ಗೊಂಬೆಯನ್ನು ಮದುವೆಯಾಗಿ ಮಗು ಪಡೆದುಕೊಂಡ ಮಹಿಳೆ ! ಗೊಂಬೆ ಪತಿಯಿಂದ ಹೇಗೆ ಸಾಧ್ಯ ?

Share the Article

ಇಲ್ಲೊಬ್ಬಳು ಗೊಂಬೆಯನ್ನು ಮದುವೆಯಾಗಿ ಮಗು ಮಾಡಿಕೊಂಡಿದ್ದಾರೆ. ಚಿಕ್ಕವಯಸ್ಸಿನಲ್ಲಿ ಪುರುಷ ಗೊಂಬೆಯೊಂದಿಗೆ ಆಟವಾಡಿ ಆ ಗೊಂಬೆಯನ್ನು ಇಷ್ಟ ಪಟ್ಟು ಪುರುಷ ಗೊಂಬೆಯನ್ನೇ ಮದುವೆಯಾಗಿ ಈಗ ಮಗುಹೊಂದಿದ್ದಾಳೆ ! ಇದು ಹೇಗೆ ಸಾಧ್ಯ? ಇಲ್ಲಿದೆ ಈ ಸತ್ಯ ಘಟನೆ ವಿವರ

ತನ್ನೊಂದಿಗೆ ಡಾನ್ಸ್ ಮಾಡಲು ಯಾರೂ ಬಂದಿಲ್ಲ ಎಂದು ಮೆರಿವೊನ್ ರೋಚಾ ಮೊರೇಸ್ ತಾಯಿಗೆ ದೂರು ನೀಡಿದ್ದಾಳೆ. ತನ್ನ ಮಗಳು ಒಂಟಿಯಾಗಿದ್ದಾಳೆ ಎಂದು ತಿಳಿದು ತಾಯಿ ಆಕೆಗೊಂದು ಪುರುಷ ಗೊಂಬೆಯನ್ನು ಮಾಡಿಕೊಟ್ಟಿದ್ದಾರೆ. ಇದಕ್ಕೆ ಮಾರ್ಸೆಲೊ ಎಂದು ಹೆಸರು ಇಡಲಾಗುತ್ತದೆ. ಮಾರ್ಸೆಲೊನೊಂದಿಗೆ ಆಡುತ್ತಿದ್ದ ಈಕೆಗೆ ಅವನ​ ಮೇಲೆ ಲವ್ ಆಗಿ ಮದುವೆ ಕೂಡ ಆಗುತ್ತಾಳೆ.250 ಅತಿಥಿಗಳ ಸಮ್ಮುಖದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಆತನನ್ನು ವಿವಾಹವಾಗಿದ್ದಾರೆ. ಈ ಬಗ್ಗೆ ಸ್ವತಃ ಮೆರಿವೋನ್ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. 

ರಾಗ್‌ಡಾಲ್ ಅನ್ನು ಪ್ರೀತಿಸಿ ಮದುವೆಯಾಗಿದ್ದೇನೆ ಎಂದು ಹೇಳಿಕೊಳ್ಳುವ ಮೆರಿವೊನ್ ಈಗ ಮಗು ಹೊಂದಿದ್ದಾರೆ. ಅವನೊಂದಿಗೆ ನಡೆಸುತ್ತಿರುವ ವೈವಾಹಿಕ ಜೀವನ ಅದ್ಭುತವಾಗಿದೆ. ಅವನು ನನ್ನೊಂದಿಗೆ ಜಗಳವಾಡುವುದಿಲ್ಲ, ಅವನು ವಾದ ಮಾಡುವುದಿಲ್ಲ ಮತ್ತು ಅವನು ಅರ್ಥಮಾಡಿಕೊಳ್ಳುತ್ತಾನೆ. ಮಾರ್ಸೆಲೊ ಒಬ್ಬ ಮಹಾನ್ ಮತ್ತು ನಿಷ್ಠಾವಂತ ಪತಿ. ಎಂದು ಮೀರಿವೊನ್ ಹೇಳಿದ್ದಾಳೆ‌

ಮಗುವಿನ ಬಗ್ಗೆ ಮಾತನಾಡಿದ ಅವರು, ನಾನು ನೋವಿನ ಸಂಕೋಚನವನ್ನು ಅನುಭವಿಸಲಿಲ್ಲ. ಮಗುವನ್ನು  35 ನಿಮಿಷಗಳಲ್ಲಿ ಪಡೆದಿದ್ದೇನೆ ಮತ್ತು ಅವನು ಶ್ರೇಷ್ಠ” ಎಂದು ಹೇಳಿದ್ದಾರೆ. ಈ ಮಗು ನಿಜವಾದ ಮಗುವಲ್ಲ, ತಾಯಿಯು ರಾಗ್​ಡಾಲ್ ಮಾಡಿಕೊಟ್ಟಂತೆ ಮಗುವನ್ನು ಕೂಡ ಸಿದ್ಧಪಡಿಸಲಾಗಿದೆ. ದಂಪತಿಗಳು ಮೇ 21 ರಂದು ತಮ್ಮ ಗೊಂಬೆ ಮಗು ಮಾರ್ಸೆಲಿನ್ಹೋ ಅವರನ್ನು ಸ್ವಾಗತಿಸಿದ್ದಾರೆ.

ಈ ಮಗು ನಕಲಿ ಎಂದು ಜನರು ಹೇಳಿದರೆ ಮೀರಿವೋನ್ ಕೋಪಗೊಳ್ಳುತ್ತಾರೆ. “ಜನರು ಇದನ್ನು ನಕಲಿ ಎಂದು ಹೇಳಿದಾಗ ಅದು ನನಗೆ ನಿಜವಾಗಿಯೂ ಅಸಮಾಧಾನ ಮತ್ತು ಕೋಪ ಉಂಟುಮಾಡುತ್ತದೆ” ಎಂದು ವಿವರಿಸಿದ್ದಾರೆ.

Leave A Reply