ಪುತ್ತೂರು ಬಾಲವನದಲ್ಲಿ ನಡೆದ ವಿಶ್ವದ ಅತಿದೊಡ್ಡ ಈಜು ತರಬೇತಿ ದಿನ ;ಕಾವು ಬುಶ್ರಾ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಗಳು ಭಾಗಿ
ಜಗತ್ತಿನೆಲ್ಲಡೆ ವಿಶ್ವದ ಅತಿದೊಡ್ಡ ಈಜು ತರಬೇತಿ ದಿನವನ್ನಾಗಿ ಜೂನ್ 23 ರಂದು ಹಮ್ಮಿಕ್ಕೊಂಡು ತರಬೇತಿಯನ್ನು ನೀಡಲಾಗಿತ್ತು.ಅದರಂತೆ ಭಾರತದಲ್ಲಿಯೂ ಕೂಡ ಎಲ್ಲೆಡೆ ತರಬೇತು ನೀಡಲಾಗಿದ್ದು ,ಪುತ್ತೂರಿನ ಡಾ l ಶಿವರಾಮ ಕಾರಂತ ಬಾಲವನ ಈಜುಕೊಳದಲ್ಲಿ ಕೂಡ ತರಬೇತು ದಿನವನ್ನಾಗಿ ಆಚರಣೆ ಮಾಡಲಾಗಿದ್ದು,ಈ ಕಾರ್ಯಕ್ರಮದ ಆಯೋಜನೆಯನ್ನು ರಾಷ್ಟ್ರೀಯ ಲೈಫ್ ಸೇವಿಂಗ್ ಸೊಸೈಟಿ ( ಇಂಡಿಯಾ ) ವಹಿಸಿತ್ತು.ಈ ಕಾರ್ಯಕ್ರಮದಲ್ಲಿ ಬುಶ್ರಾ ವಿದ್ಯಾ ಸಂಸ್ಥೆ ಕಾವು ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿ ಅಂತಾರಾಷ್ಟ್ರೀಯ ಈಜುಪಟುಗಳಿಂದ ವಿಶೇಷ ತರಬೇತಿಯನ್ನು ಪಡೆದುಕ್ಕೊಂಡರು.ಸುಮಾರು 40 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಈಜು ತರಬೇತಿ ಹಾಗೂ ಮಾಹಿತಿಯನ್ನು ಕೂಡ ಪಡೆದುಕ್ಕೊಂಡರು ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ಕೂಡ ನೀಡಿ ಗೌರವಿಸಲಾಯಿತು.ಅಂತಾರಾಷ್ಟ್ರೀಯ ಮಟ್ಟದ ಈಜು ಪಟು,ತರಬೇತುದಾರರಾದ ಸೀತಾರಾಮ್ , ಅಂಕಿತ್ ,ಧನುಷ್ ,ತ್ರಿಶಲ್ , ಶ್ರಿ ನಿಧಿ ,ರೋಹಿತ್ ಈಜು ತರಬೇತಿಯನ್ನು ನೀಡಿದರು.ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ್ ,ಶಿಕ್ಷಕ ಪ್ರದೀಪ್ , ಭಾಗವಹಿಸಿದ್ದರು.
” ಜಗತ್ತಿನೆಲ್ಲಡೆ ಈಜು ತರಬೇತಿ ದಿನವನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಚಾರ.ಯಾಕೆಂದರೆ ಇಂದು ನೀರಿನಲ್ಲಿ ಒಬ್ಬ ವ್ಯಕ್ತಿ ಮುಳುಗಿದರೆ ಹಠಾತ್ ಅವನಿಗೆ ಎದ್ದು ಬರಲು ಆಗುವುದಿಲ್ಲ ಇದನ್ನೆಲ್ಲಾ ಹೇಗೆ ತಡೆಗಟ್ಟಬಹುದು ಹಾಗೂ ಈಜು ತರಬೇತಿ ಪಡೆಯುವುದರ ಮೂಲಕ ಉತ್ತಮ ಈಜುಪಟುವಾಗಿ ಮೂಡಿಬರಲು ಇಂತಹ ತರಬೇತಿ ಗಳು ಅತಿ ಅವಶ್ಯವಾಗಿದೆ.”
– ಅಂತರಾಷ್ಟ್ರೀಯ ಈಜು ಪಟು