ಅಯೋಧ್ಯೆಯ ಪವಿತ್ರ ನದಿಯಲ್ಲಿ ಗಂಡ ಹೆಂಡತಿಯ ಸರಸ ಸಲ್ಲಾಪ… “ರಾಮ” ಭಕ್ತರು ಮಾಡಿದ್ದೇನು ಗೊತ್ತೇ?
ಎಲ್ಲಿ ಏನು ಮಾಡಬೇಕೋ ಅದನ್ನು ಅಲ್ಲೇ ಮಾಡಿದರೆ ಒಳ್ಳೆಯದು, ಅದು ಉತ್ತಮ ಕೂಡಾ. ಏಕೆಂದರೆ ದೇವರ ಸಾನಿಧ್ಯದ ನದಿಯಲ್ಲಿ ರೋಮ್ಯಾನ್ಸ್ ಮಾಡಿದರೆ ಅಲ್ಲಿ ನೆರೆದ ಜನರಿಗೆ ಏನಾಗಬಹುದು ಹೇಳಿ. ಆದರೆ ಫಜೀತಿ ಆಗಿದಂತೂ ನಿಜ. ಹಾಗಾಗಿ ನಾವು ಮೊದಲೇ ಹೇಳಿದ್ದು ಎಲ್ಲಿ ಯಾವುದು ಮಾಡುವುದು ಉತ್ತಮ ಅಲ್ಲೇ ಮಾಡಿದರೆ ಉತ್ತಮ.
ಉತ್ತರ ಪ್ರದೇಶದ ಅಯೋಧ್ಯೆಯ ಸರಯೂ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಪತ್ನಿಗೆ ಪತಿ ಮಹಾಶಯ ಮುತ್ತು ಕೊಟ್ಟಿದ್ದೇನೆ. ಅಷ್ಟೇ ನೋಡಿ, ಮುತ್ತು ಕೊಟ್ಟಿದ್ದಕ್ಕೆ ಆ ಪತಿ ಮಹಾಶಯನನ್ನು ನಿಂದಿಸಿ ಥಳಿಸಿದ ಘಟನೆ ನಡೆದಿದೆ. ಇದೀಗ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೊದಲ್ಲಿ ಪುರುಷನನ್ನು ತನ್ನ ಹೆಂಡತಿಯಿಂದ ಎಳೆದೊಯ್ದು ಸುತ್ತಮುತ್ತಲಿನ ಹಲವಾರು ಪುರುಷರು ಥಳಿಸಿದ್ದಾರೆ. ಹೆಂಡತಿ ತನ್ನ ಗಂಡನನ್ನು ರಕ್ಷಿಸಲು ಪ್ರಯತ್ನಿಸಿದರೂ, ವಿಫಲವಾಗಿದ್ದಾಳೆ. ಅಯೋಧ್ಯೆಯಲ್ಲಿ ಇಂತಹ ಅಸಭ್ಯತೆಯನ್ನು ಸಹಿಸುವುದಿಲ್ಲ ಎಂದು ಒಬ್ಬ ವ್ಯಕ್ತಿ ಹೇಳುತ್ತಿರುವುದು ಕೇಳಿಬರುತ್ತಿದೆ. ದಂಪತಿಗಳು ಅಂತಿಮವಾಗಿ ಜನಸಮೂಹದಿಂದ ನೀರಿನಿಂದ ಹೊರಹಾಕಲ್ಪಟ್ಟರು.
ಈ ಬಗ್ಗೆ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅಯೋಧ್ಯಾ ಪೊಲೀಸರು ತಿಳಿಸಿದ್ದಾರೆ.
ಸರಯೂ ಗಂಗೆಯ ಏಳು ಉಪನದಿಗಳಲ್ಲಿ ಒಂದಾಗಿದೆ. ಇದನ್ನು ಹಿಂದೂಗಳು ಪವಿತ್ರವೆಂದು ಪರಿಗಣಿಸುತ್ತಾರೆ. ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯು ಸರಯೂ ನದಿಯ ದಡದಲ್ಲಿದೆ.
ಇಂತಹ ಪವಿತ್ರ ದೇವರ ಸಾನಿಧ್ಯದಲ್ಲಿ ಯಾರಿಗೇ ಆದರೂ ದೇವರ ಮೇಲೆ ಭಕ್ತಿ ಭಾವದಿಂದ ಮಿಂದೇಳುತ್ತಾರೆ. ಈ ರೀತಿಯ ರೋಮ್ಯಾಂಟಿಕ್ ವರ್ತನೆಗೆ ಬೇರೆ ಹಲವು ಜಾಗಗಳಿವೆ. ಅದೇ ಉತ್ತಮ ಎನ್ನುವುದು ನಮ್ಮ ಭಾವನೆ.