ಮಂಗಳೂರು: ಶ್ರೀ ರಾಧಾ ಗೋವಿಂದ ದೇವಸ್ಥಾನದ ವತಿಯಿಂದ ಆನ್ಲೈನ್ ಭಗವತ್ಗೀತೆ ಕಾರ್ಯಕ್ರಮ!! ಪ್ರತೀ ದಿನ ನುರಿತ ಬೋಧಕರಿಂದ ಭೋಧನೆ-ಪಾಲು ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಮಂಗಳೂರು: ಆಧ್ಯಾತ್ಮಿಕ ಶಿಕ್ಷಣದ ಜೊತೆಗೆ ಭಗವತ್ಗೀತೆ ಭೋಧನೆ ನೀಡುವ ಜಿಲ್ಲೆಯ ಏಕೈಕ ವಿದ್ಯಾಲಯ ಎಂದೇ ಹೆಸರುವಾಸಿಯಾದ ಶ್ರೀ ಶ್ರೀ ರಾಧಾ ಗೋವಿಂದ ದೇವಸ್ಥಾನ ಸ್ಥಳಾಂತರಗೊಂಡು ಕುಳಾಯಿಯ ಹಚ್ಚ ಹಸಿರ ವಾತಾವರಣದಲ್ಲಿ ನವೀಕೃತಗೊಳ್ಳುತ್ತಿದೆ.

ನವೀಕರಣಗೊಳ್ಳುತ್ತಿರುವ ದೇವಾಲಯ

ಈ ಮೊದಲು ನಂತೂರ್ ನಲ್ಲಿ ಇದ್ದ ದೇವಾಲಯವು ಆಡಳಿತ ಮೊಕ್ತೇಸರರಾದ ಶ್ರೀ ಮಾನ್ ನಾಮ ನಿಷ್ಠ ದಾಸ್ ಅವರ ಮಾರ್ಗದರ್ಶನದಲ್ಲಿ ನವೀಕೃತಗೊಳ್ಳುತ್ತಿದೆ. ಸಮಾಜದ ವಾಸ್ತವ ಸಂಗತಿಗಳ ನಡುವೆ ಯುವಜನತೆ ವೇದ ಪುರಾಣಗಳನ್ನು ಅರಿತುಕೊಂಡು ಸದೃಢ,ಹಿಂದೂ ಸಮಾಜದ ನಿರ್ಮಾಣ ಕಾರ್ಯಕ್ಕೆ ಪಣತೊಡಬೇಕು ಎನ್ನುವ ದೃಷ್ಟಿಯಲ್ಲಿ ಆನ್ ಲೈನ್ ಭಗವತ್ಗೀತೆ ಕಾರ್ಯಕ್ರಮವನ್ನೂ ಕೈಗೊಳ್ಳಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ಹಲವು ವಿಧಗಳನ್ನು ಮಾಡಲಾಗಿದ್ದು, ಮಕ್ಕಳ, ವಯಸ್ಕರ ಸಹಿತ ಹಿರಿಯರಿಗೂ ಭಗವತ್ಗೀತೆ ಆಲಿಸಲು ಅವಕಾಶ ಕಲ್ಪಿಸಲಾಗಿದೆ. ದಿನದಲ್ಲಿ ನಾಲ್ಕು ಅಥವಾ ಮೂರು ಬಾರಿ ನಡೆಯುವ ತರಗತಿಯಲ್ಲಿ ವೇದ ಪುರಾಣಗಳಲ್ಲಿ ನುರಿತ ಅನುಭವೀ ಬೋಧಕರು ಭಗವತ್ಗೀತೆ ಸಾರವನ್ನು ಭೋಧಿಸಲಿದ್ದಾರೆ.ಈ ಕಾರ್ಯಕ್ರಮದಲ್ಲಿ ಪ್ರತೀ ದಿನವೂ ಭಾಗವಹಿಸಲು isconmangaluru.com ಲಿಂಕ್ ಮುಖಾಂತರ ಜಾಯಿನ್ ಆಗಲು ಕೋರಲಾಗಿದೆ.

Leave A Reply

Your email address will not be published.