ಇದು ವಿಶ್ವದ ದುಬಾರಿ “ವಯಾಗ್ರ” | ಇದರ ವಿಶೇಷತೆ ಏನು? ಬೆಲೆ ಎಷ್ಟು?

ಲೈಂಗಿಕತೆಯಲ್ಲಿ ಆಸಕ್ತಿಯಿರುವ ವ್ಯಕ್ತಿಗಳಿಗೆ ಈ ವಿಷಯ ಖುಷಿ ತರಬಹುದು. ಲೈಂಗಿಕತೆಯ ಜೊತೆಗೆ ಆರೋಗ್ಯ ಕೂಡಾ ಇದೇ ರೀತಿಯ ಕಾಳಜಿ ವಹಿಸುವವರಿಗೆ ಇದೊಂದು ಪ್ರಯೋಜನಕಾರಿ ವಿಷಯ. ಈಗ ನಾವು ಇಲ್ಲಿ ಹೇಳಲಿಕ್ಕೆ ಹೊರಟಿರೋದು ವಯಾಗ್ರದ ಬಗ್ಗೆ. ಲೈಂಗಿಕ ಪ್ರಚೋದನೆಗೆ ಅನೇಕರು ನಾನಾ ಔಷಧಗಳ ಮೊರೆ ಹೋಗುತ್ತಾರೆ. ಇದಕ್ಕಾಗಿ ಮಾರುಕಟ್ಟೆಗೆ ನಾನಾ ಪ್ರಾಡಕ್ಟ್‌ಗಳು ಕೂಡ ಬಂದಿವೆ. ಕೆಲ ನೈಸರ್ಗಿಕ ವಸ್ತುಗಳನ್ನು ಬಳಕೆ ಮಾಡಿಕೊಂಡು ಲೈಂಗಿಕ ಶಕ್ತಿ ಹೆಚ್ಚಿಸಿಕೊಳ್ಳುವ ಪದ್ಧತಿ ಸಹ ಇಂದಿಗೂ ಬಳಕೆಯಲ್ಲಿದೆ. ಇದರಲ್ಲಿ ಹಿಮಾಲಯನ್ ವಯಾಗ್ರ ಕೂಡ ಒಂದು.
ಇದೊಂದು ಅಪರೂಪದ ದುಬಾರಿ ವಯಾಗ್ರ. ಇದರ ಹೆಸರೇ ವಿಚಿತ್ರ. ಇದರ ಹುಟ್ಟು, ವೈಶಿಷ್ಟ್ಯತೆಯ ಬಗ್ಗೆ ಇಲ್ಲಿದೆ ಮಾಹಿತಿ.

 

“ಹಿಮಾಲಯನ್ ವಯಾಗ್ರ” ಆಗಾಗ ಸುದ್ದಿಯಲ್ಲಿರುವ ಒಂದು ವಯಾಗ್ರ. ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಈ ಹಿಮಾಲಯನ್ ವಯಾಗ್ರಕ್ಕಿದೆ. ಅದನ್ನು ಬಳಸಿದರೆ ಗಂಡಸರ ಲೈಂಗಿಕ ಶಕ್ತಿ ಹಿಮಾಲಯದ ಏರುತ್ತೆ ಅಂತೆ. ಈ ನಿರ್ದಿಷ್ಟ ರೀತಿಯ ಗಿಡ ಮೂಲಿಕೆಯು ಕಳೆದ ಕೆಲವು ವರ್ಷಗಳಿಂದ ಸಾಕಷ್ಟು ಸುದ್ದಿಯಲ್ಲಿದೆ. ಚರ್ಚೆಗೆ ಕಾರಣವೆಂದರೆ ಅದರ ವಿಶೇಷ ಪ್ರಯೋಜನಗಳು ಮತ್ತು ಅದಕ್ಕಿರುವ ಬೆಲೆ.

ಹಿಮಾಲಯನ್ ವಯಾಗ್ರ ಎಂಬುದು ಒಂದು ರೀತಿಯ ಶಿಲೀಂಧ್ರ. ಇದರ ವೈಜ್ಞಾನಿಕ ಹೆಸರು ‘ಒಫಿಯೊಕಾರ್ಡಿಸೆಪ್ಸ್ ಸಿನೆನ್ಸಿಸ್’. ಇಂಗ್ಲಿಷ್‌ನಲ್ಲಿ ಇದನ್ನು ‘ಕ್ಯಾಟರ್‌ಪಿಲ್ಲ‌ರ್’ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಇದಕ್ಕೆ ‘ವರ್ಮ್ ಹರ್ಡ್’ ಎನ್ನುವ ಹೆಸರಿದೆ. ನೇಪಾಳ ಮತ್ತು ಚೀನಾದಲ್ಲಿ ಇದನ್ನು ಸ್ಥಳೀಯವಾಗಿ ‘ಯರ್ಸಗುಂಬಾ’ ಎಂದೂ ಕರೆಯುತ್ತಾರೆ.

