ಕರಾವಳಿಯಲ್ಲಿ ತಲೆ ಎತ್ತಲಿದೆ ಅಗ್ನಿಪಥ್ ಸೇನಾ ತರಬೇತಿ ಶಾಲೆ!! ಮಂಗಳೂರಿನಲ್ಲಿ ಉಳ್ಳಾಲದ ಅಬ್ಬಕ್ಕ -ಉಡುಪಿಯಲ್ಲಿ ಅವಳಿ ವೀರರ ಹೆಸರು ಮುನ್ನಲೆಯಲ್ಲಿ
ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ್ ಯೋಜನೆಯ ಆಕಾಂಕ್ಷಿಗಳಿಗೆ ಪೂರ್ವ ತರಬೇತಿ ನಡೆಸುವ ನಿಟ್ಟಿನಲ್ಲಿ ತರಬೇತಿ ಶಾಲೆಗಳನ್ನು ಕರಾವಳಿ ಜಿಲ್ಲೆಗಳಲ್ಲಿ ತೆರೆಯಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮುಂದಾಗಿದ್ದು, ಆದೇಶ ಹೊರಡಿಸಲಾಗಿದೆ.
ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಸೇನೆ ಹಾಗೂ ಇನ್ನಿತರ ರಕ್ಷಣಾ ಪಡೆಗಳಿಗೆ ಸೇರಲು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು,ಕೆಲ ದಿನಗಳ ಹಿಂದೆಯಷ್ಟೇ ರೂಪುರೇಷೆಗಳನ್ನು ತಯಾರುಪಡಿಸಲಾಗಿದ್ದು, ಪರಿಶಿಷ್ಠ ಜಾತಿ-ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳೇ ಹೆಚ್ಚು ಪಾಲು ಪಡೆಯಲಿದ್ದಾರೆ.
ಇನ್ನು ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ತಗುಲುವ ಸುಮಾರು 67 ಲಕ್ಷ ವಾರ್ಷಿಕ ಖರ್ಚುನ್ನು ಸಮಾಜ ಕಲ್ಯಾಣ ಇಲಾಖೆ ಭರಿಸಬೇಕೆಂದು ಅದೇಶಿಸಲಾಗಿದೆ.ಅದಲ್ಲದೇ ನೂತನ ಶಾಲೆಗಳಿಗೆ ಹೆಸರನ್ನೂ ಸೂಚಿಸಲಾಗಿದ್ದು ಉತ್ತರಕನ್ನಡ ಜಿಲ್ಲೆಯಲ್ಲಿ ಬ್ರಿಟೀಷರ ವಿರುದ್ಧ ಹೋರಾಡಿದ ಹೆಂಜಾ ನಾಯ್ಕ್ ಅವರ ಹೆಸರಿನಲ್ಲಿ,ಉಡುಪಿ ಜಿಲ್ಲೆಯಲ್ಲಿ ಕೋಟಿ-ಚೆನ್ನಯ ಅವಳಿ ವೀರರ ಹೆಸರಿನಲ್ಲಿ ಹಾಗೂ ಮಂಗಳೂರಿನಲ್ಲಿ ಉಳ್ಳಾಲದ ವೀರ ರಾಣಿ ಅಬ್ಬಕ್ಕ ಹೆಸರಿನಲ್ಲಿ ಸೇನಾ ತರಬೇತಿ ಶಾಲೆಗಳನ್ನು ತೆರೆಯಲು ಯೋಜನೆ ರೂಪಿಸಲಾಗಿದೆ ಎಂದು ತಿಳಿದುಬಂದಿದೆ.