ಏನ್ ಜನಪ್ರತಿನಿಧಿಗಳಪ್ಪಾ ಇವ್ರು !?? | ಕಾರ್ಯವೈಖರಿ ಬಗ್ಗೆ ಪ್ರಶ್ನೆ ಮಾಡಿದ್ರೆ ಹೀಗೆ ಮಾಡೋದಾ ??
ಕಾರ್ಯವೈಖರಿಯನ್ನು ಪ್ರಶ್ನೆ ಮಾಡಿದ್ದಕ್ಕೆ ಗ್ರಾಮ ಪಂಚಾಯತಿ ಅಧ್ಯಕ್ಷೆಯೊಬ್ಬರು ಗ್ರಾಮಸ್ಥರ ಮೇಲೆಯೇ ಚಪ್ಪಲಿಯಿಂದ ಹಲ್ಲೆ ಮಾಡಲು ಮುಂದಾದ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ತೋರಣದಿನ್ನಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕಸ ವಿಲೇವಾರಿ ವಾಹನದ ಚಾಲಕ ಹುದ್ದೆ ನೇಮಕ ವಿಚಾರದಲ್ಲಿ ಗಲಾಟೆ ನಡೆದಿದೆ. ಅಧ್ಯಕ್ಷೆ ಚಂದಮ್ಮ ತಮ್ಮ ಸಂಬಂಧಿಯನ್ನೇ ಅನಧಿಕೃತವಾಗಿ ನೇಮಿಸಿಕೊಂಡಿದ್ದಕ್ಕೆ ಗ್ರಾಮಸ್ಥರು ಪ್ರಶ್ನಿಸಿದ್ದರು. ಇದಕ್ಕೆ ಸಿಟ್ಟಾದ ಅಧ್ಯಕ್ಷೆ ಚಂದಮ್ಮ ಗ್ರಾಮ ಪಂಚಾಯತಿ ಕಚೇರಿ ಹೊರಗಡೆಯೇ ಚಪ್ಪಲಿ ಹಿಡಿದು ಜಗಳ ಮಾಡಿದ್ದಾರೆ. ಪ್ರಶ್ನೆ ಮಾಡಿದ ಬಸವರಾಜ್ ಅವರ ಕಾಲರ್ ಹಿಡಿದು ದರ್ಪ ಮೆರೆದಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷರು ಪತಿಯೊಂದಿಗೆ ಸೇರಿ ಸಾರ್ವಜನಿಕರ ಮೇಲೆ ಅಧಿಕಾರ ದರ್ಪ ತೋರಿಸುತ್ತಿದ್ದಾರೆ. ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಇದೀಗ ಗ್ರಾಮಸ್ಥರು ಆರೋಪಿಸಿ ಗ್ರಾಮ ಪಂಚಾಯತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.