ಮಾರುಕಟ್ಟೆಯಲ್ಲಿ ‘ಕಿಡಾ ಜಡಿ’ ಎಂದೇ ಜನಪ್ರಿಯವಾಗಿರುವ ಈ ಮೂಲಿಕೆಯನ್ನು ಮೊದಲೇ ಹೇಳಿದಂತೆ ಲೈಂಗಿಕ ಸಮಸ್ಯೆಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಕೆಜಿಗೆ ಸುಮಾರು 20 ಲಕ್ಷ ರೂಪಾಯಿ ಅಂದರೆ ನಂಬುತ್ತೀರಾ? ನಂಬಲೇಬೇಕು.

ಈ ಮೂಲಿಕೆ ತಾಪಮಾನ ಹೆಚ್ಚಾದಾಗ ಬೆಳೆಯುತ್ತದೆ. ಭೂತಾನ್, ಚೀನಾ, ಭಾರತ ಮತ್ತು ನೇಪಾಳದಲ್ಲಿ ಹಿಮ ಕರಗುವ ಪರ್ವತ ಪ್ರದೇಶಗಳಲ್ಲಿ 3300 ಮೀಟರ್ ನಿಂದ 4,500 ಮೀಟರ್ ನಡುವೆ ಇದು ಕಂಡುಬರುತ್ತದೆ. ಹಿಮಾಲಯದ ವಯಾಗ್ರ ಹಿಮಾಲಯದ ಎತ್ತರದ ಹುಲ್ಲುಗಾವಲುಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.

ಹಿಮಾಲಯನ್ ವಯಾಗ್ರವನ್ನು ಕಾಮೋತ್ತೇಜಕವಾಗಿ ಅನೇಕ ವರ್ಷಗಳಿಂದ ಬಳಕೆ ಮಾಡಲಾಗಿದೆ. ಸುಮಾರು 1000 ವರ್ಷಗಳಿಂದ ಹೈಪೋಸೆಕ್ಸುವಾಲಿಟಿಗೆ ಚಿಕಿತ್ಸೆಯಾಗಿ ಬಳಸಲಾಗುತ್ತಿದೆ ಎಂದು ವರದಿಗಳು ಹೇಳಿವೆ. ಇದು ರಾತ್ರಿ ಬೆವರುವಿಕೆ, ಹೈಪರ್ಗೈಸೀಮಿಯಾ, ಹೈಪರ್ಲಿಪಿಡೆಮಿಯಾ, ಅಸ್ತೇನಿಯಾ, ಹೆಚ್ಚಿದ ಹೃದಯ ಬಡಿತಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಹೃದಯದ ಸಮಸ್ಯೆ, ಉಸಿರಾಟದ ಸಮಸ್ಯೆ ಮೂತ್ರಪಿಂಡದ ಸಮಸ್ಯೆ, ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಕಾಯಿಲೆಗಳಲ್ಲಿ ಈ ಮೂಲಿಕೆ ಪ್ರಯೋಜನಕಾರಿಯಾಗಿದೆ.

ಈ ದುಬಾರಿ ಮೂಲಿಕೆಯನ್ನು ಕ್ಯಾಟರ್ಪಿಲ್ಲರ್ ಫಂಗಸ್ ಮತ್ತು ಹಿಮಾಲಯನ್ ವಯಾಗ್ರ ಎಂದು ಹೆಸರು. ಇದು ಚಿನ್ನಕ್ಕಿಂತ ಹೆಚ್ಚು ಬೆಲೆ ಬಾಳುವಂತಹದ್ದು. ಇದರ ಸೇವನೆಯಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಈ ಮೂಲಿಕೆ ಹಳದಿ ಕ್ಯಾಟರ್ಪಿಲ್ಲರ್ ಮತ್ತು ಮಶ್ರೂಮ್ ನ ರೂಪ ಒಳಗೊಂಡಿದೆ.

ಇದನ್ನು ನೀರಿನಲ್ಲಿ ಕುದಿಸಿ, ಚಹಾ, ಸೂಪ್ ಮತ್ತು ಸ್ಟ್ಯೂ ಮಾಡಿ ಕುಡಿಯಲಾಗುತ್ತದೆ. ಇದು ಲೈಂಗಿಕ ದುರ್ಬಲತೆ ಮತ್ತು ಯಕೃತ್ತಿನ ಕಾಯಿಲೆಗಳಿಗೆ ಹಾಗೂ ಕ್ಯಾನ್ಸರ್ ಚಿಕಿತ್ಸೆಗೆ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ಕ್ಯಾಟರ್ಪಿಲ್ಲರ್ ಒಂದು ರೀತಿಯ ನಿರ್ದಿಷ್ಟ ಹುಲ್ಲನ್ನು ತಿನ್ನುತ್ತದೆ. ಅನಂತರ ಕ್ಯಾಟರ್ಪಿಲ್ಲರ್ ಸಾಯುತ್ತದೆ. ಈ ಸಾವಿನ ವೇಳೆ ಅದರ ದೇಹದಲ್ಲಿ ಈ ಮೂಲಿಕೆ ಬೆಳೆಯುತ್ತದೆ. ಈ ಮೂಲಿಕೆ ಅರ್ಧ ಹುಳು ಮತ್ತು ಅರ್ಥ ಮೂಲಿಕೆಯಾಗಿರುವುದ್ರಿಂದ ಇದನ್ನು “ಕೀಡಾ ಜಡಿ” ಎಂದು ಕರೆಯಲಾಗುತ್ತದೆ.

Leave A Reply

Your email address will not be published.