ವಿಚಿತ್ರ ಆದರೂ ಸತ್ಯ| ಒಂದೇ ಆಸ್ಪತ್ರೆಯ 14 ನರ್ಸ್ ಗಳು ಒಂದೇ ಸಮಯಕ್ಕೆ ಪ್ರೆಗ್ನೆಂಟ್ !
ಅದು ಮಹಿಳೆಯರ ಹೆರಿಗೆ ಆಸ್ಪತ್ರೆ. ತುಂಬಾ ಖ್ಯಾತಿ ಪಡೆದ ಅಮೆರಿಕದ ಆಸ್ಪತ್ರೆ. ವಿಶೇಷತೆ ಏನೆಂದರೆ ಆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಬೇಕಾದ ನರ್ಸ್‌ಗಳೇ ಈಗ ಗರ್ಭಿಣಿಯರಾಗಿದ್ದಾರಂತೆ. ಅದೇನು ದೊಡ್ಡ ಮಾತು ಅಂತೀರಾ? ಅದಲ್ಲ ವಿಷಯ, ಗರ್ಭಿಣಿಯಾಗಿರುವುದು ಒಬ್ಬರು, ಇಬ್ಬರಲ್ಲ, ಬದಲಾಗಿ ಬರೋಬ್ಬರಿ 14 ಮಂದಿ ನರ್ಸ್‌ಗಳು ಅದು ಕೂಡಾ ಒಂದೇ ಸಮಯದಲ್ಲಿ
ಗರ್ಭಿಣಿಯರಾಗಿದ್ದಾರಂತೆ.
ಅಮೆರಿಕದ ಮಿಸ್ಪೋರಿ ಎನ್ನುವ ರಾಜ್ಯದ ಕಾನ್ಸಾಸ್ ಸಿಟಿಯಲ್ಲಿರುವ ಸೇಂಟ್ ಲೂಕರ್ 14 ಮಂದಿ ನರ್ಸ್‌ಗಳು ಏಕಕಾಲದಲ್ಲಿ
ಗರ್ಭಿಣಿಯರಾಗಿದ್ದಾರೆ. ಈ ಪೈಕಿ ಕೆಲವರಿಗೆ ಇದೇ ಮೊದಲ ಹೆರಿಗೆಯಾದರೆ, ಇನ್ನು ಕೆಲವರಿಗೆ ಎರಡು, ಮೂರನೆಯ ಹೆರಿಗೆಯಂತೆ! ಇದೀಗ ಈ ದಾದಿಯರ ಬೇಬಿ ಬಂಪ್ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿವೆ.
ವರದಿಗಳ ಪ್ರಕಾರ, ಕಾನ್ಸಾಸ್ ಸಿಟಿಯಲ್ಲಿರುವ ಸೇಂಟ್ ಲ್ಯೂಕ್ಸ್ ಈಸ್ಟ್ ಆಸ್ಪತ್ರೆಯ NICU ಮತ್ತು ಲೇಬರ್ ಮತ್ತು ಡೆಲಿವರಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಹದಿನಾಲ್ಕು ದಾದಿಯರು ಒಂದೇ ಸಮಯದಲ್ಲಿ ಗರ್ಭಿಣಿಯಾಗಿದ್ದಾರೆ. ಈ ಪೈಕಿ ಈ ಆಸ್ಪತ್ರೆಯ ಕಾರ್ಮಿಕ ಮತ್ತು ವಿತರಣಾ ಘಟಕದಲ್ಲಿ ನೋಂದಾಯಿತ ನರ್ಸ್ ಕೈಟ್ಲಿನ್ ಹಾಲ್ ಎಂಬುವರು ಈಗಾಗಲೇ ಜೂನ್ 3ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ನರ್ಸ್ ಕೈಟ್ಲಿನ್ ಹಾಲ್, ಇದು ನನಗೆ ಮೊದಲನೇ ಹೆರಿಗೆ. ನಾನು ಮತ್ತು ಮಗು ಇಬ್ಬರೂ ಆರೋಗ್ಯವಾಗಿ ಇದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಗರ್ಭಿಣಿಯಾದ ವಿಚಾರ ತಿಳಿದಾಗ, ನಾನೊಬ್ಬಳೇ ಹೇಳುವುದು ಸರಿಯಲ್ಲ ಅಂತ ನಾಚಿಕೆಯಿಂದ ಹೇಳಿರಲಿಲ್ಲ. ಹೀಗಾಗಿ ಸುಮಾರು 12 ವಾರಗಳವರೆಗೆ ಯಾರಿಗೂ ವಿಚಾರ ಹೇಳದೇ ಮುಚ್ಚಿಟ್ಟಿದ್ದೆ. ಆಮೇಲೆ ಇತರೇ ನರ್ಸ್‌ಗಳೂ ಗರ್ಭಿಣಿಯರು ಅಂತ ಗೊತ್ತಾದಾಗ ನಾನೂ ಹೇಳಿದೆ ಅಂತ ಹೇಳಿಕೊಂಡಿದ್ದಾರೆ.
ಸೇಂಟ್ ಲ್ಯೂಕ್ ಆಸ್ಪತ್ರೆಯು ಈಗ ಇನ್ನೂ 13 ಶಿಶುಗಳ ಜನನಕ್ಕಾಗಿ ಕಾಯುತ್ತಿದೆ. ಶುಶ್ರೂಷಕಿಯರಿಗೆ ಡಿಸೆಂಬರ್ ತಿಂಗಳಲ್ಲಿ ಹೆರಿಗೆಯ ಡೇಟ್ ನೀಡಲಾಗಿದೆಯಂತೆ. ಸೇಂಟ್ ಲ್ಯೂಕ್ಸ್‌ನಲ್ಲಿ ಪ್ರತಿ ವಿಶೇಷ ಹೆರಿಗೆಯೊಂದಿಗೆ ನಾವು ಮಾಡುವಂತೆಯೇ ಈ ಅಮ್ಮಂದಿರು ಮತ್ತು ಶಿಶುಗಳನ್ನು ನಾವು ಆರೈಕೆ ಮಾಡುತ್ತೇವೆ ಅಂತ ಆಸ್ಪತ್ರೆ ಆಡಳಿತ ಮಂಡಳಿ ಹೇಳಿದೆ.