ಮೈಸೂರಿನಲ್ಲಿ ಯೋಗದಿನದ ಪ್ರಯುಕ್ತ ಪಿಎಂ ಮೋದಿ ಯಾವೆಲ್ಲ ಆಸನ ಮಾಡಿದ್ದಾರೆ ? ಇಲ್ಲಿದೆ ನೋಡಿ

ಮೈಸೂರು ಅರಮನೆ ಇಂದು ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಜರುಗಿದ ವಿಶ್ವ ಯೋಗ ದಿನಾಚರಣೆಯ ಸಮಾರಂಭ ಜರುಗಿತು.

 

ಮೋದಿ ನೇತೃತ್ವದಲ್ಲಿ 45 ನಿಮಿಷ ಕಾಲ ನಡೆದ ಸಾಮೂಹಿಕ ಯೋಗಕ್ಕೆ ಮೈಸೂರು ಸಾಕ್ಷಿಯಾಯಿತು. ಸರಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಯೋಗಪಟುಗಳು ಅರಮನೆ ಆವರಣದಲ್ಲಿ ಯೋಗಾಭ್ಯಾಸ ಮಾಡಿ ಐತಿಹಾಸಿಕ ದಾಖಲೆ ಬರೆದರು.

ಬೆಳಗ್ಗೆ 7ರಿಂದ 7.45ರ ವರೆಗೆ ಒಟ್ಟು 19 ಆಸನಗಳು ಪ್ರದರ್ಶನಗೊಂಡವು. ಇದರಲ್ಲಿ ಮೊದಲ ಒಂದು ನಿಮಿಷ ಪ್ರಾರ್ಥನೆ, 4 ನಿಮಿಷ ಚಲನಕ್ರಿಯೆ, 25 ನಿಮಿಷ ತಾಡಾಸನ, ವೃಕ್ಷಾಸನ, ಪಾದಹಸ್ತಾಸನ-1, ಪಾದಹಸ್ತಾಸನ-2, ಅರ್ಧಚಕ್ರಾಸನ, ತ್ರಿಕೋನಾಸನ, ಸಮದಂಡಾಸನ, ಭದ್ರಾಸನ, ವಜ್ರಾಸನ, ಅರ್ಧಉಷ್ಟ್ರಾಸನ, ಉಷ್ಟ್ರಾಸನ, ಶಶಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧಹಲಾಸನ, ಪವನಮುಕ್ತಾಸನ, ಶವಾಸನ ಪ್ರದರ್ಶನ ನಡೆಯಲಿವೆ. ಬಳಿಕ 14 ನಿಮಿಷ ಪ್ರಾಣಾಯಾಮ, ಧ್ಯಾನ, ಸಂಕಲ್ಪ. ಒಂದು ನಿಮಿಷ ಶಾಂತಿಮಂತ್ರ, ಎರಡು ನಿಮಿಷ ಸಂಕಲ್ಪ ಹೀಗೆ ಒಟ್ಟು 19 ಆಸನಗಳ ಪ್ರದರ್ಶನ ನಡೆಯಿತು.

ಅಂತರಾಷ್ಟ್ರೀಯ ಯೋಗ ದಿನದ ಕುರಿತು ಮಾತನಾಡಿದ ಮೋದಿ ಇಂದು ವಿಶ್ವದಲ್ಲಿರುವ ಪ್ರತಿ ಮನೆ ಮನೆಗೂ ಯೋಗಾ ತಲುಪಿದೆ. ಯೋಗವೆಂಬುದು ಸ್ವಾಭಾವಿಕ ಸಹಜ ಮಾನವೀಯ ಚೈತನ್ಯವಾಗಿದೆ. ಕೊರೋನಾ ನಂತರ ಎರಡು ವರ್ಷಗಳ ಬಳಿಕ ಮತ್ತೆ ಯೋಗ ಪರ್ವ ಆರಂಭವಾಗಿದೆ ಎಂದರು. ಯೋಗವು ಸಮಾಜಕ್ಕೆ ವ್ಯಕ್ತಿಗೆ ಮತ್ತು ವಿಶ್ವಶಾಂತಿಗೆ ಉಪಯುಕ್ತವಾಗಿದ್ದು ಯೋಗ ನಮಗೆಲ್ಲರಿಗೂ ಸಮಸ್ಯೆ ನಿವಾರಕ ಎಂದರು. ಯೋಗವನ್ನು ಅರಿತುಕೊಳ್ಳುವುದು ಅಷ್ಟೇ ಅಲ್ಲ ಅದನ್ನು ಜೀವಿಸಬೇಕು, ಆತ್ಮೀಯವನ್ನಾಗಿಸಿ ಕೊಳ್ಳಬೇಕು. ಕೇವಲ ದಿನ ಮಾತ್ರವಲ್ಲದೆ ಎಲ್ಲ ದಿನವೂ ಕೂಡ ಯೋಗದ ಮೂಲಕ ಸ್ವಾಸ್ಥ್ಯ, ಸುಖ ಮತ್ತು ಶಾಂತಿಯನ್ನು ಅನುಭವಿಸಬೇಕು ಎಂದು ಸಲಹೆ ನೀಡಿದರು.

Leave A Reply

Your email address will not be published.