105 ವರ್ಷದ ಅಜ್ಜಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ವಿಶ್ವದಾಖಲೆ !!

ವಯಸ್ಸು ಕೇವಲ ಒಂದು ಸಂಖ್ಯೆಎಂದು ಮತ್ತೆ ನಿರೂಪಣೆಯಾಗಿದೆ. ಕರ್ತೃತ್ವ ಶಕ್ತಿಯ ಎದುರು ಪ್ರಾಯಕ್ಕೆ ಇತಿಮಿತಿ ಇಲ್ಲ ಎಂದು ಗುಜರಾತ್‌ನ ವಡೋದರಾದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪ್ರೂವ್ ಆಗಿದೆ. ಹರಿಯಾಣದ ರಾಂಬಾಯಿ ಎಂಬ 105 ವರ್ಷದ ಮಹಿಳೆ 45.40 ಸೆಕೆಂಡುಗಳಲ್ಲಿ 100 ಮೀಟರ್ ಓಟದಲ್ಲಿ ಓಡಿ ಚಿನ್ನ ಗೆದ್ದ ಅತ್ಯಂತ ಹಿರಿಯ ಮಹಿಳೆ ಎಂಬ ಹೊಸ ದಾಖಲೆ ಬರೆದಿದ್ದಾರೆ.

 

ಈ ವೀಡಿಯೊವನ್ನು ನೋಡಿ:

ರಾಂಬಾಯಿಯವರ ಎಂಬ ಈ ಅಜ್ಜಿಯು 100 ಮೇಲ್ಪಟ್ಟ ವಿಭಾಗದಲ್ಲಿ ಭಾಗವಹಿಸಿದ್ದರು. ಅವಳ ವಯಸ್ಸಿನ ಬ್ರಾಕೆಟ್‌ನಲ್ಲಿ ಭಾಗವಹಿಸುವವರ ಕೊರತೆಯಿಂದಾಗಿ ಒಬ್ಬಂಟಿಯಾಗಿ ಓಡಬೇಕಾಯಿತು. ಆಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನನ್ನ ಅಜ್ಜಿಯು ಶುದ್ಧ ಸಸ್ಯಾಹಾರಿ ಆಗಿದ್ದು, ಆಕೆ ನಾನಿ ಪ್ರತಿದಿನ ಸುಮಾರು 250 ಗ್ರಾಂ ತುಪ್ಪ ಮತ್ತು 500 ಗ್ರಾಂ ಮೊಸರು ಸೇವಿಸುತ್ತಾರೆ. ಅವರು ದಿನಕ್ಕೆ ಎರಡು ಬಾರಿ 500 ಮಿಲಿ ಶುದ್ಧ ಹಾಲನ್ನು ಕುಡಿಯುತ್ತಾರೆ. ಅವರು ಬಾಜ್ರಾ ದ ರೊಟ್ಟಿಯನ್ನು ಇಷ್ಟಪಡುತ್ತಾರೆ. ಆಕೆ ಹೆಚ್ಚು ಅನ್ನವನ್ನು ತಿನ್ನುವುದಿಲ್ಲ” ಎಂದು ಶರ್ಮಿಳಾ ಸಾಂಗ್ವಾನ್ ಎಂಬ ರಾಂಬಾಯಿಯವರ ಮೊಮ್ಮಗಳು ಬಹಿರಂಗಪಡಿಸಿದ್ದು ವರದಿಯಾಗಿದೆ.

Leave A Reply

Your email address will not be published.