ಮದುವೆಗೆ ಮೊದಲು “ಸೆಕ್ಸ್” ಬೇಡ : ಪೋಪ್ ಪ್ರಾನ್ಸಿಸ್
ಪೋಪ್ ಪ್ರಾನ್ಸಿಸ್ ನೀಡುವ ಕೆಲವೊಂದು ಹೇಳಿಕೆಗಳು ವಿವಾದಕ್ಕೆ ಕಾರಣವಾಗುತ್ತವೆ. ಅವರ ಮನಸ್ಥಿತಿ ತೀರಾ ಸಾಂಪ್ರದಾಯಿಕವಾಗಿದೆಯೋ ಅಥವಾ ವಿವಾದವೇ ಅವರನ್ನು ಹುಡುಕಿಕೊಂಡು ಬರುತ್ತವೆಯೋ ಗೊತ್ತಿಲ್ಲ.
ಪೋಪ್ ಹೇಳಿಕೆಗಳನ್ನು ಕ್ರಿಶ್ಚಿಯನ್ನರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಅದಕ್ಕೆ ಕಾರಣ ವ್ಯಾಟಿಕನ್ ಚರ್ಚ್ ಪರಮೋಚ್ಛ ಸ್ಥಾನದಲ್ಲಿರುವ ಪೋಪರು ಕ್ರಿಶ್ಚಿಯನ್ನರ ಜಾಗತಿಕ ಧರ್ಮಗುರು ಧರ್ಮ ಆಚರಣೆಗಳಿಗೆ ಸಂಬಂಧಿಸಿರುವುದರಿಂದ ಅವರ ಮಾತುಗಳು ಕ್ರೈಸ್ತರ ನಡುವೆ ಪ್ರಾಮುಖ್ಯ ಪಡೆಯುತ್ತವೆ.
ಮದುವೆಗೆ ಮೊದಲು ಜೋಡಿ ಸೆಕ್ಸ್ ನಡೆಸಬಾರದು ಎಂಬ ಹೇಳಿಕೆಯೊಂದನ್ನು ಈಗ ನೀಡಿದ್ದಾರೆ. ಶೀಲ ಅಥವಾ ಚಾರಿತ್ರ್ಯ ಎಂಬುವುದು ಗಂಡು ಹೆಣ್ಣು ಇಬ್ಬರಿಗೂ ಇಂಪಾರ್ಟೆಂಟು. ಹಾಗೊಂದು ವೇಳೆ ಮದುವೆಗೆ ಮೊದಲೇ ಸೆಕ್ಸ್ ನಡೆಸಿದ್ದೇ ಆಗಿದ್ದಲ್ಲಿ ದೀರ್ಘಕಾಲಿಕ ದಾಂಪತ್ಯ ಜೀವನದ ಮೇಲೆ ಅದು ದುಷ್ಪರಿಣಾಮ ಬೀರುತ್ತದೆ. ಇದರಿಂದ ದಾಂಪತ್ಯದಲ್ಲಿ ಇರುವ ಸ್ವಾರಸ್ಯವೇ ಹೊರಟುಹೋಗುತ್ತದೆ. ದಂಪತಿ ಎದುರಿಸುವ ಹೆಚ್ಚಿನ ಸಮಸ್ಯೆಗಳ ಮೂಲ ಈ ವಿವಾಹಪೂರ್ವ ಸೆಕ್ಸ್‌ನಲ್ಲಿ ಇದೆ.
