ಯೋಗ ಕಾರ್ಯಕ್ರಮದಲ್ಲಿ ಭಾರತೀಯರ ಮೇಲೆ ಹಲ್ಲೆ, ಯೋಗ ಇಸ್ಲಾಂಗೆ ವಿರುದ್ಧ ಎಂದು ಫಲಕ ಪ್ರದರ್ಶನ!!!

ಮಾಲ್ಡೀವ್ಸ್ ರಾಜಧಾನಿ ಮಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಭಾರತೀಯ ಹೈ ಕಮಿಷನ್, ರಾಷ್ಟ್ರೀಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ ಆಯೋಜಿಸಿದ್ದ ಯೋಗ ಕಾರ್ಯಕ್ರಮಕ್ಕೆ ನುಗ್ಗಿದ ದುಷ್ಕರ್ಮಿಗಳ ಗುಂಪೊಂದು, ಅದಕ್ಕೆ ಅಡ್ಡಿಪಡಿಸಿದೆ. ಜೋರಾಗಿ ಗದ್ದಲವೆಬ್ಬಿಸಿದ ಗುಂಪು, ಅಲ್ಲಿ ಸೇರಿದ್ದ ಜನರನ್ನು ಓಡಿಸಿದೆ.

 

ಕಾರ್ಯಕ್ರಮ ಆರಂಭಕ್ಕೂ ಮುನ್ನ, ಯೋಗ ಇಸ್ಲಾಂ ಧರ್ಮದ ನೀತಿಗಳಿಗೆ ವಿರುದ್ಧ ಎಂದು ಪ್ರತಿಭಟನಾಕಾರರು ಫಲಕಗಳನ್ನು ಪ್ರದರ್ಶಿಸಿದರು. ಯೋಗ ಮಾಡುವುದು ಸೂರ್ಯನನ್ನು ಆರಾಧಿಸುವುದಕ್ಕೆ ಸಮ. ಇದು ಇಸ್ಲಾಮಿಕ್ ಸಂಪ್ರದಾಯಕ್ಕೆ ವಿರುದ್ಧ ಕೃತ್ಯ ಎಂದು ಒಂದು ವರ್ಗದ
ಇಸ್ಲಾಂ ಅನುಯಾಯಿಗಳು ನಂಬಿದ್ದಾರೆ ಎಂಬುದಾಗಿ ಮಾಲ್ಡೀವ್ಸ್ ನ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಸಂದರ್ಭದಲ್ಲಿ ಯುವ, ಕ್ರೀಡಾ ಮತ್ತು ಸಮುದಾಯ ಸಬಲೀಕರಣ ಸಚಿವಾಲಯದ ಸಹಭಾಗಿತ್ವದೊಂದಿಗೆ ಭಾರತೀಯ ಸಾಂಸ್ಕೃತಿಕ ಕೇಂದ್ರ ಯೋಗ ಮತ್ತು ಧ್ಯಾನ ಕಾರ್ಯಕ್ರಮ ಆಯೋಜಿಸಿತ್ತು. ಗುಂಪು ದಾಂಧಲೆ ನಡೆಸಿದ್ದರಿಂದ ಯೋಗ ಅವಧಿಯಲ್ಲಿ ಪಾಲ್ಗೊಂಡಿದ್ದ ಜನರಿಗೆ ಧ್ಯಾನ ಮುಂದುವರಿಸಲು ಸಾಧ್ಯವಾಗಲಿಲ್ಲ.

t

Leave A Reply

Your email address will not be published.