ ಇತರರು ನಟಿಸಿದ್ದಾರೆ. ಸಿನಿಮಾ ನಿರ್ದೇಶಕನೊಬ್ಬನ ಕತೆಯನ್ನು ಹೊಂದಿರುವ ‘ಹರಿ ಕತೆ ಅಲ್ಲ ಗಿರಿ ಕತೆ’ ಹಾಸ್ಯದ ಜೊತೆಗೆ ಜೀವನ ಸತ್ಯವನ್ನು, ಸಾಮಾನ್ಯ ವ್ಯಕ್ತಿಯ ಸಂಕಷ್ಟಗಳನ್ನು ಹೇಳುವ ಕತೆ ಹೊಂದಿದೆ.

ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್‌ರ ಮೊದಲ ಸಿನಿಮಾ ‘ತ್ರಿವಿಕ್ರಮ್’ ಇಂದು ಬಿಡುಗಡೆ ಆಗುತ್ತಿದೆ. ಸಿನಿಮಾದಲ್ಲಿ ಆಕಾಂಕ್ಷ ಎಸ್ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ಸಾಧುಕೋಕಿ, ಚಿಕ್ಕಣ್ಣ, ಸುಚೇಂದ್ರ ಪ್ರಸಾದ್ ಇನ್ನಿತರರು ಇದ್ದಾರೆ. ಸಹನಾ ಮೂರ್ತಿ ಎಸ್ ನಿರ್ದೇಶನ ಮಾಡಿದ್ದಾರೆ. ತ್ರಿವಿಕ್ರಮ್’ ಪ್ರೇಮ ಕತೆಯಾಗಿದ್ದು, ಒಬ್ಬ ಸಾಧಾರಣ ಹುಡುಗ ಜೈನ ಧರ್ಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಾನೆ ಆ ನಂತರ ಅವರ ಬಾಳಿನಲ್ಲಿ ಏನೇನು ಬದಲಾವಣೆ ಆಗುತ್ತದೆ. ಅವರ ಪ್ರೀತಿ ಏನಾಗುತ್ತದೆ ಎಂಬ ಕತೆ ಸಿನಿಮಾದಲ್ಲಿದೆ.

ತುರ್ತು ನಿರ್ಗಮನ’ ಇಂದು ಬಿಡುಗಡೆ ಆಗುತ್ತಿದೆ. ಸಿನಿಮಾದಲ್ಲಿ ಸುನಿಲ್ ರಾವ್, ಸುಧಾರಾಣಿ, ರಾಜ್ ಬಿ ಶೆಟ್ಟಿ, ಅಚ್ಯುತ್ ಕುಮಾರ್ ಇನ್ನೂ ಹಲವರು ನಟಿಸಿದ್ದಾರೆ. ರಾಜ್ ಬಿ ಶೆಟ್ಟಿ, ಟ್ಯಾಕ್ಸಿ ಡ್ರೈವರ್ ಪಾತ್ರದಲ್ಲಿ ನಟಿಸಿದ್ದಾರೆ. ಬೇಜವಾಬ್ದಾರಿ ವ್ಯಕ್ತಿಯೊಬ್ಬ ಸತ್ತು ನಂತರ ಮೂರು ದಿನಗಳ ಅವಧಿಗೆ ಮತ್ತೆ ಭೂಮಿಗೆ ಬರುವ, ಭೂಮಿಗೆ ಬಂದು ತಾನು ಮಾಡಬೇಕಾಗಿದ್ದ ಕೆಲಸಗಳನ್ನು ಮಾಡುವ ಭಿನ್ನ ಕತೆಯನ್ನು ಹೊಂದಿರುವ ಸಿನಿಮಾ ಇದು.

ಯುವ ನಟ, ನಿರ್ದೇಶಕರ ಹೊಸ ಪ್ರಯತ್ನ ‘ಬಡ್ಡೀಸ್’ ಇಂದು ತೆರೆಗೆ ಬರುತ್ತಿದೆ. ಕಾಲೇಜು ಕತೆಯುಳ್ಳ ಈ ಸಿನಿಮಾದಲ್ಲಿ ಕಿರಣ್ ರಾಜ್ ನಾಯಕ, ಸಿರಿ ಪ್ರಹಲ್ಲಾದ್ ನಾಯಕಿ. ಗೋಪಾಲ್ ದೇಶಪಾಂಡೆ, ಅರವಿಂದ ಬೋಳಾರ್ ಇನ್ನೂ ಹಲವರು ನಟಿಸಿದ್ದಾರೆ. 

Leave A Reply

Your email address will not be published.