ಅಫ್ಘಾನಿಸ್ತಾನದಲ್ಲಿ ಭೀಕರ ಭೂಕಂಪ, ಸಾವಿನ ಸಂಖ್ಯೆ 155ಕ್ಕೆ ಏರಿಕೆ !!!
ಪಾಕಿಸ್ತಾನದ ಹಲವು ಭಾಗಗಳಲ್ಲೂ ಕಂಪನ ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ಈ ಭೂಕಂಪದಲ್ಲಿ 155 ಮಂದಿ ಸಾವನ್ನಪ್ಪಿರುವ ಮಾಹಿತಿ ಹೊರಬಿದ್ದಿದೆ. ಇನ್ನು ಪಾಕಿಸ್ತಾನದಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ.
ದೃಢಪಡಿಸಿದ ಹೆಚ್ಚಿನ ಸಾವುಗಳು ಪಕ್ತಿಕಾ ಪ್ರಾಂತ್ಯದಲ್ಲಿ ಸಂಭವಿಸಿದ್ದು, ಅಲ್ಲಿ 100 ಜನರು ಸಾವನ್ನಪ್ಪಿದ್ದಾರೆ ಮತ್ತು 250 ಜನರು ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಆಡಳಿತದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥ ಮೊಹಮ್ಮದ್ ನಾಸಿಮ್ ಹಕ್ಕಾನಿ ಹೇಳಿದ್ದಾರೆ.
ಭೂಕಂಪವು ಪಾಕಿಸ್ತಾನದ ಗಡಿ ಸಮೀಪ ಇರುವ ಖೋಸ್ಟ್ ನಗರದಿಂದ ಸುಮಾರು 44 ಕಿಲೋ ಮೀಟರ್ ದೂರದಲ್ಲಿ ಸಂಭವಿಸಿದೆ. ಭೂಕಂಪ ಕೇವಲ ಅಫ್ಘಾನಿಸ್ತಾನ ಮಾತ್ರವಲ್ಲ ಪಾಕಿಸ್ತಾನದ ಲಾಹೋರ್, ಮುಲ್ತಾನ್, ಕ್ವೆಟ್ಟಾ ಸೇರಿದಂತೆ ಹಲವೆಡೆ ಭೂಕಂಪ ಸಂಭವಿಸಿದೆ. ಕೆಲವು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ್ದ ಪರಿಣಾಮ ಜನರು ಹೆದರಿ ಮನೆಯಿಂದ ಹೊರ ಓಡಿಹೋಗುತ್ತಿರುವ ದೃಶ್ಯ ಕಂಡು ವರದಿ ವಿವರಿಸಿದೆ.
ಅಧಿಕಾರಿಗಳು ಹೆಚ್ಚಿನ ಸಾವುನೋವುಗಳನ್ನು ಪರಿಶೀಲಿಸುತ್ತಿರುವುದರಿಂದ ಪೂರ್ವ ಪ್ರಾಂತ್ಯಗಳಾದ ನಂಗರ್ಹಾರ್ ಮತ್ತು ಖೋಸ್ಟ್ ನಲ್ಲಿಯೂ ಸಾವುಗಳು ವರದಿಯಾಗಿವೆ.