ಮದುವೆಗೆ ಮೊದಲಿನ ಸೆಕ್ಸ್ ತಡೆಗಟ್ಟುವುದೊಂದೇ ಪೋಪ್ ಉದ್ದೇಶವಲ್ಲ. ಪಾಶ್ಚಿಮಾತ್ಯ ಕ್ರೈಸ್ತ ಜಗತ್ತಿನಲ್ಲಿ ದಾಂಪತ್ಯ ಎಂಬ ವ್ಯವಸ್ಥೆಯೇ ಕುಸಿಯುತ್ತಿದೆ. ಇದನ್ನು ಕಾಪಾಡಿಕೊಳ್ಳುವುದೇ ಇಂದು ಸಮಸ್ಯೆಯಾಗಿದೆ. ಹೀಗಾಗಿ ಪೋಪ್‌ಗೆ ಅದರ ಬಗ್ಗೆ ಕಾಳಜಿಯಿಂದ ಈ ಸ್ಟೇಟ್ ಮೆಂಟ್ ನೀಡಿದ್ದಾರೆ.
ಮದುವೆ ಆಗುವವರೆಗೂ ಸೆಕ್ಸನ್ನು ನಂತರ ಮಾಡುವುದು ನೈಜ ಪ್ರೀತಿಯ ಒಂದು ಮಾದರಿ, ಇದರಿಂದ ದಾಂಪತ್ಯ ಇನ್ನಷ್ಟು ಸುಂದರವಾಗುತ್ತದೆ. ಮಕ್ಕಳನ್ನು ಹೊಂದುವುದು ರಿಸ್ಕ್ ಎಂಬ ಭಾವನೆ ಹಲವರಲ್ಲಿದೆ. ಆದರೆ ಹೊಂದದೇ ಇರುವುದು ಇನ್ನಷ್ಟು ರಿಸ್ಕ್ ಎಂದು ಕೂಡ ಪೋಪ್ ಎಂಬ ಮಾತನ್ನು ಪೋಪ್ ಹೇಳಿದ್ದಾರೆ.
ಇಂದು ಹೆಚ್ಚಿನ ಯುವಜನತೆ ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರೆ. ಸಣ್ಣ ಪ್ರಾಯದಲ್ಲೇ ಮದುವೆಯಾಚೆಗೆ ಸೆಕ್ಸ್ ಅನುಭವ ಹೊಂದುವುದರಿಂದ, ದಾಂಪತ್ಯ ಅಷ್ಟೇನೂ ಮುಖ್ಯವಲ್ಲ ಎಂಬ ಭಾವನೆ ಇತ್ತೀಚಿನ ಜನತೆಯಲ್ಲಿ ಮೂಡುತ್ತಿದೆ. ಹೀಗಾಗಿ ಮದುವೆಗಳು ಕಡಿಮೆಯಾಗುತ್ತಿವೆ. ಒಂಟಿ ಬಾಳ್ವೆಗೆ ಯುವಜನತೆ ವಾಲುತ್ತಿದೆ. ತಲೆಮಾರುಗಳು ಬೆಳೆಯುತ್ತಿಲ್ಲ. ಎಷ್ಟೋ ಮುಂದುವರಿದ ಶ್ರೀಮಂತ ದೇಶಗಳು ಮುಂದಿನ ಜನಾಂಗವೇ ಇಲ್ಲದಂತೆ ನಿರ್ಮಾನುಷವಾಗುವ ಭೀತಿ ಎದುರಿಸುತ್ತಿವೆ. ಹೀಗಾಗಿಬಿಟ್ಟರೆ, ಕ್ರೈಸ್ತ ಧರ್ಮದ ಪರಮ ವಿರೋಧಿ ಎನಿಸಿಕೊಂಡ ಇಸ್ಲಾಂ ಮುಂತಾದವು ಹೆಚ್ಚಿನ ಜನಸಂಖ್ಯೆಯೊಂದಿಗೆ ಮೇಲುಗೈ ಆಗಬಹುದು. ಇದು ಇನ್ನೊಂದು ಚಿಂತೆ.
