ಕಡಬ: ಮತ್ತೆ ಕಳ್ಳರ ಕೈಚಳಕ!! ಇಲೆಕ್ಟ್ರಾನಿಕ್ ಮಳಿಗೆಯ ಸಹಿತ ಎರಡು ಅಂಗಡಿಗಳಿಗೆ ಕನ್ನ-ಸಾವಿರಾರು ಮೌಲ್ಯದ ಸ್ವತ್ತು-ನಗದು ಕಳವು

ಕಡಬ:ಇಲ್ಲಿನ ಮುಖ್ಯರಸ್ತೆಯ ಬದಿಯಲ್ಲೇ ಇರುವ ಎರಡು ಅಂಗಡಿಗಳಿಗೆ ಜೂನ್ 23ರ ರಾತ್ರಿ ನುಗ್ಗಿದ ಕಳ್ಳರು ತಮ್ಮ ಕೈಚಳಕ ಮೆರೆದಿದ್ದು, ಸಾವಿರಾರು ಮೌಲ್ಯದ ಸ್ವತ್ತು ಹಾಗೂ ನಗದನ್ನು ದೋಚಿರುವುದು ಬೆಳಕಿಗೆ ಬಂದಿದೆ.

 

ಕಡಬದ ಸಂಗೀತಾ ಇಲೆಕ್ಟ್ರಾನಿಕ್ಸ್ ಹಾಗೂ ಸ್ಟಾರ್ ಟ್ರೇಡರ್ಸ್ ನ ಹಿಂಭಾಗದ ಮೇಲ್ಛಾವಣಿಯ ಮೂಲಕ ನುಗ್ಗಿದ ಕಳ್ಳರು ಸಿಸಿ ಕ್ಯಾಮೆರಾವನ್ನೇ ಧ್ವಂಸಗೊಳಿಸಿ ಕೃತ್ಯ ಎಸಗಿ ಪರಾರಿಯಾಗಿದ್ದಾರೆ. ಮುಂಜಾನೆ ಅಂಗಡಿ ಮಾಲೀಕರು ಅಂಗಡಿ ತೆರೆಯಲು ಬಂದಾಗ ಘಟನೆ ಬೆಳಕಿಗೆ ಬಂದಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ತನಿಖೆ ಮುಂದುವರಿದಿದೆ.

Leave A Reply

Your email address will not be published.