ಮನೆ ಖರೀದಿ ಮಾಡೋರಿಗೆ ಕೇಂದ್ರದಿಂದ ಭರ್ಜರಿ ಸಿಹಿಸುದ್ದಿ !
ಮನೆ ಖರೀದಿ ಮಾಡಬೇಕು, ಅಥವಾ ಕಟ್ಟಬೇಕು ಎಂದು ಯಾರಾದರೂ ಯೋಚಿಸುತ್ತಿದ್ದೀರಾ ? ಇದಕ್ಕೆ ಉತ್ತರ ಹೌದು ಎಂದಾದರೆ, ಹಣದ ಬಗ್ಗೆ ಯೋಚನೆ ಮಾಡಬೇಕಾಗಿಲ್ಲ. ಯಾಕೆ ಅಂತೀರಾ? ಕೇಂದ್ರ ಸರ್ಕಾರ ಮನೆ ಖರೀದಿದಾರರಿಗೆ ಆರ್ಥಿಕ ನೆರವು ನೀಡುತ್ತಿದೆ. ದೇಶದ ಗ್ರಾಮೀಣ ಜನರು ಈ ಯೋಜನೆಯಿಂದ ಪ್ರಯೋಜನ ಪಡೆಯಬಹುದು.
ದೇಶದ ದುರ್ಬಲ ವರ್ಗದವರನ್ನು ಸಬಲಗೊಳಿಸಲು ಹಾಗೂ ಅವರಿಗೆ ಪಕ್ಕಾ ಮನೆ ನೀಡಲು ಮೋದಿ ಸರ್ಕಾರ ನೇರವಾಗಿ ಅವರ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದೆ. ಬನ್ನಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಪ್ರಯೋಜನ ಯಾರಿಗೆ ? ಈ ಯೋಜನೆಯಡಿಯಲ್ಲಿ ಸರ್ಕಾರವು ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಕ್ರೆಡಿಟ್ ಲಿಂಕ್ಸ್ ಸಬ್ಸಿಡಿಯ ಪ್ರಯೋಜನವನ್ನ ನೀಡುತ್ತದೆ. ಅಂದರೆ ಮನೆ ಖರೀದಿಸಲು ಗೃಹ ಸಾಲದ ಮೇಲೆ ಬಡ್ಡಿ ಸಹಾಯಧನದ ಸೌಲಭ್ಯವನ್ನ ನೀಡಲಾಗುತ್ತದೆ.
ಆರ್ಥಿಕವಾಗಿ ದುರ್ಬಲ ವರ್ಗದವರು ಈ ಯೋಜನೆಯ ಲಾಭವನ್ನು ಪಡೆಯುತ್ತಾರೆ, ಇದರ ಹೊರತಾಗಿ ಯಾವುದೇ ಜಾತಿ ಅಥವಾ ಧರ್ಮದ ಮಹಿಳೆಯರು ಇದರ ಪ್ರಯೋಜನವನ್ನು ಪಡೆಯುತ್ತಾರೆ.
ಮಧ್ಯಮ ವರ್ಗ 1
ಮಧ್ಯಮ ವರ್ಗ 2
ಪರಿಶಿಷ್ಟ ಜಾತಿ
ಪರಿಶಿಷ್ಟ ಪಂಗಡ
ಕಡಿಮೆ ಆದಾಯದ ಜನರು
ಬೇಕಾಗುವ ದಾಖಲೆ :
ಆಧಾರ್ ಕಾರ್ಡ್, ಅರ್ಜಿದಾರರ ಗುರುತಿನ ಚೀಟಿ,
ಅರ್ಜಿದಾರರ ಬ್ಯಾಂಕ್ ಖಾತೆಗೆ ತಿಳಿಸಿ, ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್
ಮಾಡಬೇಕು, ಮೊಬೈಲ್ ನಂಬರ್, ಪಾಸ್ಪೋರ್ಟ್ ಗಾತ್ರದ ಫೋಟೋ, ಯಾವ ಜನರಿಗೆ ರೂ.3 ಲಕ್ಷದವರೆಗೆ ವಾರ್ಷಿಕ ಆದಾಯ ಹೊಂದಿರುವವರು EWS ವಿಭಾಗ 6.5% ಸಬ್ಸಿಡಿಯನ್ನು ಪಡೆಯುತ್ತಾರೆ. 3 ಲಕ್ಷದಿಂದ 6 ಲಕ್ಷ ವಾರ್ಷಿಕ ಆದಾಯ ಹೊಂದಿರುವವರಿಗೆ LIG 6.5 ಶೇಕಡಾ ಸಬ್ಸಿಡಿ ಸಿಗುತ್ತದೆ. 6 ಲಕ್ಷದಿಂದ 12 ಲಕ್ಷ ವಾರ್ಷಿಕ ಆದಾಯ ಹೊಂದಿರುವವರು MIG1 4 ಶೇಕಡಾ ಕ್ರೆಡಿಟ್ ಲಿಂಕ್ ಸಬ್ಸಿಡಿಯನ್ನು ಪಡೆಯುತ್ತಾರೆ. 12 ಲಕ್ಷದಿಂದ 18 ಲಕ್ಷ ವಾರ್ಷಿಕ ಆದಾಯ ಹೊಂದಿರುವವರು MIG2 ವಿಭಾಗದಲ್ಲಿ ಸಬ್ಸಿಡಿ ಪ್ರಯೋಜನವನ್ನು ಪಡೆಯುತ್ತಾರೆ, ಕ್ರೆಡಿಟ್ ಲಿಂಕ್ ಸಬ್ಸಿಡಿ 3% ಪಡೆಯುತ್ತಾರೆ.