ಆದರೆ ಪೋಪರ ಈ ಹೇಳಿಕೆ ಸಾಕಷ್ಟು ಟ್ರೋಲ್‌ಗೂ ಕಾರಣವಾಗಿದೆ. ಪೋಪ್ ಅತ್ಯಂತ ಸಂಪ್ರದಾಯವಾದಿಯಾಗಿ ಮಾತನಾಡಿದ್ದಾರೆ. ಇದು ಸರಿಯಲ್ಲ. ಅವರೂ ಆಧುನಿಕ ಮನೋವೃತ್ತಿ ಬೆಳೆಸಿಕೊಳ್ಳಬೇಕು. ಇಂದು ಯಾರೂ ಮದುವೆಯಾಚೆಗಿನ ಸೆಕ್ಸನ್ನು ನಿಷೇಧಿತ ಎಂಬಂತೆ ಭಾವಿಸುವುದಿಲ್ಲ. ಅದನ್ನು ಕ್ಯಾಶುವಲ್ ಆಗಿ ಪರಿಗಣಿಸುತ್ತಾರೆ. ಪ್ರೇಮವೆಂಬುದು ಸೆಕ್ಸ್‌ಗೆ ಸಂಬಂಧಪಟ್ಟಿಲ್ಲ. ಅದು ದಾಂಪತ್ಯಕ್ಕೆ ಅಡ್ಡಿಯಾಗುವುದಿಲ್ಲ ಎಂಬುದು ಹೆಚ್ಚಿನವರ ಟೀಕೆಗಳ
ಅಂತರಂಗ. ಇನ್ನು ಪೋಪ್ ಸರಿಯಾಗಿಯೇ ಮಾತಾಡಿದ್ದಾರೆ, ಇಂಥ ಉಪದೇಶಗಳು ಅಗತ್ಯ ಎನ್ನುವವರ ಸಂಖ್ಯೆಯೂ ಸಾಕಷ್ಟಿದೆ.
ಪೋಪ್ ವಿವಾದಾತ್ಮಕ ಹೇಳಿಕೆ ಇದೇ ಮೊದಲಲ್ಲ. ಈ ಹಿಂದೆ ಅವರು ಮಕ್ಕಳನ್ನು ಮಾಡಿಕೊಳ್ಳದೆ ನಾಯಿ ಸಾಕುವವರ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಮಕ್ಕಳನ್ನು ಹುಟ್ಟಿಸದೆ ಬರಿಯ ಸಾಕುಪ್ರಾಣಿಗಳನ್ನು ಮುದ್ದು ಮಾಡಿಕೊಂಡು ಬದುಕುವುದು ಬರೀ ಸ್ವಾರ್ಥ. ಇದರಿಂದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲ. ಇದರಿಂದ ಮಾನವಕುಲ ಮುಂದುವರಿಯುವುದಿಲ್ಲ. ಎಂದು ಅವರು ಆಕ್ಷೇಪಣೆ ಮಾಡಿದ್ದರು. ಇದಕ್ಕೂ ಟೀಕೆ ಬಂದಿತ್ತು. ಹಾಗೆ ನೋಡಿದರೆ ವಿವಾಹಪೂರ್ವ ಸೆಕ್ಸ್ ಬಗ್ಗೆ ಹೆಚ್ಚಿನ ಎಲ್ಲ ಧರ್ಮಗಳ ಧರ್ಮಗುರುಗಳಿಗೂ ಮೇಲೆ ಹೇಳಿದ ಪೋಪ್ ಅಭಿಪ್ರಾಯವೇ ಇದೆ. ಇವರ್ಯಾರೂ ವಿವಾಹಪೂರ್ವ ಲೈಂಗಿಕತೆಯನ್ನು ಒಪ್ಪುವುದಿಲ್ಲ. ಅಂತೂ ಸಾಂಪ್ರದಾಯಿಕ ಅಭಿಪ್ರಾಯಕ್ಕೂ ಯುವಜನತೆಯ ನೋಟಕ್ಕೂ ಇರುವ ಭಿನ್ನತೆ ಪೋಪ್ ಹೇಳಿಕೆಯಲ್ಲಿ ವ್ಯಕ್ತವಾಗಿದೆ ಎನ್ನಬಹುದು.