ಗ್ರಾಹಕರೇ ಗಮನಿಸಿ !! | ಮಾರುಕಟ್ಟೆಯಲ್ಲಿ ಉತ್ತುಂಗಕ್ಕೆ ಏರಿದ್ದ ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ

ಜನಸಾಮಾನ್ಯರಿಗೊಂದು ತೃಪ್ತಿದಾಯಕ ಸುದ್ದಿಯೊಂದಿದೆ. ಇಂದು ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಕಡಿಮೆಯಾಗಿದ್ದು, ಮಾರುಕಟ್ಟೆಯತ್ತ ತೆರಳಲು ಯೋಜನೆ ಹೂಡಿದ್ದರೆ ಇಂದೇ ಹೋಗಿ ಖರೀದಿಸುವುದು ಉತ್ತಮ. ಯಾಕೆಂದರೆ ಇಂದು ಕೆಲವೊಂದು ತರಕಾರಿ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ.

 

ನೂರು ರೂ. ದಾಟಿದ್ದ ಟೊಮೆಟೊ ದರ ಇದೀಗ ಅರ್ಧಕ್ಕಿಂತ ಇಳಿಕೆಯಾಗಿದೆ. ಕಳೆದ ತಿಂಗಳು ಜನ ಟೊಮೇಟೊ ದರ ಕೇಳಿದರೆ ಸಾಕು ಬೆಚ್ಚಿ ಬೀಳುತ್ತಿದ್ದರು. ಒಂದು ಹಂತದಲ್ಲಿ ಈ ಹಣ್ಣಿನ ದರ 5 ರಿಂದ 10 ರೂ.ವರೆಗೆ ಇಳಿಕೆಯಾಗಿತ್ತು. ನಂತರ ಮತ್ತೆ 100 ರೂ. ದಾಟಿದ್ದ ಟೊಮೇಟೊ ಇದೀಗ ಮತ್ತೆ ಇಳಿಕೆಯಾಗಿದೆ.

ಟೊಮೆಟೋ, ಈರುಳ್ಳಿ, ಬೆಂಡೆಕಾಯಿ ಹೀಗೆ ಅನೇಕ ತರಕಾರಿಗಳು ಮತ್ತು ಸೊಪ್ಪುಗಳ ಬೆಲೆಯನ್ನು ಇಲ್ಲಿ ನೀಡಲಾಗಿದೆ.

ಟೊಮೆಟೊ ಕೆಜಿ ರೂ. 31
ನೆಲ್ಲಿಕಾಯಿ ರೂ. 55
ಬೂದು ಕುಂಬಳಕಾಯಿ ರೂ. 15
ಬೇಬಿ ಕಾರ್ನ್ ರೂ. 51
ಬಾಳೆ ಹೂವು ರೂ. 14
ಬೀಟ್‌ರೂಟ್‌ ರೂ. 38
ಕ್ಯಾಪ್ಸಿಕಂ ರೂ. 36
ಹಾಗಲಕಾಯಿ ರೂ. 32
ಸೋರೆಕಾಯಿ ರೂ. 27
ಅವರೆಕಾಳು ರೂ. 45
ಎಲೆಕೋಸು ರೂ. 27
ಕ್ಯಾರೆಟ್ ರೂ. 44
ಹೂಕೋಸು ರೂ. 26
ಗೋರೆಕಾಯಿ ರೂ. 35
ತೆಂಗಿನಕಾಯಿ ರೂ. 34
ಕೆಸುವಿನ ಎಲೆ ರೂ. 12
ಕೊತ್ತಂಬರಿ ಸೊಪ್ಪು ರೂ. 7
ಜೋಳ ರೂ. 27
ಸೌತೆಕಾಯಿ ರೂ. 18
ಕರಿಬೇವು ರೂ. 30
ಸಬ್ಬಸಿಗೆ ರೂ. 14
ನುಗ್ಗೆಕಾಯಿ ರೂ. 60
ಬಿಳಿಬದನೆ ರೂ. 31
ಬದನೆ (ದೊಡ್ಡ) ರೂ. 30
ಸುವರ್ಣಗೆಡ್ಡೆ ರೂ. 22
ಮೆಂತ್ಯ ಸೊಪ್ಪು ರೂ. 11
ಬೀನ್ಸ್ (ಹಸಿರು ಬೀನ್ಸ್) ರೂ. 55
ಬೆಳ್ಳುಳ್ಳಿ ರೂ. 68
ಶುಂಠಿ ರೂ. 37
ಹಸಿರು ಮೆಣಸಿನಕಾಯಿ ರೂ. 29
ಬಟಾಣಿ ರೂ. 86
ತೊಂಡೆಕಾಯಿ ರೂ. 25
ನಿಂಬೆ ರೂ. 57
ಮಾವು ರೂ. 30
ಪುದೀನಾ ರೂ. 4
ಬೆಂಡೆಕಾಯಿ ರೂ. 35
ಈರುಳ್ಳಿ ದೊಡ್ಡ ಕೆಜಿ ರೂ. 22
ಈರುಳ್ಳಿ ಸಣ್ಣ ರೂ. 33
ಬಾಳೆಹಣ್ಣು ರೂ. 7
ಆಲೂಗಡ್ಡೆ ರೂ. 29
ಕುಂಬಳಕಾಯಿ ರೂ, 20
ಮೂಲಂಗಿ ರೂ. 27
ಹೀರೆಕಾಯಿ ರೂ. 23
ಪಡುವಲಕಾಯಿ ರೂ. 22
ಪಾಲಕ್ ರೂ. 12

Leave A Reply

Your email address will not be published.