ಮೂಗಿನ ಮೇಲಿನ ಬ್ಲ್ಯಾಕೆಡ್ಸ್ ನಿವಾರಿಸಲು ಇವಿಷ್ಟು ಸಾಕು ಬಿಡಿ

ಮುಖ ಅಂದವಾಗಿ ಕಾಣಿಸುವಲ್ಲಿ ಮೂಗು ಸಹ ಪ್ರಮುಖವಾದ ಪಾತ್ರ ವಹಿಸುತ್ತದೆ. ಆದರೆ ಮೂಗಿನ ಕಪ್ಪು ಕಲೆಗಳು ಮುಖವನ್ನು ಮಂದ ಮತ್ತು ಕೊಳಕಾಗಿ ಕಾಣುವಂತೆ ಮಾಡಬಹುದು. ಇದನ್ನು ಸೋಪ್ ಹಾಕಿ ತೊಳೆಯುವುದರಿಂದಲೂ ಕೆಲವೊಮ್ಮೆ ಸರಿ ಮಾಡಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಏನು ಮಾಡಬಹುದು. ಇದಕ್ಕಾಗಿ ಕೆಲವು ಮನೆಮದ್ದುಗಳು ಇಲ್ಲಿವೆ.

 

  1. ತೆಂಗಿನ ಎಣ್ಣೆ ಬ್ಲ್ಯಾಕ್ ಹೆಡ್ಸ್ ಕಡಿಮೆ ಮಾಡುವ ಶಕ್ತಿ ಹೊಂದಿದೆ. ಶುದ್ಧ ತೆಂಗಿನ ಎಣ್ಣೆಯನ್ನು ಮೂಗಿನ ಮೇಲೆ ಹಚ್ಚಿ. ಎಣ್ಣೆ ಚರ್ಮ ಹೀರಿಕೊಳ್ಳಲು ಬಿಡಿ. ದಿನಕ್ಕೆ ಎರಡರಿಂದ ಮೂರು ಬಾರಿ ಎಣ್ಣೆ ಹಚ್ಚಿ.
  2. ತೆಂಗಿನ ಎಣ್ಣೆ 1 ಟೀ ಚಮಚ ಇದಕ್ಕೆ ಅರ್ಧ ನಿಂಬೆಹಣ್ಣನ್ನು ಹಿಂಡಿ ಮತ್ತು ನಂತರ ಮಿಶ್ರಣವನ್ನು ಮೂಗಿನ ಮೂಲೆಗಳಿಗೆ ಹಚ್ಚಿ . ರಾತ್ರಿಯಿಡೀ ಹಾಗೆಯೇ ಬಿಟ್ಟು ಮರುದಿನ ಬೆಳಿಗ್ಗೆ ತೊಳೆಯಿರಿ.
  3. ಮಲಗುವ ಮುನ್ನಾ ಅಲೋವೆರ ಜೆಲ್ ನ್ನು ಮೂಗಿನ ಮೇಲೆ ಹಚ್ಚಿ. ಇಡೀ ರಾತ್ರಿ ಮೂಗಿನ ಮೇಲೆ ಜೆಲ್ ಹಾಗೇ ಇರಬೇಕು. ನಂತರ ತೊಳೆಯಿರಿ.
  4. ಹತ್ತಿಯ ಸಹಾಯದಿಂದ ಶುದ್ಧ ಜೇನುತುಪ್ಪವನ್ನು ಮೂಗಿನ ಮೇಲೆ ಹಚ್ಚಿ. 30 ನಿಮಿಷದ ಬಳಿಕ ಮೂಗನ್ನು ತೊಳೆಯಿರಿ. ಜೇನುತುಪ್ಪಶುಷ್ಕ ಚರ್ಮದಿಂದ ಕಪ್ಪು ಹೆಚ್ಚಾಗಿ ಉಂಟಾಗುತ್ತದೆ ಮತ್ತು ಜೇನು ತುಪ್ಪವು ಚರ್ಮವನ್ನು ಹಗುರಗೊಳಿಸಲು ಮತ್ತು ತೇವಾಂಶಗೊಳಿಸಲು ಸಹಾಯ ಮಾಡುತ್ತದೆ. ಇದನ್ನು ಮೂಗಿನ ಮೂಲೆಗಳಲ್ಲಿ ಹತ್ತು ನಿಮಿಷಗಳ ಕಾಲ ಹಚ್ಚಿ, ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.
  5. ನಿಂಬೆಯು ವಿಟಮಿನ್ ಸಿಯಿಂದ ತುಂಬಿದೆ. ಇದು ಮೂಗಿನ ಕಪ್ಪು ಮೂಲೆಗಳನ್ನು ಹಗುರಗೊಳಿಸಲು ಸಹಾಯ ಮಾಡುತ್ತದೆ. ಕೆಲವು ಸೆಕೆಂಡುಗಳ ಕಾಲ ಕಪ್ಪು ಕಲೆಗಳ ಮೇಲೆ ನಿಂಬೆ ರಸವನ್ನು ಉಜ್ಜಿ. ಒಣಗಿದ ನಂತರ, ತಂಪಾದ ನೀರಿನಿಂದ ಮೂಗನ್ನು ತೊಳೆಯಿರಿ.
  6. ಮೊಟ್ಟೆಯ ಬಿಳಿಭಾಗ ತೆಗೆದುಕೊಳ್ಳಿ ಮತ್ತು ಮೂಗಿಗೆ ಬಿಳಿ ಭಾಗವನ್ನು ಹಚ್ಚಿ. ಒಣಗಿದ ನಂತರ, ಅದನ್ನು ತಣ್ಣೀರಿನಿಂದ ತೊಳೆಯಿರಿ.
  7. ಟೊಮೆಟೊ ಪ್ಯೂರಿ ಮಾಡಿ ಮೂಗಿನ ಸುತ್ತಲಿನ ಚರ್ಮದ ಮೇಲೆ 15 ನಿಮಿಷಗಳ ಕಾಲ ಮಸಾಜ್ ಮಾಡಿ ಮತ್ತು ತಣ್ಣೀರಿನಿಂದ ತೊಳೆಯಿರಿ.
  8. ವಿನೆಗರ್1 ಟೀ ಚಮಚ ನೀರಿನಲ್ಲಿ ಕೆಲವು ಹನಿ ವಿನೆಗರ್ ಅನ್ನು ಮಿಕ್ಸ್ ಮಾಡಿ, ಕಾಟನ್ ಪ್ಯಾಡ್ ಸಹಾಯದಿಂದ ವಿನೆಗರ್ ನೀರನ್ನು ಮೂಗಿನ ಮೇಲೆ ಹಚ್ಚಿ, ನಂತರ ತೊಳೆಯಿರಿ.
  9. ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲವಿದೆ, ಇದು ಚರ್ಮವನ್ನು ಬ್ಲೀಚಿಂಗ್ ಮಾಡಲು ಉತ್ತಮ. ಇದನ್ನು ಕೆಲವು ನಿಮಿಷಗಳ ಕಾಲ ಮುಖದ ಮೇಲೆ ಬಿಡಿ ಮತ್ತು ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
  10. 2 ಟೇಬಲ್ ಚಮಚ ಕಿತ್ತಳೆ ತಿರುಳನ್ನು ತೆಗೆದುಕೊಂಡು ಅದನ್ನು ಒಂದು ಚಿಟಿಕೆ ಅರಿಶಿನದೊಂದಿಗೆ ಮಿಕ್ಸ್ ಮಾಡಿ. ಮಲಗುವ ಮೊದಲು ಮಿಶ್ರಣವನ್ನು ಮೂಗಿನ ಮೇಲೆ ಹಚ್ಚಿ ಮತ್ತು ಮರುದಿನ ಬೆಳಗ್ಗೆ ಅದನ್ನು ತೊಳೆಯಿರಿ.

Leave A Reply

Your email address will not be published.